ವಿಶ್ವಕಪ್ ಗೂ ಮುನ್ನವೇ ಕೊಹ್ಲಿ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ಹೇಳಿದ್ದೇನು ಗೊತ್ತೇ?

ವಿಶ್ವಕಪ್ ಗೂ ಮುನ್ನವೇ ಕೊಹ್ಲಿ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ಹೇಳಿದ್ದೇನು ಗೊತ್ತೇ?

ರನ್ ಮಷಿನ್ ಕಿಂಗ್ ಕೋಹ್ಲಿ ಅವರು ಎಂತಹ ಅದ್ಭುತವಾದ ಬ್ಯಾಟ್ಸ್ಮನ್ ಎಂದು ನಮಗೆಲ್ಲಾ ಗೊತ್ತಿದೆ. ಹಲವು ವರ್ಷಗಳಿಂದ ಕ್ರಿಕೆಟ್ ನಲ್ಲಿ ಅವರು ಮಾಡಿರುವ ಸಾಧನೆ ಅಗಾಧ. ವಿರಾಟ್ ಅವರು ಕ್ರಿಕೆಟ್ ಲೋಕದಲ್ಲಿ ಹಲವು ದಾಖಲೆಗೆಳನ್ನು ಮಾಡಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ವಿರಾಟ್ ಕೋಹ್ಲಿ ಅವರು ಕಳಪೆ ಫಾರ್ಮ್ ನಲ್ಲಿದ್ದರು, ಇಂಗ್ಲೆಂಡ್ ಸರಣಿ ಪಂದ್ಯಗಳ ನಂತರ ಕೋಹ್ಲಿ ಅವರು ಸುಮಾರು ಒಂದು ತಿಂಗಳ ಕಾಲ ಬ್ರೇಕ್ ಪಡೆದು, ಏಷ್ಯಾಕಪ್ ಸರಣಿಯ ಮೂಲಕ ವಾಪಸ್ ತಮ್ಮ ಲಯವನ್ನು ಕಂಡುಕೊಂಡರು. ಏಷ್ಯಾಕಪ್ ನಲ್ಲಿ ಶತಕ ಸಿಡಿಸುವ ಮೂಲಕ ಅಭಿಮಾನಿಗಳಿಗೆ ತಾವು ಫಾರ್ಮ್ ಗೆ ಬಂದಿರುವ ಸೂಚನೆ ನೀಡಿದರು ವಿರಾಟ್.

ಅದಾದ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಮತ್ತು ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳಲ್ಲಿ ವಿರಾಟ್ ಅವರು ಉತ್ತಮವ ಪ್ರದರ್ಶನ ನೀಡಿದರು. 2 ಸಾರಿ ಅರ್ಧಶತಕ ಸಿಡಿಸಿದರು. ಪ್ರಸ್ತುತ ವಿರಾಟ್ ಅವರು ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಎರಡು ಅಭ್ಯಾಸ ಪಂದ್ಯಗಳಲ್ಲಿ ಅಲಭ್ಯರಾಗಿದ್ದ ಕೋಹ್ಲಿ ಅವರು, ಮೊನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡಿ ಬೇಗ ಔಟ್ ಆದರು, ಹಾಗಾಗಿ ತಮ್ಮಿಂದ ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಬಹಳ ಹೊತ್ತು ಪ್ರಾಕ್ಟೀಸ್ ಮಾಡಿದ್ದಾರೆ. ಕೋಹ್ಲಿ ಅವರು ಪಾಕಿಸ್ತಾನ್ ಆಟಗಾರರ ಪಕ್ಕದಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದಾಗ, ಅವರು ಕೂಡ ಪ್ರಾಕ್ಟೀಸ್ ಮಾಡಿದ್ದಾರೆ.

ಇಂದು ನ್ಯೂಜಿಲೆಂಡ್ ವಿರುದ್ಧದ ಪ್ರಾಕ್ಟೀಸ್ ಪಂದ್ಯದಲ್ಲಿ ಸಹ ಪಾಲ್ಗೊಂಡಿದ್ದಾರೆ ವಿರಾಟ್. ನಮ್ಮ ಭಾರತದ ಹೆಮ್ಮಯ ಆಟಗಾರರ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕ್ಕಿ ಪಾಂಟಿಂಗ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ, “ವಿರಾಟ್ ಕೋಹ್ಲಿ ಅವರು ಭಾರತ ತಂಡವನ್ನು ಬಹಳ ಸಮಯದವರೆಗೂ ಅದ್ಭುತವಾಗಿ ಮುನ್ನಡೆಸಿದರು, ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು, ಅಪರೂಪದ ಸಾಧನೆ ಮಾಡಿದ್ದರು ವಿರಾಟ್. ಇಲ್ಲಿಯೆಯವರೆಗೂ ವೈಟ್ ಬಾಲ್ ಕ್ರಿಕೆಟ್ ನಲ್ಲಿ ವಿರಾಟ್ ಕೋಹ್ಲಿ ಅವರಂತಹ ಬ್ಯಾಟ್ಸ್ಮನ್ ಅನ್ನು ನಾನು ನೋಡಿಲ್ಲ. ಒನ್ ಡೇ ಕ್ರಿಕೆಟ್ ನಲ್ಲಿ ಕೋಹ್ಲಿ ಅವರು ಅದ್ಭುತವಾದ ಸಾಧನೆ ಮಾಡಿದ್ದಾರೆ..” ಎಂದು ಕೋಹ್ಲಿ ಅವರ ಗುಣಗಾನ ಮಾಡಿದ್ದಾರೆ ರಿಕ್ಕಿ ಪಾಂಟಿಂಗ್.