ಪಾಕ್ ವಿರುದ್ಧ ರಣ ತಂತ್ರ ರೂಪಿಸಿರುವ ರೋಹಿತ್ ಹಾಗೂ ದ್ರಾವಿಡ್: ತಂಡದಲ್ಲಿ ಆತನಿಗೆ ಚಾನ್ಸ್ ಕೊಡಲ್ಲ ಎಂದ ರೋಹಿತ್. ಯಾರು ಹೊರಗೆ ಗೊತ್ತೇ??

ಪಾಕ್ ವಿರುದ್ಧ ರಣ ತಂತ್ರ ರೂಪಿಸಿರುವ ರೋಹಿತ್ ಹಾಗೂ ದ್ರಾವಿಡ್: ತಂಡದಲ್ಲಿ ಆತನಿಗೆ ಚಾನ್ಸ್ ಕೊಡಲ್ಲ ಎಂದ ರೋಹಿತ್. ಯಾರು ಹೊರಗೆ ಗೊತ್ತೇ??

ಇಂದಿನಿಂದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ 12 ಹಂತದ ಪಂದ್ಯಗಳು ನಡೆಯಲಿದೆ. ಮೊದಲ ದಿನ ಆಸ್ಟ್ರೇಲಿಯಾ ವಾರ್ಡಸ್ ನ್ಯೂಜಿಲೆಂಡ್ ವಿರುದ್ಧ ಪಂದ್ಯ ನಡೆಯಲಿದ್ದು, ನಾಳೆ ಎರಡನೇ ದಿನ ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲಲೇಬೇಕು ಎಂದು ಬಲಿಷ್ಠವಾದ ಪ್ಲೇಯಿಂಗ್ 11 ಅನ್ನು ಕಟ್ಟಲಾಗುತ್ತಿದೆ. ಇದಕ್ಕಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಆ ಒಬ್ಬ ಆಟಗಾರ ಪ್ಲೇಯಿಂಗ್ 11 ನಲ್ಲಿ ಇರುವುದಿಲ್ಲ ಎಂದಿದ್ದಾರೆ.

ಪಾಕಿಸ್ತಾನ್ ತಂಡ ಸ್ಟ್ರಾಂಗ್ ಆಗಿದೆ, ಅವರ ಬೌಲಿಂಗ್ ಪದೇ ಚೆನ್ನಾಗಿರುವ ಕಾರಣ, ನಮ್ಮ ತಂಡ ಮೂರು ವಿಭಾಗದಲ್ಲೂ ಅವರನ್ನು ಸೋಲಿಸುವಷ್ಟು ಬಲಿಷ್ಠವಾಗಿ ಇರಬೇಕು. ಈ ಪಂದ್ಯದಲ್ಲಿ ಪಾಕಿಸ್ತಾನ್ ಅನ್ನು ಸೋಲಿಸಲೇಬೇಕು ಎಂದು ಪ್ಲಾನ್ ಮಾಡಿದ್ದು, ಪ್ಲೇಯಿಂಗ್11 ನಲ್ಲಿ ಯುವ ಆಟಗಾರರು ಎಂದು ನೋಡದೆ, ಅನುಭವ ಇರುವ ಆಟಗಾರರಿಗೆ ಸ್ಥಾನ ಕೊಡಬೇಕು ಎಂದು ನಿರ್ಧಾರ ಮಾಡಲಾಗಿದೆ, ಹಾಗಾಗಿ ನಾಳೆಯ ಪಂದ್ಯಕ್ಕೆ ಪ್ಲೇಯಿಂಗ್ 11ಇಂದ ರಿಷಬ್ ಪಂತ್ ಅವರನ್ನು ಹೊರಗಿಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಇವರ ಬದಲಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಭಾರತ ತಂಡ ಆಸ್ಟ್ರೇಲಿಯಾ ತಲುಪಿದ ನಂತರ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಎರಡು ಪಂದ್ಯಗಳು ಮತ್ತು ಆಸ್ಟ್ರೇಲಿಯಾ ವಿರುದ್ಧ ಒಂದು ಅಭ್ಯಾಸ ಪಂದ್ಯವನ್ನಾಡಿತು, ನ್ಯೂಜಿಲೆಂಡ್ ವಿರುದ್ಧ ನಡೆಯಬೇಕಿದ್ದ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಯಿತು. ಮೊದಲ ಮೂರು ಪಂದ್ಯಗಳಲ್ಲಿ ಪಂತ್ ಅವರಿಗೆ ಆಡುವ ಅವಕಾಶ ನೀಡಲಾಯಿತು, ಆದರೆ ಅವರು 9 ರನ್ ಗಳಿಸಿ ಔಟ್ ಆದರು, ಇತ್ತ ದಿನೇಶ್ ಕಾರ್ತಿಕ್ ಅವರು, 3 ಪಂದ್ಯಗಳಲ್ಲಿ 10, 19 ಮತ್ತು 20 ರನ್ ಕ್ರಮವಾಗಿ ಸಿಡಿಸಿ, ಫಿನಿಷರ್ ರೋಲ್ ಅನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ, ಹಾಗಾಗಿ ಪಂತ್ ಅವರನ್ನು ಹೊರಗಿಟ್ಟು, ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ನೀಡಲಾಗುತ್ತಿದೆ.