ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದರೆ ಯಾರನ್ನು ಆಡಿಸಬೇಕಂತೆ ಗೊತ್ತೇ?? ಹನ್ನೊಂದರ ಬಳಗ ಕಟ್ಟಿದ ಗಂಭೀರ್. ಡಿಕೆ ಬಿಟ್ಟು ಆಯ್ಕೆಯಾದವರು ಯಾರ್ಯಾರು ಗೊತ್ತೇ??

ಭಾರತ ತಂಡ ವಿಶ್ವಕಪ್ ಗೆಲ್ಲಬೇಕು ಎಂದರೆ ಯಾರನ್ನು ಆಡಿಸಬೇಕಂತೆ ಗೊತ್ತೇ?? ಹನ್ನೊಂದರ ಬಳಗ ಕಟ್ಟಿದ ಗಂಭೀರ್. ಡಿಕೆ ಬಿಟ್ಟು ಆಯ್ಕೆಯಾದವರು ಯಾರ್ಯಾರು ಗೊತ್ತೇ??

ಭಾರತ ತಂಡವು ಈ ವರ್ಷ ಟಿ20 ವಿಶ್ವಕಪ್ ಗೆಲ್ಲಲೇಬೇಕು ಎಂದು ದೃಢ ನಿರ್ಧಾರ ಮಾಡಿ, ಅಭ್ಯಾಸ ನಡೆಸಿದ್ದು, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ವಿರುದ್ಧ ನಡೆದ ಎರಡು ಟೂರ್ನಿಗಳನ್ನು ಗೆದ್ದಿದೆ, ಅಷ್ಟೇ ಅಲ್ಲರೆ, ವಿಶ್ವಕಪ್ ಟೂರ್ನಿ ಶುರು ಆಗುವ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಸಹ ಜಯ ಸಾಧಿಸಿದೆ. ಟಿ20 ವಿಶ್ವಕಪ್ ನಲ್ಲಿ ಭಾರತದ ಮೊದಲ ಪಂದ್ಯ ನಡೆಯಲಿರುವುದು ಭಾನುವಾರ, ಅಕ್ಟೋಬರ್ 22ರಿಂದ ಸೂಪರ್ 12 ಹಂತಗಳ ಪಂದ್ಯ ಶುರುವಾಗಲಿದೆ, 23ರ ಭಾನುವಾರ ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದ್ದು, ಈ ಹೈಪವರ್ ಪಂದ್ಯ ನೋಡಲು ಎಲ್ಲರಿಗು ಕಾತುರತೆ ಇದೆ. ಈಗಾಗಲೇ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಬುಮ್ರ ಅವರ ಬದಲಾಗಿ ಮೊಹಮ್ಮದ್ ಶಮಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈ ಸಮಯದಲ್ಲಿ ಭಾರತ ತಂಡ ಕೊನೆಯ ಹಂತದ ತಯಾರಿಗಳನ್ನು ನಡೆಸುತ್ತಿದ್ದು, ನಾಳಿದ್ದು ನಡೆಯುವ ಪಂದ್ಯದ ಆಡುವ 11ರ ಬಳಗದಲ್ಲಿ ಯಾರೆಲ್ಲಾ ಆಟಗಾರರು ಇರುತ್ತಾರೆ ಎನ್ನುವುದನ್ನು ಬಿಸಿಸಿಐ ಇನ್ನು ರಿವೀಲ್ ಮಾಡಿಲ್ಲ, ಆದರೆ ಅಭ್ಯಾಸ ಪಂದ್ಯ ನಡೆದ ಸಮಯದಲ್ಲಿ ರೋಹಿತ್ ಶರ್ಮಾ ಅವರು ಹೇಳಿದ ಹಾಗೆ, ಪ್ಲೇಯಿಂಗ್ 11 ನಲ್ಲಿ ಯಾರೆಲ್ಲಾ ಇರುತ್ತಾರೆ ಎನ್ನುವುದು ಅದಾಗಲೇ ಸದಸ್ಯರಿಗೆ ತಿಳಿಸಲಾಗಿತ್ತು ಎಂದಿದ್ದಾರೆ. ಇದೀಗ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಪಾಕಿಸ್ತಾನ್ ವಿರುದ್ಧ ಆಡಲು ಪ್ಲೇಯಿಂಗ್ 11 ಸ್ಕ್ವಾಡ್ ಆಯ್ಕೆ ಮಾಡಿದ್ದಾರೆ. ಅವರು ಆಯ್ಕೆ ಮಾಡಿರುವ ತಂಡ ಇದ್ದರೆ, ಪಾಕಿಸ್ತಾನ್ ಅನ್ನು ಕಟ್ಟಿ ಹಾಕಬಹುದು ಎನ್ನುವ ಅಭಿಪ್ರಾಯ ಹೊಂದಿದ್ದಾರೆ ಗಂಭೀರ್.

ಗಂಭೀರ್ ಅವರ ತಂಡದಲ್ಲಿ, ದಿನೇಶ್ ಕಾರ್ತಿಕ್ ಅವರನ್ನು ಸೇರಿಸಿಕೊಳ್ಳದ ಆಶ್ಚರ್ಯ ಆಗುವ ಹಾಗೆ ಮಾಡಿದ್ದಾರೆ. ಗಂಭೀರ್ ಅವರು ಆಯ್ಕೆ ಮಾಡಿರುವ ತಂಡ ಹೀಗಿದೆ, ರೋಹಿತ್ ಶರ್ಮಾ (ಕ್ಯಾಪ್ಟನ್ ಮತ್ತು ಓಪನರ್), ಕೆ.ಎಲ್.ರಾಹುಲ್ (ಓಪನರ್), ವಿರಾಟ್ ಕೋಹ್ಲಿ (ಬ್ಯಾಟ್ಸ್ಮನ್), ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್ಮನ್), ರಿಷಬ್ ಪಂತ್ (ವಿಮೆಟ್ ಕೀಪರ್/ಬ್ಯಾಟ್ಸ್ಮನ್), ಹಾರ್ದಿಕ್ ಪಾಂಡ್ಯ (ಆಲ್ ರೌಂಡರ್), ಅಕ್ಷರ್ ಪಟೇಲ್ (ಆಲ್ ರೌಂಡರ್), ಹರ್ಷಲ್ ಪಟೇಲ್ (ಬೌಲಿಂಗ್ ಆಲ್ ರೌಂಡರ್), ಅರ್ಷದೀಪ್ ಸಿಂಗ್/ಭುವನೇಶ್ವರ್ ಕುಮಾರ್ (ಸ್ವಿಂಗ್ ಬೌಲರ್), ಮೊಹಮ್ಮದ್ ಶಮಿ (ವೇಗಿ). ಗಂಭೀರ್ ಅವರು ಆಯ್ಕೆ ಮಾಡಿರುವ ತಂಡ ಇದಾಗಿದ್ದು, ಬಿಸಿಸಿಐ ಪ್ಲೇಯಿಂಗ್ 11ಗೆ ಯಾರನ್ನೆಲ್ಲ ಆಯ್ಕೆ ಮಾಡಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.