ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದು ಕೊಟ್ಟ ಕೊಹ್ಲಿ ಬಗ್ಗೆ ಪಂದ್ಯ ಮುಗಿದ ಬಳಿಕ ಪಾಕ್ ನಾಯಕ ಬಾಬರ್ ಹೇಳಿದ್ದೇನು ಗೊತ್ತೇ??

ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದು ಕೊಟ್ಟ ಕೊಹ್ಲಿ ಬಗ್ಗೆ ಪಂದ್ಯ ಮುಗಿದ ಬಳಿಕ ಪಾಕ್ ನಾಯಕ ಬಾಬರ್ ಹೇಳಿದ್ದೇನು ಗೊತ್ತೇ??

ಎಲ್ಲರೂ ಕಾದು ಕುಳಿತಿದ್ದ ಭಾರತ ವರ್ಸಸ್ ಪಾಕಿಸ್ತಾನ್ ಪಂದ್ಯ ನಿನ್ನೆ ಅಸ್ಟ್ರೇಲಿಯಾದ ಎಂಸಿಜಿ ಮೈದಾನದಲ್ಲಿ ನಡೆಯಿತು. ನಿನ್ನೆಯ ಪಂದ್ಯ ಅದೆಷ್ಟು ರೋಚಕವಾಗಿತ್ತೆಂದರೆ, ಭಾರತದ ಆ ಗೆಲುವು ಪ್ರತಿಯೊಬ್ಬರನ್ನು ಬಹಳ ಸಂತೋಷಗೊಳಿಸಿದವು. ನಿನ್ನೆ ಗಿರತ್ ಕೋಹ್ಲಿ ಅವರ ವಿರಾಟ ಪ್ರದರ್ಶನ ಅಭಿಮಾನಿಗಳು ಸಂತೋಷದಲ್ಲಿ ಕುಣಿಯುವ ಹಾಗೆ ಮಾಡಿದರೆ, ಎದುರಾಳಿ ತಂಡಗಳಿಗೆ ಕೋಹ್ಲಿ ಅವರ ಫಾರ್ಮ್ ನೋಡಿ ನಡುಕ ಶುರುವಾಗಿದೆ ಎನ್ನಬಹುದು. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್, 20 ಓವರ್ ಗಳಲ್ಲಿ 8 ವಿಕೆಟ್ ಗಳ ನಷ್ಟಕ್ಕೆ 159 ರನ್ ಗಳಿಸಿತು. ಈ ಸ್ಕೋರ್ ಚೇಸ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ.

ಬಹಳ ಬೇಗ ಓಪನರ್ ಗಳ ವಿಕೆಟ್ ಕಳೆದುಕೊಂಡಿತು, ಕೆ.ಎಲ್.ರಾಹುಲ್ 4 ರಾಮ್ ಗಳಿಸಿ ಔಟ್ ಆದರೆ, ರೋಹಿತ್ ಶರ್ಮಾ 7 ರನ್ ಗಳಿಸಿ ಔಟ್ ಆದರು. 3ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೋಹ್ಲಿ ಅವರು ಭರ್ಜರಿ ಪ್ರದರ್ಶನ ನೀಡಿದರು. 53 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಗಳ ಮೂಲಕ ಬರೊಬ್ಬರಿ 82 ರನ್ ಸಿಡಿಸಿದರು. ಬೇರೆ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡಲು ಆಗದೆ ಹೋದಾಗ, ವಿರಾಟ್ ಅವರೇ ಏಕಾಂಗಿಯಾಗಿ ಹೋರಾಟ ಮಾಡಿ, ಪಂದ್ಯ ಗಳಿಸಿದರು, ಕೋಹ್ಲಿ ಅವರ ಈ ಪ್ರದರ್ಶನ ಕಂಡು, ಪಾಕಿಸ್ತಾನ್ ತಂಡದ ಕ್ಯಾಪ್ಟನ್ ಬಾಬರ್ ಅಜಂ ಅವರು ಹೇಳಿದ್ದೇನು ಗೊತ್ತಾ?

“ನಮ್ಮ ಬೌಲರ್ ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು, ಎಲ್ಲಾ ಮೆಚ್ಚುಗೆ ಕೋಹ್ಲಿ ಮತ್ತು ಪಾಂಡ್ಯಗೆ ಹೋಗಬೇಕು. ಹೊಸ ಬಾಲ್ ನಲ್ಲಿ ಆಡುವುದು ಸುಲಭವಲ್ಲ, ನಮಗೆ 10 ಓವರ್ ಗಳ ನಂತರ ಪಾರ್ಟ್ನರ್ಶಿಪ್ ಇತ್ತು, ನಮಗೆ ಅವಕಾಶವು ಇತ್ತು, ಆದರೆ ಎಲ್ಲಾ ಕ್ರೆಡಿಟ್ಸ್ ವಿರಾಟ್ ಕೋಹ್ಲಿ ಅವರಿಗೆ ಹೋಗಬೇಕು. ಒಂದು ವಿಕೆಟ್ ಪಡೆಯಲು ಮಧ್ಯದಲ್ಲಿ ಒಬ್ಬ ಸ್ಪಿನ್ನರ್ ತಂದೆವು, ಇಫ್ತಿಯಾರ್ ಮತ್ತು ಶಾನ್ ಉತ್ತಮ ಪ್ರದರ್ಶನ ನೀಡಿದರು. ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ನಡೆಯುವಾಗ ಒತ್ತಡ ಬಹಳ ಹೆಚ್ಚಾಗಿರುತ್ತದೆ. ಕೋಹ್ಲಿ ಅವರು ಆ ಒತ್ತಡಗಳನ್ನು ಮೀರಿ ತಮ್ಮ ಇನ್ನಿಂಗ್ಸ್ ಅನ್ನು ಅದ್ಭುತವಾಗಿ ಕಟ್ಟಿದರು, ಆ ಕಾರಣದಿಂದಲೇ ಅವರು ದೊಡ್ಡ ಆಟಗಾರ. ಅವರ ಇನ್ನಿಂಗ್ಸ್ ಪಂದ್ಯದ ದಿಕ್ಕನ್ನೇ ಬದಲಿಸಿತು, ಆರಂಭದಲ್ಲಿ ಅವರು ಕಷ್ಟಪಡುತ್ತಿದ್ದರು, ಆದರೆ ನಂತರ ಅವರು ಆಡಿದ ರೀತಿ ಅವರ ಆತ್ಮವಿಶ್ವಾಸ ಹೆಚ್ಚಿಸಿದೆ, ಈ ಥರದ ಇನ್ನಿಂಗ್ಸ್ ಗೆದ್ದಾಗ, ಆತ್ಮವಿಶ್ವಾಸ ಹೆಚ್ಚಾಗುತ್ತದೆ..”ಎಂದು ಕೋಹ್ಲಿ ಅವರನ್ನು ಹೊಗಳಿದ್ದಾರೆ ಬಾಬರ್ ಅಜಂ.