ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತೀಯರು ರೋಹಿತ್ ಮಾಡಿದ ಎಡವಟ್ಟನ್ನು ಮರೆತಿಲ್ಲ. ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಏನಾಗಿದೆ ಗೊತ್ತೇ??

ಪಂದ್ಯ ಗೆದ್ದ ಖುಷಿಯಲ್ಲಿರುವ ಭಾರತೀಯರು ರೋಹಿತ್ ಮಾಡಿದ ಎಡವಟ್ಟನ್ನು ಮರೆತಿಲ್ಲ. ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಏನಾಗಿದೆ ಗೊತ್ತೇ??

ನಿನ್ನೆ ನಡೆದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯದಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ಚೆನ್ನಾಗಿತ್ತು, ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 159 ರನ್ ಗಳಿಸಿತು, ಈ ಸ್ಕೋರ್ ಮಾಡಲು ಬಂದ ಭಾರತ ತಂಡ ಆರಂಭದಲ್ಲೇ ಮುಗ್ಗುರಿಸಿತು. ಓಪನರ್ ಗಳಾಗಿ ಬಂದ ಕ್ಯಾಪ್ಟನ್ ರೋಹಿತ್ ಮತ್ತು ಕೆ.ಎಲ್.ರಾಹುಲ್ ಇಬ್ಬರು ಸಹ ಬಹಳ ಬೇಗ ವಿಕೆಟ್ ಅನ್ನು ಕೈಚೆಲ್ಲಿದರು. ಮೂರು ಓವರ್ ಕಳೆಯುವುದರೊಳಗೆ ಇವರಿಬ್ಬರ ವಿಕೆಟ್ ಕಳಚಿ ಬಿದ್ದಿತು. ರೋಹಿತ್ ಶರ್ಮ ಅವರು ಎದುರಿಸಿದ 7 ಎಸೆತಗಳಲ್ಲಿ, ಕೇವಲ 4 ರನ್ ಗಳಿಸಿ ವಿಕೆಟ್ ನೀಡಿದರು.

ಹ್ಯಾರಿಸ್ ಅವರ ಬೌಲಿಂಗ್ ನಲ್ಲಿ ರೋಹಿತ್ ಬೀಸಿದ ಬ್ಯಾಟ್ ಔಟ್ ಸೈಡ್ ಎಡ್ಜ್ ಆಯಿತು. ಆ ಕ್ಯಾಚ್ ಅನ್ನು ಇಫ್ತಿಖರ್ ಸುಲಭವಾಗಿ ಹಿಡಿದರು. ರೋಹಿತ್ ಶರ್ಮ ಅವರ ವಿಕೆಟ್ ಹೋಗಿದ್ದು ಭಾರತ ತಂಡಕ್ಕೆ ಶಾಕ್ ನೀಡಿತು, ಎರಡನೇ ಓವರ್ ನಲ್ಲಿಯೇ ಪೆವಿಲಿಯನ್ ಗೆ ತೆರಳಿದರು ಹಿಟ್ ಮ್ಯಾನ್ ರೋಹಿತ್ ಶರ್ಮಾ. ಇವರು ಕ್ಯಾಪ್ಟನ್ ಸಹ ಆಗಿರುವ ಕಾರಣ, ರೋಹಿತ್ ಶರ್ಮಾ ಅವರ ಮೇಲೆ ನಿರೀಕ್ಷೆಗಳು ಸಹ ಹೆಚ್ಚಾಗಿವೆ. ಆದರೆ ಅವರು ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಸಹಾಯ ಮಾಡುತ್ತಿಲ್ಲ ಎನ್ನುವ ಅಸಮಾಧಾನ ಅಭಿಮಾನಿಗಳಲ್ಲಿ ಇದೆ. ರೋಹಿತ್ ಶರ್ಮ ಅವರು ಪ್ರತಿ ಮ್ಯಾಚ್ ನಲ್ಲೂ ಹೀಗೆ ಎಡವಟ್ಟು ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.

ರೋಹಿತ್ ಶರ್ಮ ಅವರು ಎಷ್ಟೇ ಮ್ಯಾಚ್ ಗಳನ್ನಾಡಿದರು ಸಹ ಫಾರ್ಮ್ ಕಂಡುಕೊಳ್ಳುತ್ತಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ಹೀಗೆ ಫಾರ್ಮ್ ನಲ್ಲಿ ಇಲ್ಲದ ಆಟಗಾರನನ್ನು ತಂಡದ ಕ್ಯಾಪ್ಟನ್ ಆಗಿ ಯಾಕೆ ಆಯ್ಕೆ ಮಾಡಬೇಕು? ಹೀಗೆ ಆದರೆ ಕಷ್ಟ ಆಗುತ್ತದೆ, ರೋಹಿತ್ ಶರ್ಮಾ ಅವರು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಒಳಗಾದರು ಫಾರ್ಮ್ ಕಂಡುಕೊಳ್ಳಬಕು ಎಂದು ಒಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ. ರೋಹಿತ್ ಶರ್ಮಾ ನೀವು ನನ್ನನ್ನು ನಿರಾಶೆಗೊಳಿಸಿದಿರಿ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ರೋಹಿತ್ ಶರ್ಮಾ ಅವರು ಚೆನ್ನಾಗಿಯೇ ಪ್ರಾಕ್ಟಿಸ್ ಮಾಡಿದ್ದರು, ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದರು, ಆದರೆ ಕೊನೆಗೆ ವಿಕೆಟ್ ಚೆಲ್ಲಿದರು, ಎಂದು ಟ್ವಿಟರ್ ನಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು ರೋಹಿತ್ ಶರ್ಮಾ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.