ಸುಖಾ ಸುಮ್ಮನೆ ಕೊಹ್ಲಿ ರವರಿಗೆ ಬೇಡದ ಸಲಹೆ ಕೊಟ್ಟ ಗಂಭೀರ್: ರೊಚ್ಚಿಗೆದ್ದ ಅಭಿಮಾನಿಗಳು ಫುಲ್ ಗರಂ. ಏನು ಹೇಳಿದ್ದಾರೆ ಗೊತ್ತೇ??

ಸುಖಾ ಸುಮ್ಮನೆ ಕೊಹ್ಲಿ ರವರಿಗೆ ಬೇಡದ ಸಲಹೆ ಕೊಟ್ಟ ಗಂಭೀರ್: ರೊಚ್ಚಿಗೆದ್ದ ಅಭಿಮಾನಿಗಳು ಫುಲ್ ಗರಂ. ಏನು ಹೇಳಿದ್ದಾರೆ ಗೊತ್ತೇ??

ಭಾರತ ಕ್ರಿಕೆ ತಂಡ ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟಿದೆ. ಅಕ್ಟೋಬರ್ 16ರಿಂದ ವಿಶ್ವಕಪ್ ಪಂದ್ಯಗಳು ಶುರುವಾಗಿದ್ದು, ಅಕ್ಟೋಬರ್ 23ರಂದು ಭಾರತ ತಂಡ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಪಾಕಿಸ್ತಾನ್ ವಿರುದ್ಧ ಈ ಪಂದ್ಯ ನಡೆಯಲಿದ್ದು, ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕು ಎಂದು ಮಹತ್ವದ ತಯಾರಿಗಳು ನಡೆಯುತ್ತಿದೆ. ಈಗಾಗಲೇ ಮೂರು ಅಭ್ಯಾಸ ಪಂದ್ಯಗಳನ್ನಾಡಿರುವ ಭಾರತ ತಂಡ ಎರಡು ಪಂದ್ಯಗಳಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಆಡಿದ ಪಂದ್ಯದಲ್ಲಿ ಶಮಿ ಅವರ ಬೌಲಿಂಗ್ ಅದ್ಭುತವಾಗಿತ್ತು. ಇನ್ನು ನಮ್ಮ ತಂಡದ ಬ್ಯಾಟ್ಸ್ಮನ್ ಗಳು ಸಹ ಫಾರ್ಮ್ ಗೆ ಬಂದಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ..

ಭಾರತ ತಂಡಕ್ಕೆ ಈಗಾಗಲೇ ಕೆಲವು ಮಾಜಿ ಕ್ರಿಕೆಟಿಗರು ಸಲಹೆ ನೀಡುತ್ತಿದ್ದು, ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಸಹ ಸಂದರ್ಶನದಲ್ಲಿ ಭಾರತ ತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ, ಎಲ್ಲಾ ಆಟಗಾರರು ಕೂಡ ತಮ್ಮ ವೈಯಕ್ತಿಕ ಸಾಧನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಅವುಗಳನ್ನು ಮೈದಾನದಿಂದ ಹೊರಗಿಟ್ಟು ಆಟವಾಡಿದರೆ, ಖಂಡಿತವಾಗಿಯೂ ವಿಶ್ವಕಪ್ ಗೆಲ್ಲಬಹುದು ಎಂದು ಗೌತಮ್ ಗಂಭೀರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ವಿರಾಟ್ ಕೋಹ್ಲಿ ಅವರಿಗೆ ಏನು ಸಲಹೆ ನೀಡುತ್ತೀರಿ ಎಂದು ಮತ್ತೊಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರ ಕೊಟ್ಟಿರುವ ಗಂಭೀರ್ ಅವರು, “ವಿರಾಟ್ ಕೋಹ್ಲಿ ಅವರು ತಂಡಕ್ಕಾಗಿ ಹೆಚ್ಚು ರನ್ ಗಳಿಸುತ್ತಾ ಹೋಗಬೇಕು, ಇದರಿಂದ ತಂಡಕ್ಕೆ ಸಹಾಯ ಆಗುತ್ತದೆ.

ಈ ಸಮಯದಲ್ಲಿ ವೈಯಕ್ತಿಕವಾಗಿ ನೀವು ಮಾಡಿರುವ ದಾಖಲೆಗಳು ಮುಖ್ಯ ಆಗುವುದಿಲ್ಲ. ವೈಯಕ್ತಿಕ ದಾಖಲೆ ಮಾಡಲು, ಶತಕ, ಅರ್ಧಶತಕಕ್ಕಾಗಿ ರನ್ ಗಳಿಸಿದರೆ, ಯಾವುದೇ ಅರ್ಥ ಇಲ್ಲ. 20 ಅಥವಾ 40 ರನ್ ಗಳಿಸಿದರು ಸಹ, ತಂಡದ ಮೊತ್ತ 170 ಅಥವಾ 180ರ ಗಡಿ ದಾಟುವ ಹಾಗೆ ನೋಡಿಕೊಳ್ಳಬೇಕು..” ಎಂದಿದ್ದಾರೆ ಗಂಭೀರ್. ಗಂಬೀರ್ ಅವರ ಈ ಹೇಳಿಕೆ ಕೇಳಿದ ಅಭಿಮಾನಿಗಳು, ಕೋಹ್ಲಿ ಅವರನ್ನು ಬೇಕು ಎಂದೇ ಟಾರ್ಗೆಟ್ ಮಾಡುತ್ತಿದ್ದರು, ಕೋಹ್ಲಿ ಯಾವಾಗ ವೈಯಕ್ತಿಕ ಸಾಧನೆಗೆ ರನ್ ಗಳಿಸಿದ್ದಾರೆ? ಗಂಭೀರ್ ಬೇಕೆಂದೇ ಹೀಗೆ ಹೇಳಿಕೆ ನೀಡುತ್ತಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇತ್ತ ಗಂಭೀರ್ ಅವರ ಅಭಿಮಾನಿಗಳು, ಅವರು ಹೇಳಿದ್ದರಲ್ಲಿ ಸರಿ ಇದೆ ತಪ್ಪೇನು ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.ಸುಖಾ ಸುಮ್ಮನೆ ಕೊಹ್ಲಿ ರವರಿಗೆ ಬೇಡದ ಸಲಹೆ ಕೊಟ್ಟ ಗಂಭೀರ್: ರೊಚ್ಚಿಗೆದ್ದ ಅಭಿಮಾನಿಗಳು ಫುಲ್ ಗರಂ. ಏನು ಹೇಳಿದ್ದಾರೆ ಗೊತ್ತೇ??