ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ಹಾಗೂ ಪಾಕಿಸ್ತಾನದ ವಿರುದ್ದದ ಪಂದ್ಯಕ್ಕೂ ಮುನ್ನ ಜನರು ಗೂಗಲ್ ನಲ್ಲಿ ಏನು ಹುಡುಕುತ್ತಿದ್ದಾರೆ ಗೊತ್ತೇ?? ಜನರ ಅತಿದೊಡ್ಡ ಅನುಮಾನವೇನು ಗೊತ್ತೇ??

319

Get real time updates directly on you device, subscribe now.

ನಾಳೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿರುವ ಇಂಡಿಯಾ ಪಾಕಿಸ್ತಾನ್ ಮ್ಯಾಚ್ ನೋಡಲು ವಿಶ್ವಾದ್ಯಂತ ಕ್ರಿಕೆಟ್ ಪ್ರಿಯರು ಕಾಯುತ್ತಿದ್ದಾರೆ. ಭಾರತ ಪಾಕಿಸ್ತಾನದ ಮ್ಯಾಚ್ ಎಂದರೆ ಅದರ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ, ಬದ್ಧ ವೈರತ್ವ ಹೊಂದಿರುವ ಎರಡು ದೇಶಗಳ ನಡುವಿನ ಮ್ಯಾಚ್ ಎಂದರೆ ಎಲ್ಲರಿಗೂ ಕುತೂಹಲ. ಅದರಲ್ಲೂ ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪಾಕಿಸ್ತಾನ್ ಸೋಲಿಸಿದೆ, ಇದು ಭಾರತದ ವಿರುದ್ಧ ಪಾಕಿಸ್ತಾನ್ ಗೆ ಮೊದಲ ಗೆಲುವಾಗಿತ್ತು. ಹಾಗಾಗಿ ಭಾರತ ತಂಡ ಗೆಲ್ಲಲೇಬೇಕು ಛಲದಿಂದ ಅಭ್ಯಾಸ ನಡೆಸುತ್ತಿದೆ.

ಇತ್ತ ಅಭಿಮಾನಿಗಳು ಸಹ ಇಂಡಿಯಾ ಪಾಕಿಸ್ತಾನ್ ಮ್ಯಾಚ್ ನೋಡಲು ಕಾದು ಕುಳಿತಿದ್ದಾರೆ. ಮ್ಯಾಚ್ ಶುರುವಾಗುವ ಹಿಂದಿನ ದಿನ ಕ್ರಿಕೆಟ್ ಅಭಿಮಾನಿಗಳು ಗೂಗಲ್ ಸರ್ಚ್ ನಲ್ಲಿ ಹುಡುಕುತ್ತಿರೋದು ಏನನ್ನು ಗೊತ್ತಾ? ಇದಕ್ಕೆ ಉತ್ತರ ಕೊಟ್ಟಿದೆ ಕೆಕೆಆರ್ ತಂಡದ ಇನ್ಸ್ಟಗ್ರಾಮ್ ಖಾತೆ. ಇನ್ಸ್ಟಾಗ್ರಾಮ್ ನಲ್ಲಿ ಇವರು ಒಂದು ಫೋಟೋ ಶೇರ್ ಮಾಡಿದ್ದು, ಅದರಲ್ಲಿ ರಾಹುಲ್ ದ್ರಾವಿಡ್ ಅವರು ಮತ್ತು ರೋಹಿತ್ ಶರ್ಮಾ ಅವರು ನಿಂತಿದ್ದಾರೆ, ಆ ಫೋಟೋ ಕೆಳಗೆ, ಅಭಿಮಾನಿಗಳು ಗೂಗಲ್ ನಲ್ಲಿ ನಾಳಿನ ಪಂದ್ಯದ ಬಗ್ಗೆ ಅತಿಹೆಚ್ಚಾಗಿ ಕೇಳಿರುವ ಪ್ರಶ್ನೆ ಯಾವುದು ಎಂದು ತೋರಿಸಲಾಗಿದೆ, ಅಷ್ಟಕ್ಕೂ ಅಭಿಮಾನಿಗಳು ಕೇಳಿರುವುದು, “ಮೆಲ್ಬೋರ್ನ್ ನಲ್ಲಿ ನಾಳೆ ವಾತಾವರಣ ಹೇಗಿರಲಿದೆ..?” ಎಂದು.. ಇದಕ್ಕೆ ಕ್ಯಾಪ್ಶನ್ ಆಗಿ, “ವರುಣದೇವ.. ಕರುಣೆ ತೋರಿಸು..”ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದರೆ ಎಂಥವರಿಗೂ ನಗು ಬರುವುದು ಖಂಡಿತ.

ಆದರೆ ಅಸಲಿ ವಿಚಾರ ಕೂಡ ಅದೇ ರೀತಿ ಇದೆ. ನಾಳೆ ಪಂದ್ಯ ನಡೆಯುವ ದಿನಕ್ಕೆ, ಹವಾಮಾನ ವರದಿಯ ಪ್ರಕಾರ ಮಳೆ ಬರುವ ಸಾಧ್ಯತೆ ಹೆಚ್ಚಾಗಿದೆ, ಹಾಗಾಗಿ ಅಭಿಮಾನಿಗಳು ನಾಳೆ ಹವಾಮಾನ ಹೇಗಿರುತ್ತದೆ ಎನ್ನುವ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ವರದಿಯ ಪ್ರಕಾರ, ಶೇ.95ರಷ್ಟು ನಾಳೆ ಮಳೆಯಾಗುವ ಸಾಧ್ಯತೆ ಇದೆ. ಗುಡುಗಿನ ಜೊತೆಗೆ ಮಳೆ ಆಗಬಹುದು ಎನ್ನುವ ಮಾಹಿತಿ ಇದ್ದು, ಗಂಟೆಗೆ 15 ರಿಂದ 20 ಕಿಮೀ ವೇಗದಲ್ಲಿ ನೈಋತ್ಯ ದಿಕ್ಕಿನಲ್ಲಿ ಗಾಳಿ ಬೀಸಲಿದೆ, ನಂತರ ದಕ್ಷಿಣ ದಿಕ್ಕಿಗೆ ಬೀಸಲಿದೆ ಎಂದು ಮಾಹಿತಿ ಸಿಕ್ಕಿದೆ. ಮತ್ತೊಂದು ವರದಿ ಪ್ರಕಾರ, ನಾಳೆ ಬೆಳಗ್ಗೆ ಶೇ.68ರಷ್ಟು ಮಳೆಯಾಗುವ ಸಾಧ್ಯತೆ ಇದೆ, ಶೇ.25ರಷ್ಟು ಮಧ್ಯಾಹ್ನದ ಸಮಯಕ್ಕೆ ಕಡಿಮೆಯಾಗುತ್ತದೆ. ಆದರೆ ಸಂಜೆಯವರೆಗು ಮಲೆಯಾಗಬಹುದು ಎನ್ನಲಾಗುತ್ತಿದೆ. ನಾಳೆ ಪಂದ್ಯ ಶುರುವಾಗಿವುದು ಅಲ್ಲಿನ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ, ಭಾರತದ ಕಾಲಮಾನದಲ್ಲಿ ಮಧ್ಯಾಹ್ನ 1:30 ಕ್ಕೆ. ಒಂದು ವೇಳೆ ನಾಳಿನ ಪಂದ್ಯದಲ್ಲಿ ಮಳೆ ಬಂದು ಪಂದ್ಯ ರದ್ದಾದರೆ, ಎಲ್ಲಾ ಅಭಿಮಾನಿಗಳಿಗು ನಿರಾಶೆ ಆಗುವುದು ಖಂಡಿತ.

Get real time updates directly on you device, subscribe now.