ದೀಪಾವಳಿ ದಿನ ಎಷ್ಟು ದೀಪಗಳನ್ನು ಬೆಳಗಿಸಿದರೆ ಬಹಳ ಒಳ್ಳೆಯದಾಗುತ್ತದೆ ಗೊತ್ತೇ?? ಇಷ್ಟು ದೀಪಗಳನ್ನು ಸರಿಯಾಗಿ ಬೆಳಗಿಸಿ ಸಾಕು.
ದೀಪಾವಳಿ ದಿನ ಎಷ್ಟು ದೀಪಗಳನ್ನು ಬೆಳಗಿಸಿದರೆ ಬಹಳ ಒಳ್ಳೆಯದಾಗುತ್ತದೆ ಗೊತ್ತೇ?? ಇಷ್ಟು ದೀಪಗಳನ್ನು ಸರಿಯಾಗಿ ಬೆಳಗಿಸಿ ಸಾಕು.
ಹಿಂದಿನ ಕಾಲದಲ್ಲಿ ವಿದ್ಯುತ್ ಶಕ್ತಿ ಅಥವಾ ಸೋಲಾರ್ ಎನರ್ಜಿ ಬಳಕೆಯಲ್ಲಿ ಇರಲಿಲ್ಲ. ಆಗೆಲ್ಲಾ ಜನರು ಸೀಮೆ ಎಣ್ಣೆ ಬಳಸಿ, ಅಥವಾ ತುಪ್ಪ ಅಥವಾ ಎಣ್ಣೆ ಬಳಸಿ ದೀಪಗಳನ್ನು ಹಚ್ಚುತ್ತಿದ್ದರು. ಈಗಿನ ಕಾಲದಲ್ಲಿ ದೀಪಾವಳಿ ಹಬ್ಬದಲ್ಲಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ದೀಪ ಹಚ್ಚುವುದನ್ನು ನೋಡುತ್ತೇವೆ. ಮಣ್ಣಿನಲ್ಲಿ ಮಾಡಿರುವ ದೀಪಗಳನ್ನು ಹಚ್ಚಿದರೆ ಮಾತ್ರ ಒಳ್ಳೆಯದು ನಡೆಯುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಮಣ್ಣು ಎನ್ನುವುದು ನಮಗೆ ಸಿಕ್ಕಿರುವುದು ಈ ಪರಿಸರದಿಂದ, ಮಣ್ಣು ನಮಗೆ ಪರಿಸರದ ಕೊಡುಗೆ.
ಬೆಳಕಿನ ಹಬ್ಬ ದೀಪಾವಳಿಯಲ್ಲಿ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತರಲು ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ಮತ್ತೊಂದು ಅರ್ಥದಲ್ಲಿ ದೀಪಾವಳಿ ಹಬ್ಬದ ಕತ್ತಲೆಯನ್ನು ಅಜ್ಞಾನ ಎಂದು ಬಿಂಬಿಸಲಾಗುತ್ತದೆ. ನಮ್ಮ ಅಕ್ಕ ಪಕ್ಕ ಸುತ್ತ ಮುತ್ತ ಇರುವ ಅಜ್ಞಾನವನ್ನು ತೊಲಗಿಸಿ ಜ್ಞಾನ ಎನ್ನುವ ದೀಪವನ್ನು ಹಚ್ಚಿ, ಒಳ್ಳೆಯದನ್ನು ಬರಮಾಡಿಕೊಳ್ಳಬೇಕು ಎಂದು ಹಿರಿಯರು ಹೇಳುತ್ತಾರೆ. ದೀಪಾವಳಿ ಹಬ್ಬಕ್ಕಾಗಿ ಮನೆಯಲ್ಲಿ ತಯಾರಿ ಮಾಡಿಕೊಳ್ಳುವಾಗ, ನಿಮ್ಮ ಮನೆಯಲ್ಲಿ 13 ದೀಪಗಳು ಇದೆಯೇ ಎಂದು ಪರೀಕ್ಷೆ ಮಾಡಿಕೊಳ್ಳಿ. 13ಕ್ಕಿಂತ ಹೆಚ್ಚಿಗೆ ಇರಬಾರದು, ಅದಕ್ಕಿಂತ ಕಡಿಮೆಯು ಇರಬಾರದು. ದೀಪಾವಳಿ ಹಬ್ಬದ ದಿನ 13 ದೀಪಗಳನ್ನೇ ಹಚ್ಚುವುದು ಯಾಕೆ ಎಂದು ಈಗ ನಿಮಗೆ ತಿಳಿಸುತ್ತೇವೆ.. ದೀಪಾವಳಿ ಹಬ್ಬದ ವೇಳೆ, ಮಣ್ಣಿನ ದೀಪಗಳಲ್ಲಿ ಮೊದಲ ದೀಪವನ್ನು ನಿಮ್ಮ ಮನೆಯ ಹೊರಗೆ, ದಕ್ಷಿಣ ದಿಕ್ಕಿನಲ್ಲಿ ಇಡಬೇಕು, ಯಮಾಧಿಪಾದಂ ಎಂದು ಇದನ್ನು ಕರೆಯಲಾಗುತ್ತದೆ.
ನಿಮ್ಮ ಕುಟುಂಬದವರನ್ನು ಅಕಾಲಿಕ ಮರಣದಿಂದ ಕಾಪಾಡುತ್ತದೆ. ಎರಡನೇ ದೀಪವನ್ನು ದೇವಸ್ಥಾನದಲ್ಲಿ ತುಪ್ಪದ ದೀಪ ಹಚ್ಚಬೇಕು. ಮೂರನೆಯದು ಲಕ್ಷ್ಮೀದೇವಿಯ ಮುಂದೆ ದೀಪ ಬೆಳಗಿಸಬೇಕು. ನಾಲ್ಕನೆಯ ದೀಪ, ತುಳಸಿ ಗಿಡದ ಮುಂದೆ ಬೆಳಗಿಸಿ, ಐದನೆಯ ದೀಪ ಮನೆಯ ಮುಂಬಾಗಿಲಿನ ಹತ್ತಿರ ಬೆಳಗಿಸಿ. ಆರನೆಯ ದೀಪವನ್ನು ಗಿಡದ ಕೆಳಗೆ ಸಾಸಿವೆ ಎಣ್ಣೆಯಿಂದ ಬೆಳಗಿಸಿ. ಏಳನೆಯ ದೀಪವನ್ನು ಯಾವುದಾದರೂ ದೇವಸ್ಥಾನದಲ್ಲಿ ಬೆಳಗಿಸಿ. 8ನೇ ದೀಪವನ್ನು ಮನೆಯ ಕಸದ ಬಳಿ ಬೆಳಗಿಸಿ.. 9ನೇ ದೀಪವನ್ನು ಮನೆಯ ಸ್ನಾನದಮನೆಯ ಹತ್ತಿರ ಬೆಳಗಿಸಿ. 10ನೇ ದೀಪವನ್ನು ನಿಮಗೆ ರಕ್ಷಣೆ ನೀಡುವ ವಸ್ತುಗಳ ಬಳಿ ಬೆಳಗಿಸಿ. 11ನೇ ದೀಪವನ್ನು ಮನೆಯ ಕಿಟಕಿಯ ಬಳಿ ಬೆಳಗಿದಿ, 12ನೇ ದೀಪವನ್ನು ಮನೆಯ ಟೆರೇಸ್ ನಲ್ಲಿ ಬೆಳಗಿಸಿ. 13 ನೇ ದೀಪವನ್ನು ಮನೆಯ ಅಡುಗೆಮನೆಯ ಬಲಿ ಬೆಳಗಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಐಶ್ವರ್ಯ ನೆಲಸುತ್ತದೆ.