ಇನ್ನು ಶುರುವಾಯಿತು ಅದೃಷ್ಟ: ಮೂರು ರಾಶಿಗಳಿಗೆ ಗುರು ಗ್ರಹದಿಂದ ಅದೃಷ್ಟದ ಸುರಿಮಳೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಇನ್ನು ಶುರುವಾಯಿತು ಅದೃಷ್ಟ: ಮೂರು ರಾಶಿಗಳಿಗೆ ಗುರು ಗ್ರಹದಿಂದ ಅದೃಷ್ಟದ ಸುರಿಮಳೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??
ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಪ್ರತಿ ಗ್ರಹದ ಸ್ಥಾನ ಬದಲಾವಣೆ, ನೇರ ಚಲನೆ ಅಥವಾ ಹಿಮ್ಮುಖ ಚಲನೆ ಇದೆಲ್ಲವು ಸಹ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷ ಮಹತ್ವ ಇರುವ ಗುರು ಗ್ರಹವು, ಜ್ಞಾನ, ಮಕ್ಕಳು, ಗುರು, ಹಿರಿಯರು, ಸಂಪತ್ತು ಮತ್ತು ದಾನದ ಅಂಶ ಎಂದು ಪರಿಗಣಿಸಲಾಗುತ್ತದೆ. ನವೆಂಬರ್ 24ರಂದು ಗುರು ಗ್ರಹವು ನೇರಚಲನೆ ಶುರು ಮಾಡಲಿದೆ, ಇದರಿಂದಾಗಿ ಅಖಂಡ ಸಾಮ್ರಾಜ್ಯ ರಾಜಯೋಗ ರೂಪುಗೊಳ್ಳುತ್ತಿದ್ದು, ಈ ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ 3 ರಾಶಿಗಳ ಮೇಲೆ ಮಂಗಳಕರ ಪರಿಣಾಮ ಬೀರಲಿದ್ದು, ಅದರಿಂದಾಗಿ ಆ ರಾಶಿಗಳಿಗೆ ಹಣದ ವಿಷಯದಲ್ಲಿ ಲಾಭ ತರುತ್ತದೆ..
ಕರ್ಕಾಟಕ ರಾಶಿ :- ಗುರುದೇವರು ಈ ರಾಶಿಯ 9ನೇ ಮನೆಯ ಮೂಲಕ ಚಲನೆ ಶುರು ಮಾಡಲಿದ್ದು, ಇದು ವಿದ್ಯಾರ್ಥಿಗಳಿಗೆ ಶುಭಫಲ ತರುತ್ತದೆ, ಓದುವ ಕಡೆಗೆ ಗಮನ ಹೆಚ್ಚಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ, ಪ್ರಯಾಣ ಬೆಳೆಸುವ ಹಾಗೆ ಆಗಬಹುದು. ಈ ಅಖಂಡ ಸಾಮ್ರಾಜ್ಯ ರಾಜಯೋಗದಿಂದ ಈ ರಾಶಿಯವರಿಗೆ ಅಧಿಕಾರ ಸಿಗಬಹುದು.
ವೃಷಭ ರಾಶಿ :- ಅಖಂಡ ಸಾಮ್ರಾಜ್ಯ ರಾಜಯೋಗದಿಂದ ವೃಷಭ ರಾಶಿಯವರಿಗೆ ಅದೃಷ್ಟ ಕೈಹಿಡಿಯುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಅದೃಷ್ಟ ಹೊಂದುತ್ತೀರಿ. 11ನೇ ಮನೆಯಲ್ಲಿ ಗುರುವಿನ ಸಂಚಾರ ನಡೆಯುವುದರಿಂದ ಇವರ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ. ವಾಹನ ಅಥವಾ ಆಸ್ತಿ ಖರೀದಿ ಮಾಡುವ ಯೋಗ ಬರಬಹುದು. ನೀವು ಆದಾಯ ಗಳಿಸಲು ಹೊಸ ಮೂಲಗಳು ಬರುವ ಕಾರಣದಿಂದ ಲಾಭ ಕೂಡ ಜಾಸ್ತಿಯಾಗುತ್ತದೆ.
ಮಿಥುನ ರಾಶಿ :- ಅಖಂಡ ಸಾಮ್ರಾಜ್ಯ ರಾಜಯೋಗದಿಂದ ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಗುರುವಿನ ಚಲನೆ ಇರುವುದರಿಂದ, ಯಶಸ್ಸು ಕಾಣುತ್ತೀರಿ. ಕೆಲಸ ಮಾಡುವ ಕಡೆ ನಿಮ್ಮ ಕೊಲಿಗ್ ಗಳ ಜೊತೆಗೆ ಮತ್ತು ಮೇಲಧಿಕಾರಿಗಳ ಜೊತೆಗೆ ಒಡನಾಟ ಚೆನ್ನಾಗಿರುತ್ತದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಕೇಳಿಬರುತ್ತದೆ. ಸರ್ಕಾರದ ನೌಕರಿ ಮಾಡುತ್ತಿರುವವರಿಗೆ ಮತ್ತು ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದಾಗುತ್ತದೆ.