ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೇ??
ವಿಶ್ವಕಪ್ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೇ??
ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಿದ್ದು, ಇದರಲ್ಲಿ ಸೂಪರ್ 12 ಹಂತದ ಪಂದ್ಯ ಶನಿವಾರದಿಂದ ನಡೆಯಲಿದ್ದು, ಭಾನುವಾರ ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಈ ಪಂದ್ಯ ಎರಡು ತಂಡಗಳ ಪಾಲಿಗೆ ಬಹಳ ಮುಖ್ಯವಾದ ಪಂದ್ಯ. ಕಳೆದ ವರ್ಷ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಪಾಕಿಸ್ತಾನ್ ಭಾರತವನ್ನು ಸೋಲಿಸಿತ್ತು, ಆ ಸೇಡನ್ನು ತೀರಿಸಿಕೊಳ್ಳಲು ಭಾರತ ತಂಡ ಕಾಯುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕೊನೆಯ ಕ್ಷಣಗಳ ಅಭ್ಯಾಸ ನಡೆಸುತ್ತಿದೆ ಈ ಸಮಯದಲ್ಲಿ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ತಂಡಕ್ಕೆ ಖಡಕ್ ಸಂದೇಶ ನೀಡಿದ್ದಾರೆ..
ಕಳೆದ ವರ್ಷ ಭಾರತ ತಂಡದ ರವಿಶಾಸ್ತ್ರಿ ಅವರ ಕೋಚಿಂಗ್ ನಲ್ಲಿ ವಿಶ್ವಕಪ್ ಆಡಿತ್ತು, ಈ ವರ್ಷ ದ್ರಾವಿಡ್ ಅವರ ಕೋಚಿಂಗ್ ನಲ್ಲಿ ಅಡಲಿದೆ. ಈ ವರ್ಷ ತಂಡ ಹೇಗಿದೆ ಎನ್ನುವ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ ಅವರು, “ಈ ವರ್ಷ ಭಾರತ ತಂಡ ಬಲಿಷ್ಠವಾಗಿದೆ, ಮುಖ್ಯ ವೇಗಿ ಬುಮ್ರ ಅವರು ತಂಡದಲ್ಲಿ ಇಲ್ಲದೆ ಹೋದರು, ಸೆಮಿಫೈನಲ್ಸ್ ತಲುಪುತ್ತಾರೆ. ಹಿಂದಿನ ಆರೇಳು ವರ್ಷಗಳಿಂದ ನಾನು ಭಾರತ ತಂಡದ ಭಾಗವಾಗಿದ್ದೆ, ಈಗ ಹೊರಗಿನಿಂದ ತಂಡವನ್ನು ನೋಡುತ್ತಿದ್ದೇನೆ. ಬ್ಯಾಟಿಂಗ್ ಲೈನಪ್ ಅದ್ಭುತವಾಗಿದೆ. 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ, 6ನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಆಡುವುದು ತಂಡಕ್ಕೆ ಯಶಸ್ಸು ತರುತ್ತದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಉತ್ತಮ ಪ್ರದರ್ಶನ ನೀಡುವಾಗ, ಆರಂಭಿಕ ಬ್ಯಾಟ್ಸ್ಮನ್ ಗಳಿಗೆ ಒತ್ತಡ ಕಡಿಮೆ ಆಗುತ್ತದೆ..” ಎಂದಿದ್ದಾರೆ ರವಿಶಾಸ್ತ್ರಿ ಅವರು.
ಇನ್ನು ಭಾರತ ತಂಡದ ಫೀಲ್ಡಿಂಗ್ ಬಗ್ಗೆ ಮಾತನಾಡಿ, ಫೀಲ್ಡಿಂಗ್ ಸರಿ ಮಾಡಿಕೊಳ್ಳಬೇಕು ಎಂದಿದ್ದಾರೆ, “ಭಾರತ ತಂಡ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಫೀಲ್ಡಿಂಗ್ ನಲ್ಲಿ ಉಳಿಸುವ 15 ರಿಂದ 20 ರನ್ ಗಳು ತಂಡದ ಮೇಲೆ ಭಾರಿ ಪರಿಣಾಮ ಬೀರುತ್ತದೆ.. ಏಷ್ಯಾಕಪ್ ನಲ್ಲಿ ಶ್ರೀಲಂಕಾ ಗೆಲ್ಲಲು ಮುಖ್ಯ ಕಾರಣ ಅವರು ಮಾಡಿದ ಫೀಲ್ಡಿಂಗ್. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಹುಚ್ಚರ ರೀತಿಯಲ್ಲಿ ಫೀಲ್ಡಿಂಗ್ ಮಾಡುತ್ತಾರೆ. ಅದೇ ರೀತಿ ಭಾರತ ತಂಡ ಕೂಡ ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಏಕೆಂದರೆ ಫೀಲ್ಡಿಂಗ್ ಇಂದ ಇಡೀ ಪಂದ್ಯವನ್ನೇ ಬದಲಾಯಿಸಬಹುದು. ಆಗ ಬ್ಯಾಟ್ಸ್ಮನ್ ಗಳ ಮೇಲೆ ಹೆಚ್ಚು ಒತ್ತಡ ಇರುವುದಿಲ್ಲ..” ಎಂದು ರವಿಶಾಸ್ತ್ರಿ ಅವರು ಅಭಿಪ್ರಾಯ ಪಟ್ಟಿದ್ದಾರೆ.