ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ತಕ್ಷಣವೇ ಆರ್ಸಿಬಿ ಫ್ಯಾನ್ಸ್ ಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಬಿನ್ನಿ. ಏನಂತೆ ಗೊತ್ತೇ??
ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ತಕ್ಷಣವೇ ಆರ್ಸಿಬಿ ಫ್ಯಾನ್ಸ್ ಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ ಬಿನ್ನಿ. ಏನಂತೆ ಗೊತ್ತೇ??
ಕೋವಿಡ್ ಇದ್ದ ಸಮಯದಲ್ಲಿ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲಿಲ್ಲ, ದೂರಡ್ಸ್ ದುಬೈನಲ್ಲಿ ಐಪಿಎಲ್ ಪಂದ್ಯಗಳು ನಡೆದವು. ಮುಂದಿನ ವರ್ಷ 2023ರ ಐಪಿಎಲ್, ಭಾರತದಲ್ಲೇ ನಡೆಯಲಿದೆ ಎನ್ನುವ ಸಂತೋಷದ ಸುದ್ದಿ ಈಗಾಗಲೇ ನಮಗೆಲ್ಲ ತಿಳಿದುಬಂದಿದೆ. ವಿಶೇಷವಾಗಿ ಆರ್.ಸಿ.ಬಿ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ತಿಳಿದ ಬಳಿಕ ಆರ್.ಸಿ.ಬಿ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿತ್ತು. ಬೆಂಗಳೂರಿನಲ್ಲಿ ಆರ್.ಸಿ.ಬಿ ರಣಕಹಳೆ ಮೊಳಗುವುದಕ್ಕಿಂತ ಸಂತೋಷದ ವಿಚಾರ ಇನ್ನೇನಿದೆ..
ಬೆಂಗಳೂರಿನಲ್ಲಿ ಆರ್.ಸಿ.ಬಿ ಪಂದ್ಯ ನಡೆಯುವುದು ನಮಗೆಲ್ಲ ಬಹಳ ಸಂತೋಷದ ವಿಷಯ, ಅಂಥದ್ರಲ್ಲಿ ಈಗ ಮತ್ತೊಂದು ಬಂಪರ್ ಸುದ್ದಿ ಆರ್.ಸಿ.ಬಿ ಅಭಿಮಾನಿಗಳಿಗೆ ಸಿಕ್ಕಿದೆ. ಅದೇನೆಂದರೆ, ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲಿ ಮಾತ್ರವಲ್ಲ, ಮೈಸೂರು ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಲ್ಲಿ ಸಹ ನಡೆಯುತ್ತವೆ ಎಂದು ಭರ್ಜರಿಯಾದ ವಿಚಾರ ತಿಳಿದುಬಂದಿದೆ, ಇದಕ್ಕಿಂತ ಸಂತೋಷದ ವಿಚಾರ ಆರ್.ಸಿ.ಬಿ ಅಭಿಮಾನಿಗಳಿಗೆ ಮತ್ತೇನು ಸಿಗಲು ಸಾಧ್ಯ? ಇದು ಫೇಕ್ ನ್ಯೂಸ್ ಅಲ್ಲ, ಬಿಸಿಸಿಐ ಕಡೆಯಿಂದಲೇ ಸಿಕ್ಕಿರುವ ಅಧಿಕೃತ ಮಾಹಿತಿ ಸಿಕ್ಕಿದೆ.
ಬಿಸಿಸಿಐಗೆ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಕನ್ನಡಿಗ ರೋಜರ್ ಬಿನ್ನಿ ಅವರು. 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು ಬಿನ್ನಿ. ಇವರು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ನಡೆಸಿದೆ ಬಿನ್ನಿ ಅವರು, ಬೆಂಗಳೂರು ಮಾತ್ರವಲ್ಲದೆ, ಮೈಸೂರು ಹುಬ್ಬಳ್ಳಿ ಮತ್ತು ಬೆಳಗಾವಿ ನಗರದಲ್ಲಿ ಸಹ ಐಪಿಎಲ್ ನಡೆಸಲು ಉತ್ತಮವಾದ ಮೈದಾನಗಳು ಮತ್ತು ಬೇಕಿರುವ ಎಲ್ಲಾ ಸೌಕರ್ಯಗಳು ಇದೆ, ಹಾಗಾಗಿ ಆ ನಗರಗಳಲ್ಲಿಯೂ ಮುಂದಿನ ವರ್ಷಗಳಲ್ಲಿ ಐಪಿಎಲ್ ನಡೆಸುತ್ತೇವೆ ಎಂದು ಬಿನ್ನಿ ಅವರು ಪ್ರೆಸ್ ಮೀಟ್ ನಲ್ಲಿ ಹೇಳಿದ್ದಾರೆ. ಈ ವಿಚಾರ ಕೇಳಿ ಆರ್.ಸಿ.ಬಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.