ಪಾಕಿಸ್ತಾನದ ವಿರುದ್ದದ ಪಂದ್ಯಕ್ಕೂ ಮುನ್ನವೇ ಭಾರತದ ರೋಹಿತ್, ರಾಹುಲ್ ಗೆ ಎಚ್ಚರಿಕೆ ರವಾನಿಸಿದ ಆಸ್ಟ್ರೇಲಿಯಾದ ಕ್ರಿಕೆಟರ್. ಯಾಕೆ ಗೊತ್ತೇ??

ಪಾಕಿಸ್ತಾನದ ವಿರುದ್ದದ ಪಂದ್ಯಕ್ಕೂ ಮುನ್ನವೇ ಭಾರತದ ರೋಹಿತ್, ರಾಹುಲ್ ಗೆ ಎಚ್ಚರಿಕೆ ರವಾನಿಸಿದ ಆಸ್ಟ್ರೇಲಿಯಾದ ಕ್ರಿಕೆಟರ್. ಯಾಕೆ ಗೊತ್ತೇ??

ಭಾನುವಾರ ನಡೆಯಲಿರುವ ಇಂಡಿಯಾ ವರ್ಸಸ್ ಪಾಕಿಸ್ತಾನ್, ಸೂಪರ್ 12 ಹಂತದಲ್ಲಿ ಭಾಡತ ತಂಡದ ಮೊದಲ ಪಂದ್ಯವನ್ನು ನೋಡಲು, ಬದ್ಧವೈರಿಗಳ ನಡುವಿನ ಪಂದ್ಯ ವೀಕ್ಷಸಲು ಪ್ರಪಂಚಾದ್ಯಂತ ಎಲ್ಲರೂ ಕಾಯುತ್ತಿದ್ದಾರೆ. ಕಳೆದ ವರ್ಷ ಪಾಕಿಸ್ತಾನ್ ವಿರುದ್ಧ ಸೋತಿರುವ ಕಾರಣ, ಈ ಸಾರಿ ಗೆಲ್ಲಲೇಬೇಕು ಎಂದು ಭಾರತ ಪಣತೊಟ್ಟು ಅಭ್ಯಾಸ ಶುರು ಮಾಡಿದೆ. ಹೀಗಿರುವಾಗ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಟಾಮ್ ಮೂಡಿ ಅವರು ಭಾರತದ ಓಪನಿಂಗ್ ಬ್ಯಾಟ್ಸ್ಮನ್ ಗಳಾದ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಅವರಿಗೆ ಎಚ್ಚರಿಕೆಯ ಕರೆಯೊಂದನ್ನು ನೀಡಿದ್ದಾರೆ.

ಕಳೆದ ವರ್ಷ ವಿಶ್ವಕಪ್ ನಲ್ಲಿ ಭಾರತ ತಂಡ ಪಾಕಿಸ್ತಾನ್ ವಿರುದ್ಧ ಮೊದಲ ಬಾರಿಗೆ ಸೋಲಲು ಮುಖ್ಯ ಕಾರಣ ಯುವ ಬೌಲರ್ ಶಾಹಿನ್ ಅಫ್ರಿದಿ. ಇವರ ಚಾಣಾಕ್ಷ ಬೌಲಿಂಗ್ ಇಂದ, ರೋಹಿತ್, ರಾಹುಲ್ ಮತ್ತು ವಿರಾಟ್ ಮೂವರ ವಿಕೆಟ್ ಗಳನ್ನು ಪಡೆದಿದ್ದರು. ವಿಶ್ವಕಪ್ ಸಮಯದಲ್ಲೇ ಇಂಜುರಿಗೆ ಒಳಗಾದ ಅಫ್ರಿದಿ, ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ, ಅಫ್ರಿದಿ ಅವರು ಏಷ್ಯಾಕಪ್ ಪಂದ್ಯಗಳಲ್ಲಿ ಸಹ ಪಾಲ್ಗೊಂಡಿರಲಿಲ್ಲ. ಲಂಡನ್ ನಲ್ಲಿಯೇ ಇದ್ದು, ವಿಶ್ರಾಂತಿ ಪಡೆದು, ಚೇತರಿಸುಕೊಂಡು ಟಿ20 ವಿಶ್ವಕಪ್ ಮೂಲಕ ಕಂಬ್ಯಾಕ್ ಮಾಡಿದ್ದಾರೆ.

ಅಫ್ಘಾನಿಸ್ತಾನ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಆಡಿದ ಅಫ್ರಿದಿ ಅವರು, ಯಾರ್ಕರ್ ಹಾಕಿ, ಅಫ್ಘಾನ್ ಆಟಗಾರ, ರಹಮನುಲ್ಲಾ ಗುರ್ಬಜ್ ಅವರನ್ನು ಔಟ್ ಮಾಡಿ, ಅಭ್ಯಾಸ ಪಂದ್ಯದಲ್ಲಿ ಎರಡು ವಿಕೆಟ್ಸ್ ಪಡೆದಿದ್ದು, ತಾವು ಅದ್ಭುತವಾಗಿ ಫಾರ್ಮ್ ನಲ್ಲಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಭಾರತದ ಓಪನಿಂಗ್ ಬ್ಯಾಟ್ಸ್ಮನ್ ಗಳಾದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಇಬ್ಬರು ಸಹ ಎಚ್ಚರಿಕೆಯಿಂದ ಆಡಬೇಕು ಎಂದು ಟಾಮ್ ಮೂಡಿ ಅವರು ಹೇಳಿದ್ದಾರೆ. ಈ ಎಡಗೈ ವೇಗಿ ಬೌಲಿಂಗ್ ಮಾಡುವಾಗ, ಭಾರತ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡದೆ ಹೋದರೆ, ವಿಕೆಟ್ಸ್ ಗಳನ್ನು ಕಳೆದುಕೊಳ್ಳಬೇಕಾಗುತ್ತದೆ..ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.