ಬಿಸಿಸಿಐ ಅಧ್ಯಕ್ಷರಾದ ತಕ್ಷಣವೇ ಆಕ್ಷನ್ ಗೆ ಇಳಿದ ಕನ್ನಡಿಗ: ಭಾರತದ ಬಹುದೊಡ್ಡ ಸಮಸ್ಯೆಗೆ ಚೆಕ್ ಇಡುತ್ತಾರಾ?? ಮಾಡಲು ಹೊರಟಿರುವುದಾದರೂ ಏನು ಗೊತ್ತೇ??
ಬಿಸಿಸಿಐ ಅಧ್ಯಕ್ಷರಾದ ತಕ್ಷಣವೇ ಆಕ್ಷನ್ ಗೆ ಇಳಿದ ಕನ್ನಡಿಗ: ಭಾರತದ ಬಹುದೊಡ್ಡ ಸಮಸ್ಯೆಗೆ ಚೆಕ್ ಇಡುತ್ತಾರಾ?? ಮಾಡಲು ಹೊರಟಿರುವುದಾದರೂ ಏನು ಗೊತ್ತೇ??
ಬಿಸಿಸಿಐ ಪ್ರೆಸಿಡೆಂಟ್ ಸ್ಥಾನದಿಂದ ಸೌರವ್ ಗಂಗೂಲಿ ಅವರು ಕೆಳಗಿಳಿದ ಬಳಿಕ ಅವರ ಸ್ಥಾನಕ್ಕೆ ಆಯ್ಕೆ ಆಗಿರುವುದು, 67ವರ್ಷದ ಕನ್ನಡಿಗ ರೋಜರ್ ಬಿನ್ನಿ ಅವರು. ಬಿಸಿಸಿಐ ಪ್ರೆಸಿಡೆಂಟ್ ಆಗಿ ಇಬರು ಅಧಕಾರಕ್ಕೆ ಬಂದ ಕೂಡಲೇ ಸಧ್ಯಕ್ಕೆ ಇಂಡಿಯನ್ ಕ್ರಿಕೆಟ್ ಟೀಮ್ ನಲ್ಲಿ ಆಗುತ್ತಿರುವ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದೇ ತಮ್ಮ ಮೂಲ ಉದ್ದೇಶ ಎಂದು ತಿಳಿಸಿದ್ದಾರೆ. ಜಸ್ಪ್ರೀತ್ ಬುಮ್ರ ಅವರು ಇಂಜುರಿ ಇಂದಾಗಿ ಭಾರತ ತಂಡದಿಂದ, ಹೊರಗುಳಿದಿದ್ದಾರೆ, ಇವರಿಗೆ ಇಂಜುರಿ ಆದ ಸಮಯದಲ್ಲಿ ಮೊಹಮ್ಮದ್ ಶಮಿ ಅವರಿಗೆ ಕೋವಿಡ್ ಉಂಟಾದ ಕಾರಣ, ಬುಮ್ರ ಅವರ ಬದಲಿ ಆಟಗಾರನನ್ನು ಆರಿಸಲು 11ನೇ ತಾರಿಕಿನ ವರೆಗು ಟೀಮ್ ಇಂಡಿಯಾ ಕಾಯಬೇಕಾದ ಪರಿಸ್ಥಿತಿ ಎದುರಾಯಿತು.
ಇದರ ಬಗ್ಗೆ ಸಹ ಬಿನ್ನಿ ಅವರು ಕೆಲವು ಮಾತುಗಳನ್ನಾಡಿದ್ದಾರೆ. ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಧಾರಾಗಿದ್ದಕ್ಕೆ, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್, ಬಿನ್ನಿ ಅವರಿಗೆ ಸನ್ಮಾನ ಕಾರ್ಯಾಕ್ರಮ ಇಟ್ಟುಕೊಂಡಿತ್ತು. ಆ ಕಾರ್ಯಕ್ರಮದಲ್ಲಿ ರೋಜರ್ ಬಿನ್ನಿ ಅವರು, ಬಿಸಿಸಿಐ ನಲ್ಲಿ ತಮ್ಮ ಗುರಿ, ಆಶಯಗಳು ಏನೇನು ಎಂದು ತಿಳಿಸಿದ್ದಾರೆ.. “ಟೀಮ್ ಇಂಡಿಯಾ ಆಟಗಾರರು ಯಾಕೆ ಹೆಚ್ಚಾಗಿ ಇಂಜುರಿಗೆ ಒಳಗಾಗುತ್ತಿದ್ದಾರೆ? ಅಷ್ಟು ಸುಲಭವಾಗಿ ಈ ರೀತಿ ಆಗಲು ಹೇಗೆ ಸಾಧ್ಯ? ಈಗ ಮಾತ್ರವಲ್ಲ, ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರೀತಿ ಆಗುತ್ತಿರುವುದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಬೇಕು. ಈ ರೀತಿ ಆಗುತ್ತಿರುವುದರ ಅರ್ಥ ನಮ್ಮಲ್ಲಿ ಒಳ್ಳೆಯ ಕೋಚ್ ಗಳಿಲ್ಲ ಫಿಟ್ನೆಸ್ ಟ್ರೈನರ್ ಗಳಿಲ್ಲ. ಪ್ಲೇಯರ್ ಗಳಿಗೆ ಒತ್ತಡ ಹೆಚ್ಚಾಗುತ್ತಿದೆಯೇ?
ಅಥವಾ ಎಲ್ಲಾ ಫಾರ್ಮೆಟ್ ಗಳಲ್ಲಿ ಅಡುತ್ತಿರುವುದರಿಂದ ಹೀಗಾಗುತ್ತಿದೆಯೇ? ಒಂದು ಬಲವಾದ ಕಾರಣ ಇರುತ್ತದೆ. 10 ದಿನಗಳಲ್ಲಿ ವರ್ಲ್ಡ್ ಕಪ್ ಇರುವಾಗ ಬುಮ್ರ ಅವರಿಗೆ ಆ ರೀತಿ ಆಗುವುದು, ನಂತರ ಅವರ ರೀಪ್ಲೇಸ್ಮೆಂಟ್ ಗೆ ಹುಡುಕಾಟ ಮಾಡುವುದು, ಇದೆಲ್ಲವೂ ಬಹಳ ಮುಖ್ಯವಾಗುತ್ತದೆ..” ಎಂದು ಹೇಳುವ ಮೂಲಕ ಮುಖ್ಯವಾದ ಸಮಸ್ಯೆಗೆ ಕಾರಣ ಹುಡುಕಿ ಅದನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ರಣಜಿ ಟ್ರೋಫಿ ಬಗ್ಗೆ ಕೂಡ ಮಾತನಾಡಿ, ರಣಜಿ ಟ್ರೋಫಿಯ ಪಿಚ್ ಗಳು ಇನ್ನು ಉತ್ತಮವಾಗಬೇಕು, ವೇಗಿಗಳಿಗೆ ಇವು ಹೇಳಿ ಮಾಡಿಸಿದ ಪಿಚ್ ಅಲ್ಲ, ಅದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿ, ಹೊಸ ಪ್ರಯತ್ನಗಳ ಭರವಸೆ ಮತ್ತು ವಿಶ್ವಾಸ ನೀಡಿದ್ದಾರೆ.