ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಉಲ್ಟಾ ಹೊಡೆದ ರೋಹಿತ್ ಶರ್ಮ ಲೆಕ್ಕಾಚಾರ: ವಿಶ್ವಕಪ್ ನಲ್ಲಿ ರೋಹಿತ್ ಗೆ ಹೊಸ ತಲೆ ನೋವು. ದ್ರಾವಿಡ್ ಕೂಡ ಟೆನ್ಶನ್ ನಲ್ಲಿ.

1,806

Get real time updates directly on you device, subscribe now.

ಭಾರತ ತಂಡಕ್ಕೆ ಒಂದಲ್ಲ ಒಂದು ಅಡೆತಡೆ ತಲೆನೋವುಗಳು ಬರುತ್ತಲೇ ಇದೆ. ಅಕ್ಟೋಬರ್ 23ರಂದು ವಿಶ್ವಕಪ್ ನ ಮೊದಲ ಮ್ಯಾಚ್ ಅನ್ನು ಪಾಕಿಸ್ತಾನ್ ವಿರುದ್ಧ ಆಡಲಿರುವ ಭಾರತ, ಎದುರಾಳಿ ತಂಡವನ್ನು ಸೋಲಿಸಲು ಬಲಿಷ್ಠ ಪ್ಲೇಯಿಂಗ್ 11 ಅನ್ನು ಕಟ್ಟಬೇಕು. ಬ್ಯಾಟಿಂಗ್ ಲೈನಪ್ ನಲ್ಲಿ ದೊಡ್ಡ ಸಮಸ್ಯೆ ಇಲ್ಲದೆ ಹೋದರು, ಬೌಲಿಂಗ್ ವಿಭಾಗದಲ್ಲಿ ಭಾರತ ಸ್ಟ್ರಾಂಗ್ ಆಗಬೇಕು, ಇದಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ 7 ಬೌಲರ್ ಗಳನ್ನು ಬಳಸಿ, ಪ್ರಯೋಗ ಮಾಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಹರ್ಷಲ್ ಪಟೇಲ್ ಅವರಿಗೆ ಅವಕಾಶ ನೀಡಿ, ಈ ಮೂವರಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಒಬ್ಬರನ್ನು ಆಯ್ಕೆಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿತ್ತು.

ಆದರೆ ಅದೆಲ್ಲವೂ ಈಗ ಉಲ್ಟಾ ಹೊಡೆದಿದೆ. ಭಾರಿ ಮಳೆಯ ಕಾರಣ, ನಿನ್ನೆಯ ಅಭ್ಯಾಸ ಪಂದ್ಯ ರದ್ದಾಗಿದ್ದು, ಈ ಮೂವರಲ್ಲಿ ಪ್ಲೇಯಿಂಗ್ 11 ಗೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನುವ ಚಿಂತೆ ಕ್ಯಾಪ್ಟನ್ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಶುರುವಾಗಿದೆ.. ಲೆಫ್ಟ್ ಹ್ಯಾಂಡ್ ವೇಗಿ ಅರ್ಷದೀಪ್ ಸಿಂಹ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಖಚಿತವಾಗಿದೆ, ಇನ್ನು ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಅವರು ವೇಗವಾಗಿ ಬೌಲಿಂಗ್ ಮಾಡುವ ಕಾರಣ, ಅವರು ವೇಗಿಯಾಗಿ ಇರುತ್ತಾರೆ. ಇನ್ನು ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಮೋಹಮ್ಮದ್ ಶಮಿ ಅವರ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕಿದೆ.

ಸ್ಪಿನ್ನರ್ ಗಳ ವಿಚಾರಕ್ಕೆ ಬಂದರೆ, ಎರಡು ಆಯ್ಕೆಗಳಿವೆ, ಅಕ್ಷರ್ ಪಟೇಲ್ ಮತ್ತು ಅಶ್ವಿನ್, ಅಕ್ಷರ್ ಅವರು ಎಡಗೈ ಸ್ಪಿನ್ನರ್ ಆಗಿರುವುದರಿಂದ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.
ಇನ್ನು ಇಷ್ಟು ವರ್ಷಗಳ ಅನುಭವದ ವಿಚಾರಕ್ಕೆ ಬಂದರೆ, ಚಾಹಲ್ ಅವರಿಗಿಂತ ಅಶ್ವಿನ್ ಅವರು ಸೂಕ್ತ ಎನ್ನಿಸುತ್ತಾರೆ. ಈ ಮೂಲಕ ಭಾರತ ತಂಡ ನಾಲ್ಕು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಬೌಲಿಂಗ್ ನಲ್ಲಿ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಆಲ್ ರೌಂಡರ್ ಗಳಾಗಿರುವ ಕಾರಣ, ಇವರನ್ನು ಆಯ್ಕೆ ಮಾಡಿದರೆ ಬ್ಯಾಟಿಂಗ್ ಲೈನಪ್ ಇನ್ನು ಸ್ಟ್ರಾಂಗ್ ಆಗಿರುತ್ತದೆ. ಆದರೆ, ಅರ್ಷದೀಪ್ ಸಿಂಗ್ ಅವರೊಡನೆ ಕಣಕ್ಕೆ ಇಳಿಯುವ ವೇಗಿಗಳು ಯಾರಾಗುತ್ತಾರೆ ಎನ್ನುವ ಪ್ರಶ್ನೆ ಇದೆ.

ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ನಮ್ಮ ತಂಡದಲ್ಲಿ ಸ್ಥಾನ ಇತ್ತು, ಈಗ ಬುಮ್ರ ಅವರ ಬದಲಾಗಿ, ಶಮಿ ಅವರು ಬಂದಿದ್ದಾರೆ, ಶಮಿ ಅವರು ಕಳೆದ ವರ್ಷದಿಂದ ಭಾರತದ ಪರವಾಗಿ ಆಡಿಲ್ಲ, ಜೊತೆಗೆ ಆಡಿರುವ 17 ಪಂದ್ಯಗಳಲ್ಲಿ 18 ವಿಕೆಟ್ಸ್ ಪಡೆದಿದ್ದಾರೆ. ಹಾಗಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಇಬ್ಬರು ವೇಗಿಗಳನ್ನು ಆಯ್ಕೆ ಮಾಡುವ ಪ್ಲಾನ್ ಮಾಡಿಕೊಳ್ಳಲಾಗಿತ್ತು, ಈಗ ಅದು ಉಲ್ಟಾ ಹೊಡೆದಿದ್ದು, ಮೂವರಲ್ಲಿ ಪ್ಲೇಯಿಂಗ್ 11 ಗೆ ಆಯ್ಕೆ ಆಗುವ ವೇಗಿಗಳು ಯಾರು ಎನ್ನುವ ಪ್ರಶ್ನೆ ಕುತೂಹಲವಾಗಿಯೇ ಉಳಿದುಕೊಂಡಿದೆ.

Get real time updates directly on you device, subscribe now.