ಲ್ಯಾಪ್ ಟಾಪ್ ಕ್ಷೇತ್ರವನ್ನು ತಲ್ಲಣ ಗೊಳಿಸಿ ಶೇಕ್ ಮಾಡಿದ ಅಂಬಾನಿ: ಜಿಯೋ ಲ್ಯಾಪ್ಟಾಪ್ ಬಿಡುಗಡೆ, ಅದೆಷ್ಟು ಕಡಿಮೆ ಬೆಲೆಗೆ ಗೊತ್ತೇ??
ಲ್ಯಾಪ್ ಟಾಪ್ ಕ್ಷೇತ್ರವನ್ನು ತಲ್ಲಣ ಗೊಳಿಸಿ ಶೇಕ್ ಮಾಡಿದ ಅಂಬಾನಿ: ಜಿಯೋ ಲ್ಯಾಪ್ಟಾಪ್ ಬಿಡುಗಡೆ, ಅದೆಷ್ಟು ಕಡಿಮೆ ಬೆಲೆಗೆ ಗೊತ್ತೇ??
ಜಿಯೋ ಸಂಸ್ಥೆಯು ತಮ್ಮ ಗ್ರಾಹಕರಿಯೇ ವಿಶೇಷವಾದ ಆಫರ್ ಗಳನ್ನು ಕೊಡುತ್ತಲೇ ಇರುತ್ತಾರೆ. ಇದೀಗ ಜಿಯೋ ಸಂಸ್ಥೆ ಹೊಸದಾಗಿ ಜಿಯೋ ಬುಕ್ ಲ್ಯಾಪ್ ಟಾಪ್ ಲಾಂಚ್ ಮಾಡಿದೆ, ಈ ತಿಂಗಳ ಆರಂಭದಲ್ಲಿ, ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಲ್ಯಾಪ್ ಟಾಪ್ ಅನ್ನು ಪ್ರದರ್ಶನ ಮಾಡಲಾಗಿತ್ತು, ಆದರೆ ಈಗ ಜಿಯೋ ಬುಕ್ ಲ್ಯಾಪ್ ಟಾಪ್ ಅನ್ನು ಗ್ರಾಹಕರಿಗೆ ಸಿಗುವ ಹಾಗೆ ಆನ್ ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಹಾಗಿದ್ದರೆ, ಈ ಜಿಯೋ ಬುಕ್ ಲ್ಯಾಪ್ ಟಾಪ್ ನಲ್ಲಿ ವಿಶೇಷವಾದ ಫೀಚರ್ಸ್ ಇದ್ದು, ಗ್ರಾಹಕರಿಗೆ ಸುಲಭಾವಾಗಿ ಸಿಗುವ ಹಾಗೆ ಇಕಾಮರ್ಸ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಈ ಜಿಯೋ ಲ್ಯಾಪ್ ಟಾಪ್ ನ ವಿಶೇಷತೆಯ ಬಗ್ಗೆ ನೋಡುವುದಾದರೆ..
ಜಿಯೋ ಬುಕ್ ಲ್ಯಾಪ್ ಟಾಪ್ ನ ಡಿಸ್ಪ್ಲೇ 11.6 ಇಂಚ್ ಹೊಂದಿದೆ, 665 SoC Snapdragon ಹೊಂದಿದ್ದು, ಬ್ಯಾಟರಿ 5000 mAH ಇರುತ್ತದೆ. ಇನ್ನುಳಿದ ಫೀಚರ್ಸ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. Qualcomm ಮತ್ತು Microsoft ಜೊತೆಯಲ್ಲಿ ಮುಕೇಶ್ ಅಂಬಾನಿ ಅವರು ತಯಾರಿ ಮಾಡಿರುವ ಈ ಲ್ಯಾಪ್ ಟಾಪ್ ನ ಬೆಲೆ ಗ್ರಾಹಕರಿಗೆ ಸಿಗುವ ಇರುತ್ತದೆ, ಭಾರತದ ಮಾರ್ಕೆಟ್ ನಲ್ಲಿ ಬೇರೆ ಲ್ಯಾಪ್ ಟಾಪ್ ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನಲಾಗಿದೆ. ಜಿಯೋಫೋನ್ ಸಕ್ಸಸ್ ಕಂಡ ಹಾಗೆ ಇದು ಕೂಡ ಯಶಸ್ವಿಯಾಗಲಿದೆ. ₹15,799 ರೂಪಾಯಿಗೆ ಜಿಯೋಬುಕ್ ಲ್ಯಾಪ್ ಟಾಪ್ ಇಕಾಮರ್ಸ್ ನಲ್ಲಿ ಸಿಗಲಿದ್ದು. ಇದರ ಮೂಲಕ ಮತ್ತೊಮ್ಮೆ ಮಾರಾಟ ಮಾಡುವಂಥವರಿಗೆ ಪ್ರತ್ಯೇಕವಾಗಿ GeM ಪಟ್ಟಿಯಲ್ಲಿ , 19,500 ರೂಪಾಯಿಗೆ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಅನ್ನು ಮಾರಾಟ ಮಾಡಲಿದೆ.
