ತಾನೇ ನಿಂತು ಪಂದ್ಯ ಗೆಲ್ಲಿಸಿಕೊಟ್ಟರು, ಕೊನೆಯಲ್ಲಿ ಕ್ಲಾಸ್ ಆಟದ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತೇ?? ಕನ್ಫ್ಯೂಸ್ ಆದ ಫ್ಯಾನ್ಸ್.

ತಾನೇ ನಿಂತು ಪಂದ್ಯ ಗೆಲ್ಲಿಸಿಕೊಟ್ಟರು, ಕೊನೆಯಲ್ಲಿ ಕ್ಲಾಸ್ ಆಟದ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತೇ?? ಕನ್ಫ್ಯೂಸ್ ಆದ ಫ್ಯಾನ್ಸ್.

ನಿನ್ನೆ ನಡೆದ ಅತ್ಯಂತ ರೋಚಕವಾದ ಭಾರತ ವ4ಶಾಸ್ ಪಾಕಿಸ್ತಾನ್ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಅತ್ಯದ್ಭುತ ಪ್ರದರ್ಶನ ನೀಡಿದರು. ಕೆಲ ವರ್ಷಗಳಿಂದ ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ಕೋಹ್ಲಿ ಅವರು ಏಷ್ಯಾಕಪ್ ಕಪ್ ಇಂದ ಕಂಬ್ಯಾಕ್ ಮಾಡಿ, ವಿಶ್ವಕಪ್ ಮೊದಲ ಪಂದ್ಯದಲ್ಲಿ ಧಮಾಕ ಮಾಡ್ದಿದ್ದಾರೆ. ಪಂದ್ಯದಲ್ಲಿ ಬಹಳಷ್ಟು ಒತ್ತ ಇತ್ತು, ನಿನ್ನೆಯ ಪಂದ್ಯ ಬಹುತೇಕ ಪಾಕಿಸ್ತಾನ್ ಕಡೆಗಿತ್ತು. ಆದರೆ, ಅಂತಹ ಕೃಷಿಯಲ್ ಪಂದ್ಯವನ್ನು ಭಾರತದ ಕಡೆಗೆ ತಿರುಗಿಸಿದವರು ಕೋಹ್ಲಿ, ಇವರನ್ನು ಚೇಸ್ ಕಿಂಗ್ ಎಂದು ಕರೆಯುವುದು ಯಾಕೆ ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಕಿಂಗ್ ಕೋಹ್ಲಿ.

ಕೊನೆಯ 8 ಎಸೆತಗಳಲ್ಲಿ ಭಾರತ ತಂಡಕ್ಕೆ ಬೇಕಿದ್ದದ್ದು ಬರೋಬ್ಬರಿ 28 ರನ್ ಗಳು, ಅಂತಹ ಘಟ್ಟದಲ್ಲಿ ವಿರಾಟ್ ಅವರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಭಾರಿಸಿ ಪಂದ್ಯವನ್ನು ಭಾರತದ ಕಡೆಗೆ ತಂದರು. ನಿನ್ನೆಯ ಮ್ಯಾಚ್ ನಲ್ಲೋ ಅದ್ಭುತವಾದ ಪ್ರದರ್ಶನ ನೀಡಿದ ನಂತರ, ಕೋಹ್ಲಿ ಅವರು ಹೇಳಿದ್ದು ಹೀಗೆ.. “ಇದೊಂದು ಬಹಳ ಸುಂದರವಾದ ವಾತಾವರಣ ಆಗಿದೆ. ಇದು ಹೇಗೆ ಆಯ್ತು ಎಂದು ನನಗೂ ಕೂಡ ಅರ್ಥ ಆಗುತ್ತಿಲ್ಲ. ಹೇಳೋದಕ್ಕೆ ಪದಗಳೇ ಸಿಗ್ತಾ ಇಲ್ಲ. ನಾವು ಈ ಪಂದ್ಯವನ್ನ ಗೆಲ್ಲುತ್ತೇವೆ ಎಂದು ಹಾರ್ದಿಕ್ ನಂಬಿದ್ದರು, ನಾವಿಬ್ಬರು ಕೊನೆಯವರೆಗು ಇದ್ದರೆ ಗೆಲ್ಲುತ್ತೇವೆ ಎಂದು ಅರ್ಥಮಾಡಿಕೊಂಡಿಕೊಂಡೆವು. ಪೆವಿಲಿಯನ್ ಕೊನೆಯಿಂದ ಶಾಹಿನ್ ಅವರು ಬೌಲಿಂಗ್ ಮಾಡಲು ಶುರು ಮಾಡಿದಾಗ, ಅವರನ್ನು ಕಟ್ಟಿಹಾಕಬೇಕು ಎಂದು ನಿರ್ಧಾರ ಮಾಡಿದೆವು..

ಅವರ ಮುಖ್ಯ ಬೌಲರ್ ಹ್ಯಾರಿಸ್ ಅವರು, ಆತ ಬೌಲಿಂಗ್ ಮಾಡಿದಾಗ ನಾನು ಬ್ಯಾಕ್ ಟು ಬ್ಯಾಕ್ ಸಿಕ್ಸ್ ಹೊಡೆದು, 8 ಎಸೆತಕ್ಕೆ 28 ರನ್ ಬೇಕಿದ್ದ ಸ್ಕೋರ್ ಅನ್ನು, 6 ಎಸೆತಕ್ಕೆ 16 ಬರುವ ಹಾಗೆ ಮಾಡಿದೆ. ಮೊದಲ ಬಾಲ್ ಸ್ಲೋ ಬಾಲ್ ಆಗಿತ್ತು, ಹಿಂದೆ ನಿಂತು ನಾನು ಈ ಬಾಲ್ ಹೀಗೆ ಆಗಬೇಕು ಎಂದು ಯೋಚಿಸಿದ್ದೆ..” ಎಂದಿದ್ದಾರೆ ವಿರಾಟ್. “ಇಲ್ಲಿಯವರೆಗೂ ಮೊಹಾಲಿಯ ಇನ್ನಿಂಗ್ಸ್ ನನ್ನ ಬೆಸ್ಟ್ ಇನ್ನಿಂಗ್ಸ್ ಎಂದುಕೊಂಡಿದ್ದೇ. ಆದರೆ ಈ ಮ್ಯಾಚ್ ಅನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಾರ್ದಿಕ್ ಪಾಂಡ್ಯ ನನಗೆ ಸಪೋರ್ಟ್ ಮಾಡುತ್ತಲೇ. ನೀವೆಲ್ಲರು ನನ್ನ ಬೆಂಬಲವಾಗಿ ನಿಂತಿದ್ರಿ, ನಿಮ್ಮ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ..” ಎಂದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ವಿರಾಟ್.