ಕೊನೆಗೂ ಸಿಕ್ತು ಅಸಲಿ ಲೆಕ್ಕ: ಬಾಲಿವುಡ್ ನಲ್ಲಿ 9 ದಿನಗಳಲ್ಲಿ ಕಾಂತಾರ ಸಿನಿಮಾ ನಿಜಕ್ಕೂ ಗಳಿಸಿದ್ದು ಅದೆಷ್ಟು ಕೋಟಿ ಗೊತ್ತೇ??

ಕೊನೆಗೂ ಸಿಕ್ತು ಅಸಲಿ ಲೆಕ್ಕ: ಬಾಲಿವುಡ್ ನಲ್ಲಿ 9 ದಿನಗಳಲ್ಲಿ ಕಾಂತಾರ ಸಿನಿಮಾ ನಿಜಕ್ಕೂ ಗಳಿಸಿದ್ದು ಅದೆಷ್ಟು ಕೋಟಿ ಗೊತ್ತೇ??

ಕಾಂತಾರ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಕನ್ನಡದಲ್ಲಿ ಸೆಪ್ಟೆಂಬರ್ 30ರಂದು ಕಾಂತಾರ ಸಿನಿಮಾ ತೆರೆಕಂಡಿತು. ಮೊದಲ ದಿನ ಸಿನಿಮಾ ಮೊದಲ ರಿವ್ಯೂ ಹೊರಬಂದಾಗಿನಿಂದ, ಸಿನಿಮಾ ಮೇಲಿನ ಕ್ರೇಜ್ ದುಪ್ಪಟ್ಟಾಯಿತು. ಕನ್ನಡ ಸಿನಿಮಾಗೆ ಎಲ್ಲೆಡೆ ಭಾರಿ ರೆಸ್ಪಾನ್ಸ್ ಬರಲು ಶುರುವಾಯಿತು. ಹಾಗಾಗಿ, ಬೇರೆ ಭಾಷೆಗಳ ಜನರು ಸಹ ಈ ಸಿನಿಮಾವನ್ನು ತಮ್ಮ ಭಾಷೆಯಲ್ಲಿ ನೋಡಬೇಕು ಎಂದು ಆಸೆ ಪಟ್ಟರು. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ…

ಸಿನಿಪ್ರಿಯರು ಮತ್ತು ಸಿನಿಮಾ ತಯಾರಕರು ಕೇಳಿಕೊಂಡ ಕಾರಣ ಕಾಂತಾರ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಹ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ ಇನ್ನೇನು ಒಂದು ತಿಂಗಳು ಕಳೆಯುತ್ತಿದ್ದರು ಸಹ, ಕಾಂತಾರ ಸಿನಿಮಾ ಮೇಲೆ ಜನರಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ವಿಶೇಷವಾಗಿ ಹಿಂದಿ ಭಾಷೆಯಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಅಕ್ಟೋಬರ್ 15ರಂದು ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಯಿತು, ಈಗಿನವರೆಗೂ ಹಿಂದಿಯಲ್ಲೇ ಬರೋಬ್ಬರಿ 19.60 ಕೋಟಿ ಕಲೆಕ್ಷನ್ ಮಾಡಿದೆ. ಬಾಲಿವುಡ್ ಸಿನಿಮಾಗಳನ್ನೇ ಹಿಂದಿಕ್ಕಿ ಕಲೆಕ್ಷನ್ ಮಾಡುತ್ತಿದೆ.

ಕಾಂತಾರ ಸಿನಿಮಾ ನಿನ್ನೆ ಶನಿವಾರ ಹಿಂದಿ ಭಾಷೆಯಲ್ಲಿ 2.55 ಕೋಟಿ ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ 150 ಕೋಟಿಗಿಂತ ಹೆಚ್ಚಿನ ಗಳಿಕೆ ಮಾಡಿದೆ. ಕನ್ನಡ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ, ರೀಚ್ ಆಗುತ್ತಿದೆ ಎನ್ನುವುದು ಕನ್ನಡಿಗರಿಗೆ ಸಂತೋಷ ಆಗುತ್ತಿದೆ. ಇನ್ನು ಮುಂದಿನ ವಾರ ದೀಪಾವಳಿ ಹಬ್ಬ, ಸಾಲು ಸಾಲು ರಜೆಗಳಿವೆ. ಹಾಗಾಗಿ ಕಾಂತಾರ ಸಿನಿಮಾ ಇನ್ನು ಹೆಚ್ಚು ಕಲೆಕ್ಷನ್ ಮಾಡುವುದರಲ್ಲಿ ಸಂದೇಹವಿಲ್ಲ. ಈಗಾಗಲೇ ಅಭಿಮಾನಿಗಳು ಹೇಳುತ್ತಿರುವ ಹಾಗೆ, ದೀಪಾವಳಿ ಹಬ್ಬಕ್ಕೆ ಬಿಡುಗಡೆ ಆಗುವ ಸಿನಿಮಾಗಳನ್ನು ಕಾಂತಾರ ಹಿಂದಿಕ್ಕುತ್ತದೆ ಎನ್ನಲಾಗುತ್ತಿದೆ.