ಈ ಲ್ಯಾಪ್ ಟಾಪ್ ಖರೀದಿ ಮಾಡುವವರು, Kotak, ICICI, HDFC, AU, INDUSIND, DBS ಹಾಗು ಇನ್ನು ಕೆಲವು ಬ್ಯಾಂಕ್ ಕಾರ್ಡ್ ಗಳಿಗೆ ಎಕ್ಸ್ಟ್ರಾ ಶೇ.10 ರಷ್ಟು ಡಿಸ್ಕೌಂಟ್ ಸಿಗುತ್ತದೆ. 11.6 ಇಂಚ್ ಡಿಸ್ಪ್ಲೇ ಹೊಂದಿರುವ ಈ ಲ್ಯಾಪ್ ಟಾಪ್ ನಲ್ಲಿ 1366×768 ರೆಸೊಲ್ಯೂಷನ್ ಹೊಂದಿದೆ. Adreno 610 GPU ನಲ್ಲಿ Qualcomm Snapdragon 665 SoC ಗೆ ಜೋಡಿಸಲಾಗಿದೆ. ಜಿಯೋಬುಕ್ ಲ್ಯಾಪ್ ಟಾಪ್ ನಲ್ಲಿ 2ಜಿಬಿ RAM, 32ಜಿಬಿ eMMC ಸ್ಟೋರೇಜ್ ಈ ಲ್ಯಾಪ್ ಟಾಪ್ ನಲ್ಲಿದೆ. ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 128ಜಿಬಿ ವರೆಗು ಸ್ಟೋರೇಜ್ ಎಕ್ಸ್ಟನ್ಡ್ ಮಾಡಿಸಬಹುದು. 5000mAH ಬ್ಯಾಟರಿ ಹೊಂದಿದ್ದು, 8 ಗಂಟೆಗಳವರೆಗೂ ಚಾರ್ಜ್ ಗೆ ಹಾಕದೆ ಉಪಯೋಗಿಸಬಹುದು. ಒಂದು ವೇಳೆ ಲ್ಯಾಪ್ ಟಾಪ್ ಹೀಟ್ ಆದರೆ ಕೂಲ್ ಸಹ ಆಗುವ ವಿಧಾನ ಹೊಂದಿದೆ.
ಜಿಯೋ ಸಂಸ್ಥೆಯ ಈ ಲ್ಯಾಪ್ ಟಾಪ್ JioOS ನಲ್ಲಿ ಕೆಲಸ ಮಾಡುತ್ತದೆ, ಲ್ಯಾಪ್ ಟಾಪ್ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಹಾಗೆ ತಯಾರಿಸಲಾಗಿದೆ. Windows OS Maker, Microsoft Laptop ಗಳಲ್ಲಿ ಇರುವ ಎಲ್ಲಾ ಅಪ್ಲಿಕೇಶನ್ ಗಳನ್ನು ಹೊಂದಿದೆ, ಜೊತೆಗೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡಲು ಜಿಯೋ ಸ್ಟೋರ್ ಸಹ ಮೊದಲೇ ಇರುತ್ತದೆ. ಜಿಯೋ ಸಿಮ್ ಇಂದ ಕೆಲಸ ಮಾಡುವ ಈ ಲ್ಯಾಪ್ ಟಾಪ್ ನಲ್ಲಿ Bluetooth 5.0, HDMI ಮತ್ತು wifi ಸಹ ಹೊಂದಿದೆ. ಇದರಲ್ಲಿ 1.0W ಸ್ಟಿರಿಯೋ ಸ್ಪೀಕರ್ ಗಳನ್ನು ಹೊಂದಿದೆ, ಹಾಗೆಯೇ 3.5mm audio jack ಮತ್ತು video call ಗಳಿಗಾಗಿ, 2MP ವೆಬ್ ಕ್ಯಾಮೆರಾ ಸಹ ಇದೆ. ಗ್ರಾಹಕರು KYC ಮಾಡಿಸಲು, ತಮಗೆ ಇಷ್ಟ ಆಗಿರುವ ಪ್ಲಾನ್ ಆಯ್ಕೆ ಮಾಡಿ, ICCID ಅಥವಾ ಸಿಮ್ ಸಂಖ್ಯೆಯನ್ನು ಜಿಯೋ ಸ್ಟೋರ್ ಮೂಲಕ ಪಡೆಯಬಹುದು.