ಈ ದೀಪಾವಳಿಯಿಂದ ಮುಂದಿನ ದೀಪಾವಳಿವರೆಗೂ ಸಾಕ್ಷಾತ್ ಲಕ್ಷ್ಮಿ ದೇವಿ ಕೃಪೆ ಪಡೆಯುವ ರಾಶಿಗಳು ಯಾವುದು ಗೊತ್ತೇ?? ಆರು ರಾಶಿಗಳಿಗೆ ಕುಬೇರ ವರ್ಷ.

ದೀಪಾವಳಿ ಲಕ್ಷ್ಮೀದೇವಿಯ ಆರಾಧನೆ ಮಾಡುವ ಹಬ್ಬ, ಈ ಹಬ್ಬದ ದಿನ ಲಕ್ಷ್ಮೀದೇವಿಯನ್ನು ಪೂಜಿಸಿ, ಇಡೀ ವರ್ಷ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಇರಲಿ ಮತ್ತು ಇಡೀ ವರ್ಷ ಆರ್ಥಿಕವಾಗಿ ಯಾವುದೇ ಸಮಸ್ಯೆ ಬಾರದಿರಲಿ ಎಂದು ಪ್ರಾರ್ಥನೆ ಮಾಡುತ್ತಾರೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮೀದೇವಿಯ ಆಶೀರ್ವಾದದಿಂದಾಗಿ ದೀಪಾವಳಿ ಹಬ್ಬದ ಸಮಯದಿಂದ ಕೆಲವು ರಾಶಿಗಳ ಭವಿಷ್ಯವೇ ಬದಲಾಗಲಿದೆ, ಮುಂದಿನ ವರ್ಷ ದೀಪಾವಳಿ ಹಬ್ಬದ ವರೆಗು ಲಕ್ಷ್ಮೀದೇವಿ ಇವರ ಜೊತೆ ಇರಲಿದ್ದಾರೆ. ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಈ ರಾಶಿಯವರು ಅದೃಷ್ಟ ಹೊಂದುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಈ ವರ್ಷ ಪೂರ್ತಿ ಒಳ್ಳೆಯ ಪ್ರಭಾವ ಬೀರಲಿದೆ. ನಿಮಗಿರುವ ಎಲ್ಲಾ ತೊಂದರೆಗಳು ಪರಿಹಾರ ಆಗುತ್ತದೆ, ಆರ್ಥಿಕ ವಿಚಾರ ಮತ್ತು ಸಂಪತ್ತಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ನಿಮಗೆ ಹೊಸ ವಾಹನ ಕೊಂಡುಕೊಳ್ಳುವ ಯೋಗ ಇದೆ. ವರ್ಷದ ಶುರುವಿನಲ್ಲಿ ಜಾಗ ಬದಲಾವಣೆ ಆಗುವ ಸಾಧ್ಯತೆ ಇದೆ.

ಕನ್ಯಾ ರಾಶಿ :- ದೀಪಾವಳಿ ಹಬ್ಬ ಮುಗಿದ ಬಳಿಕ, ಯಾವಾಗ ಬೇಕಿದ್ದರು ನಿಮ್ಮ ವೃತ್ತಿಯಲ್ಲಿ ವರ್ಗಾವಣೆ ಆಗಬಹುದು, ಇದರಿಂದಾಗಿ ನಿಮ್ಮ ವೃತ್ತಿಜೀವನದ ದಿಕ್ಕು ಬದಲಾಗುತ್ತದೆ. ಈ ವರ್ಷ ನೀವು ಶಿವನಿಗೆಪ್ ಪೂಜೆ ಮಾಡಿ, ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ತುಲಾ ರಾಶಿ :- ಈ ವರ್ಷ ನಿಮ್ಮ ಜೀವನದಲ್ಲಿ ಹೆಚ್ಚಿನ ಬದಲಾವಣೆಗಳು ನಡೆಯಲಿದೆ. ನಿಮ್ಮ ಉದ್ಯೋಗದಲ್ಲಿ ಆಗುವ ಬದಲಾವಣೆ ಇಂದ ದೊಡ್ಡದಾಗಿ ಯಶಸ್ಸನ್ನು ಸಹ ಪಡೆಯುತ್ತೀರಿ. ನಿಮಗೆ ದಿಢೀರ್ ಧನಲಾಭ ಆಗುತ್ತದೆ, ದೀಪಾವಳಿ ಹಬ್ಬದ ನಂತರ ಸ್ವಂತ ಮನೆ ಖರೀದಿ ಮಾಡುವ ನಿಮ್ಮ ಕನಸು ನನಸಾಗುತ್ತದೆ.

ಧನು ರಾಶಿ :- ಈ ರಾಶಿಯವರಿಗೆ ದೀಪಾವಳಿ ಹಬ್ಬ ಮುಗಿದ ನಂತರ ವೃತ್ತಿಯಲ್ಲಿ ಹೆಚ್ಚಿನ ಅವಕಾಶಗಳು ಬರಲು ಶುರುವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ನಿಮ್ಮ ಸಮಯ ಚೆನ್ನಾಗಿರುತ್ತದೆ. ದೇವರಿಗೆ ಪೂಜೆ ಮಾಡಿ, ದೇವರ ಆರಾಧನೆ ಮಾಡುವ ಕಡೆಗೆ ಹೆಚ್ಚು ಗಮನ ಹರಿಸಿ.

ಮಕರ ರಾಶಿ :- ದೀಪಾವಳಿ ನಂತರ ನೀವು ಅಧಿಕವಾಗಿ ಹಣ ಗಳಿಸುತ್ತೀರಿ. ಹಿಂದಿನ ಎಲ್ಲಾ ಸಾಲಗಳಿಂದ ಮುಕ್ತಿ ಸಿಗುತ್ತದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗುತ್ತದೆ, ಶನಿದೇವರ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಮೀನ ರಾಶಿ :- ಈ ರಾಶಿಯವರು ಶನಿದೇವರನ್ನು ಪೂಜಿಸಿ, ಶನಿದೇವರ ಮಂತ್ರಪಠಣೆ ಮಾಡುತ್ತಾ ಬಂದರೆ, ನಿಮಗೆ ಎದುರಾಗುವ ಎಲ್ಲಾ ತೊಂದರೆಗಳನ್ನು ಸುಲಭವಾಗಿ ಎದುರಿಸುತ್ತೀರಿ. ಈ ವರ್ಷ ನಿಮಗೆ ಸಿಗುವ ಹೊಸ ಕೆಲಸಗಳಿಂದ ಲಾಭ ಪಡೆದುಕೊಳ್ಳುತ್ತೀರಿ, ನಿಮ್ಮ ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ.