ಕಾಂತಾರ ಸಿನೆಮಾವನ್ನು ವಿವಾದ ಮಾಡಲು ಪ್ರಯತ್ನ ಪಟ್ಟ ಚೇತನ್ ಗೆ ತಕ್ಕ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ. ಹೇಳಿದ್ದೇನು ಗೊತ್ತೇ??

ಕಾಂತಾರ ಸಿನೆಮಾವನ್ನು ವಿವಾದ ಮಾಡಲು ಪ್ರಯತ್ನ ಪಟ್ಟ ಚೇತನ್ ಗೆ ತಕ್ಕ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ. ಹೇಳಿದ್ದೇನು ಗೊತ್ತೇ??

ಕಾಂತಾರ ಸಿನಿಮಾ ಇಂದು ದೇಶದ ಎಲ್ಲೆಡೆ ಒಳ್ಳೆಯ ಹೆಸರು ಪಡೆದುಕೊಳ್ಳುತ್ತಿದೆ, ಸಿನಿಮಾ ನೋಡಿದ ಎಲ್ಲರೂ ರಿಷಬ್ ಶೆಟ್ಟಿ ಅವರು ಬರೆದಿರುವ ಕಥೆ, ತುಳುನಾಡಿನ ಸಂಸ್ಕೃತಿ, ಭೂಕ ಕೋಲ, ದೈವಾರಾಧನೆ, ದೈವದ ಆಚರಣೆ ಇದೆಲ್ಲವನ್ನು ಸಹ ಮೆಚ್ಚಿಕೊಂಡಿದ್ದು, ಕರ್ನಾಟಕದಲ್ಲಿ ಇದ್ದರು ಈ ಆಚರಣೆಗಳ ಬಗ್ಗೆ ಗೊತ್ತಿರಲಿಲ್ಲ, ತುಳುನಾಡಿನ ಸಂಸ್ಕೃತಿ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ರಿಷಬ್ ಅವರಿಗೆ ಧನ್ಯವಾದಗಳು ಎಂದು ಹೇಳುತ್ತಿದ್ದಾರೆ. ಆದರೆ ಸ್ಯಾಂಡಲ್ ವುಡ್ ನಟ ಚೇತನ್ ಅವರು ಇದಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಕೆಲ ಸಮಯದ ಹಿಂದೆ ರಿಷಬ್ ಶೆಟ್ಟಿ ಅವರು, ಭೂತಕೋಲ ನಮ್ಮ ಹಿಂದೂ ಸಂಸ್ಕೃತಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು..

ಅದಕ್ಕೆ ವಿರುದ್ಧವಾಗಿ ಮಾತನಾಡಿರುವ ಚೇತನ್ ಅವರು ರಿಷಬ್ ಶೆಟ್ಟಿ ಅವರ ಮಾತಿನಲ್ಲಿ ಸತ್ಯವಿಲ್ಲ ಎಂದು ಹೇಳಿದ್ದಾರೆ. ಇದೀಗ ಚೇತನ್ ಅವರ ಮಾತಿಗೆ ರಿಷಬ್ ಶೆಟ್ಟಿ ಅವರು ಉತ್ತರ ನೀಡಿದ್ದಾರೆ, “ಸಿನಿಮಾ ಚಿತ್ರೀಕರಣ ನಡೆಯುವಾಗ, ಅಲ್ಲಿನ ಮೂಲ ಜನರು ನಮ್ಮ ಜೊತೆಯಲ್ಲೇ ಇದ್ದರು, ಹಿಂದಿನಿಂದಲು ಭೂತಕೋಲವನ್ನು ನಂಬಿ, ದೈವವನ್ನು ನಂಬಿರುವ ಕುಟುಂಬದಿಂದ ಬಂದವನು ನಾನು, ದೈವದ ಬಗ್ಗೆ ಸಿನಿಮಾ ಮಾಡುವಾಗ, ದೈವವನ್ನು ಲ್ಲಿನ ಜನರ ಮನಸ್ಸಿಗೆ ನೋವಾಗಬಾರದು, ಯಾವುದೇ ಕಾರಣಕ್ಕೂ ತಪ್ಪಾಗಬಾರದು ಎನ್ನುವುದು ನನ್ನ ಕಾಳಜಿ ಆಗಿತ್ತು. ಈ ಕಾರಣದಿಂದಲೇ, ಬಹಳ ಎಚ್ಚರಿಕೆಯಿಂದ ಶಾಟ್ಸ್ ತೆಗೆಯುತ್ತಿದ್ದವು.. ಊರಿನ ಜನರನ್ನು ಜೊತೆಗಿರಿಸಿಕೊಂಡೇ ಚಿತ್ರೀಕರಣ ಮಾಡಿದೆವು, ದೈವದ ಬಗ್ಗೆ ಇದ್ದ ಪ್ರತಿ ದೃಶ್ಯದ ಚಿತ್ರೀಕರಣದ ನಂತರ ಮೂಲ ನಿವಾಸಿಗಳಿಗೆ ತೋರಿಸುತ್ತಾ ಇದ್ದೆವು.

ಈ ವಿಚಾರದ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ನನ್ನ ಕಡೆಯಿಂದ ನೋ ಕಮೆಂಟ್ಸ್.. ಅದಕ್ಕೆ ಸಂಬಂಧಪಟ್ಟವರು ಉತ್ತರ ಕೊಡುತ್ತಾರೆ..ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ಸಿನಿಮಾವನ್ನು ನಾನು ಮಾಡುತ್ತೇನೆ, ಸಿನಿಮಾ ನೋಡಿದವರು ಅದನ್ನು ಸರಿ ಅಥವಾ ತಪ್ಪು ಎಂದು ಹೇಳಬಹುದು, ಅವರಿಗೆ ಆ ಅಧಿಕಾರ ಇದೆ. ಕಾಂತಾರ ಸಿನಿಮಾ ನನ್ನದಲ್ಲ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಸಿನಿಮಾಗೆ ಪ್ರತಿಫಲ ಸಿಕ್ಕಿದೆ. ಕಾಂತಾರ ಚಿತ್ರಕ್ಕಾಗಿ ರಕ್ತ ಸುರಿಸಿದ್ದೇನೆ, ಪ್ರತಿಫಲಕ್ಕೆ ಉತ್ತರವನ್ನು ವೀಕ್ಷಕರಿಗೆ ಬಿಟ್ಟಿದ್ದೇನೆ. ದೈವದ ಬಗ್ಗೆ ಸಂಸ್ಕೃತಿ ಬಗ್ಗೆ ಮಾತನಾಡುವ ಅರ್ಹತೆ ನನಗಿಲ್ಲ, ಆ ರೀತಿ ಹೇಳಿದವರಿಗೆ ಇದೆಯೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ದೈವಾರಾಧನೆ ಮಾಡಿಕೊಂಡು ಬರುತ್ತಿರುವವರಿಗೆ ಮಾತ್ರ ಅವುಗಳ ಬಗ್ಗೆ ಮಾತನಾಡುವ ಅರ್ಹತೆ ಇದೆ..” ಎಂದು ಚೇತನ್ ಅವರ ಮಾತಿಗೆ ಟಾಂಗ್ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ.