ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ನಲ್ಲಿ ಪಾಕ್ ಅನ್ನು ಒಬ್ಬನೇ ನಿಂತು ಬಗ್ಗು ಬಡಿದ ಕೊಹ್ಲಿ ಬಗ್ಗೆ, ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಹೇಳಿದ್ದೆ ಬೇರೆ.

1,600

Get real time updates directly on you device, subscribe now.

ನಿನ್ನೆ ನಡೆದ ಇಂಡಿಯಾ ಪಾಕಿಸ್ತಾನ್ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರ ಭರ್ಜರಿ ಇನ್ನಿಂಗ್ಸ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪಾಕಿಸ್ತಾನ್ ತಂಡ ಮೇಲುಗೈ ಸಾಧಿಸುತ್ತಾ, ಭಾರತ ತಂಡ ಹೆಚ್ಚು ಒತ್ತಡದಲ್ಲಿದ್ದ ಸಮಯದಲ್ಲಿ ವಿರಾಟ್ ಕೋಹ್ಲಿ ಅವರು 82 ರನ್ ಗಳಿಸಿ, ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡಿ, ಭಾರತದ ಗೆಲುವಿಗೆ ಮುಖ್ಯ ಕಾರಣವಾದರು. ಕೋಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಜೊತೆಯಾಟ ಸಹ ಉತ್ತಮ ಮೆಚ್ಚುಗೆಗೆ ಪಾತ್ರವಾಯಿತು. ಎದುರಾಳಿ ತಂಡದ ಬೌಲರ್ಸ್ ಗಳು ಭಯ ಬೀಳುವ ಹಾಗೆ ಬೌಂಡರಿ ಸಿಕ್ಸರ್ ಭಾರಿಸಿದ ವಿರಾಟ್ ಅವರ ಈ ವಿರಾಟ ರೂಪದ ಬಗ್ಗೆ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..

“ಇದು ವಿರಾಟ್ ಅವರ ಬೆಸ್ಟ್ ಇನ್ನಿಂಗ್ಸ್ ಗಳಲ್ಲಿ ಒಂದು ಎಂದು ಹೇಳಬಹುದು. ನಾವಿದ್ದ ಪರಿಸ್ಥಿತಿಯಲ್ಲಿ ಗೆದ್ದು ಬಂದಿರುವುದು ಸಂತೋಷದ ವಿಚಾರ. 13 ಓವರ್ ಗಳಾಗುವವರೆಗು ನಾವು ಬಹಳ ಹಿಂದೆ ಇದ್ದೆವು, ಬೇಕಾಗಿದ್ದ ರನ್ ರೇಟ್ ಜಾಸ್ತಿಯಾಗುತ್ತಲೇ ಇತ್ತು, ಅಲ್ಲಿಂದ ವಿರಾಟ್ ಅವರು ಚೇಸ್ ಮಾಡಿದ ರೀತಿ ಬ್ರಿಲಿಯಂಟ್ ಆಗಿತ್ತು. ಹಾರ್ದಿಕ್ ಪಾಂಡ್ಯ ಅವರು ಸಹ ಉತ್ತಮ ಪ್ರದರ್ಶನ ನೀಡಿದರು. ಇವರಿಬ್ಬರು ಹಲವು ಮ್ಯಾಚ್ ಗಳಲ್ಲಿ ಒತ್ತಡ ಪರಿಸ್ಥಿತಿಯನ್ನು ಎದುರಿಸಿದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಎಂದು ಅವರಿಬ್ಬರಿಗೆ ಚೆನ್ನಾಗಿ ಗೊತ್ತು, ಅದೇ ರೀತಿ ಉತ್ತಮವಾಗಿ ಆಡಿದ್ದಾರೆ. ಕೋಹ್ಲಿ ಅವರು ತಮ್ಮ ಇಷ್ಟು ವರ್ಷದ ಅನುಭವಗಳನ್ನು ಅದ್ಭುತವಾಗಿ ಬಳಸಿಕೊಂಡರು. ಒತ್ತಡದ ಪರಿಸ್ಥಿತಿಯಲ್ಲೂ ಕಾಮ್ ಆಗಿದ್ದರು, ಅವರು ಹೇಗೆ ರನ್ಸ್ ಗಳಿಸುತ್ತಾರೆ ಎಂದು ನಮ್ಮೆಲ್ಲರಿಗೂ ಗೊತ್ತಿದೆ.

ವಿರಾಟ್ ಅವರು ವಿಶ್ವದ ಶ್ರೇಷ್ಠ ಚೇಸರ್ಸ್ ಗಳಲ್ಲಿ ಒಬ್ಬರು. ವಿರಾಟ್ ಮತ್ತು ಹಾರ್ದಿಕ್ ಪಾಂಡ್ಯ ಪಾರ್ಟ್ನರ್ಶಿಪ್ ಪಂದ್ಯವನ್ನು ನಮ್ಮ ಕಡೆಗೆ ಬದಲಾಯಿಸಿದ ಕ್ಷಣವಾಗಿತ್ತು. ವಿರಾಟ್ ಕೋಹ್ಲಿ ಅವರು ಫಾರ್ಮ್ ನಲ್ಲಿರದೆ ಕಷ್ಟಪಡುತ್ತಿದ್ದರು ಎಂದು ನನಗೆ ನಿಜವಾಗಲೂ ಅನ್ನಿಸುವುದಿಲ್ಲ. ಅವರ ವಿಚಾರದಲ್ಲಿ ನಮ್ಮ ನಿರೀಕ್ಷೆ ಹೆಚ್ಚು, 30 ಅಥವಾ 40ರನ್ ಗಳ ಒಳ್ಳೆಯ ಸ್ಕೋರ್ ಮಾಡಿದರು ಸಹ ಅವರ ಬಗ್ಗೆ ಮಾತನಾಡುತ್ತೇವೆ. ಕೋಹ್ಲಿ ಅವರು ಏಷ್ಯಾಕಪ್ ಗಿಂತ ಮೊದಲು ಒಂದು ತಿಂಗಳ ಸಮಯ ತೆಗೆದುಕೊಂಡು ವಿಶ್ರಾಂತಿ ಪಡೆದು, ಫ್ರೆಶ್ ಆಗಿ ಏಷ್ಯಾಕಪ್ ಮೂಲಕ ತಂಡಕ್ಕೆ ಮರಳಿ ಬಂದರು. ಏಷ್ಯಾಕಪ್ ನಲ್ಲಿ ಸೆಂಚುರಿ ಭಾರಿಸಿದರು, ಕೆಲವು ಇನ್ನಿಂಗ್ಸ್ ಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದೇ ಈಗಲೂ ಮುಂದುವರೆದಿದ್ದು, ವರ್ಲ್ಡ್ ಕಪ್ ನಲ್ಲಿ ಇನ್ನು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ..” ಎಂದಿದ್ದಾರೆ ರೋಹಿತ್ ಶರ್ಮಾ. ನಿನ್ನೆಯ ಪಂದ್ಯದಲ್ಲಿ ಅಂತಹ ಒತ್ತಡದ ಪರಿಸ್ಥಿತಿಯಲ್ಲಿ, 53 ಎಸೆತಗಳಲ್ಲಿ 82 ರನ್ ಸಿಡಿಸಿ ಪಂದ್ಯ ಗೆಲ್ಲಿಸುವುದು ಸುಲಭದ ಕೆಲಸ ಆಗಿರಲಿಲ್ಲ, ಅದನ್ನು ವಿರಾಟ್ ಕೋಹ್ಲಿ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

Get real time updates directly on you device, subscribe now.