ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಗೆದ್ದರು ಕೂಡ ಭಾರತ ತಂಡಕ್ಕೆ ಶಾಕ್: ಮತ್ತೊಬ್ಬ ಆಟಗಾರನಿಗೆ ಗಾಯ. ಈ ಬಾರಿ ಇಂಜುರಿ ಮಾಡಿಕೊಂಡದ್ದು ಯಾರು ಗೊತ್ತೇ??

62

Get real time updates directly on you device, subscribe now.

ವಿಶ್ವಕಪ್ ಗಾಗಿ ಕೊನೆಯ ಹಂತದ ತಯಾರಿಗಳು, ಅಭ್ಯಾಸ ಪಂದ್ಯಗಳನ್ನು ನಡೆಸುತ್ತಿರುವ ವೇಳೆ ಮತ್ತೊಂದು ಆಘಾತ ಭಾರತ ತಂಡಕ್ಕೆ ಎದುರಾಗಿದೆ. ಇದೀಗ ಮತ್ತೊಬ್ಬ ಆಟಗಾರ ಗಾಯಕ್ಕೆ ಒಳಗಾಗಿದ್ದಾರೆ. ವಿಶ್ವಕಪ್ ಗೆ 15 ಸದಸ್ಯರ ತಂಡವನ್ನು ಬಿಸಿಸಿಐ ಪ್ರಕಟಣೆ ಮಾಡಿದ ಕೆಲವೇ ಸಮಯದಲ್ಲಿ ಜಸ್ಪ್ರೀತ್ ಬುಮ್ರ ಅವರಿವೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿ ಅವರು, ವಿಶ್ವಕಪ್ ಇಂದ ದೂರ ಉಳಿಯುವ ಹಾಗೆ ಆಯಿತು. ಇನ್ನು ಆಸ್ಟ್ರೇಲಿಯಾಗೆ ಹೊರಡುವ ಸಮಯದಲ್ಲಿ ದೀಪಕ್ ಚಹರ್ ಅವರಿಗೆ ಕಾಲಿಗೆ ಇಂಜುರಿ ಆಗಿ ವಿಶ್ವಕಪ್ ಮಿಸ್ ಮಾಡಿಕೊಂಡರು. ಇದರಿಂದಾಗಿ ತಂಡದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು.

ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದ ಮೊಹಮ್ಮದ್ ಶಮಿ ಅವರು, ಜಸ್ಪ್ರೀತ್ ಬುಮ್ರ ಅವರ ಬದಲಾಗಿ ತಂಡಕ್ಕೆ ಆಯ್ಕೆಯಾದರು. ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಗೆ ಶಮಿ ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಆಯ್ಕೆಯಾದರು, ದೀಪಕ್ ಚಹರ್ ಅವಈ ಸ್ಥಾನಕ್ಕೆ ಶಾರ್ದೂಲ್ ಠಾಕೂರ್ ಆಯ್ಕೆಯಾದರು. ಈ ಸಮಸ್ಯೆ ಇಷ್ಟಕ್ಕೆ ಮುಗಿಯದೆ, ಇದೀಗ ರಿಷಬ್ ಪಂತ್ ಅವರು ಸಹ ಗಾಯಕ್ಕೆ ಒಳಗಾಗಿದ್ದಾರೆ. ಬ್ರಿಸ್ಟನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯಕ್ಕಿಂತ ಮೊದಲು ರಿಷಬ್ ಪಂತ್ ಅವರು ತಮ್ಮ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಅಭ್ಯಾಸ ಪಂದ್ಯ ನಡೆಯುವಾಗ, ರಿಷಬ್ ಪಂತ್ ಅವರು ಮೊಣಕಾಲಿಗೆ ಐಸ್ ಪ್ಯಾಕ್ ಹಾಕಿ ಡಕ್ ಔಟ್ ನಲ್ಲಿ ಕುಳಿತಿದ್ದು ಕಣ್ಣಿಗೆ ಬಿದ್ದಿದೆ.

ಈ ಗಾಯ ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ. ಜೊತೆಗೆ, ತಂಡದಲ್ಲಿ ಇಬ್ಬರು ವಿಕೆಟ್ ಕೀಪರ್ ಮತ್ತು ಬ್ಯಾಟರ್ ಇದ್ದಾರೆ, ಕೆ.ಎಲ್.ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರು ಇರುವುದರಿಂದ ರಿಷಬ್ ಪಂತ್ ಅವರ ಬಗ್ಗೆ ಮ್ಯಾನೇಜ್ಮೆಂಟ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಇನ್ನು ಪ್ಲೇಯಿಂಗ್ 11 ನಲ್ಲಿ ಪಂತ್ ಅವರಿಗಿಂತ ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ಸಿಗುವ ಸಂಭವ ಹೆಚ್ಚಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಈ ಗಾಯದ ಸಮಸ್ಯೆಗಳಿಂದ ಮುಕ್ತಿ ಅಂತೂ ಸಿಗುತ್ತಿಲ್ಲ. ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಭಾರತ ತಂಡದ ಮೊದಲ ವಿಶ್ವಕಪ್ ಪಂದ್ಯ ನಡೆಯಲಿದ್ದು, ತಂಡದ ಪರ್ಫಾರ್ಮೆನ್ಸ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.