ಆಸ್ಟ್ರೇಲಿಯಾ ವಿರುದ್ದದ ಪ್ರಾಕ್ಟೀಸ್ ಮ್ಯಾಚ್ ಬಳಿಕ ಪಾಂಡ್ಯಾ ಹೇಳಿದ್ದೇನು? ಅದೊಂದೇ ಸವಾಲು.

ಆಸ್ಟ್ರೇಲಿಯಾ ವಿರುದ್ದದ ಪ್ರಾಕ್ಟೀಸ್ ಮ್ಯಾಚ್ ಬಳಿಕ ಪಾಂಡ್ಯಾ ಹೇಳಿದ್ದೇನು? ಅದೊಂದೇ ಸವಾಲು.

ಭಾರತ ತಂಡ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಅಭ್ಯಾಸ ಪಂದ್ಯವನ್ನಾಡುತ್ತಿದೆ, ನಿನ್ನೆಯಷ್ಟೇ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾದ ಗೆಲುವು ದಾಖಲಿಸಿದೆ. ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ ಅವರು ಮತ್ತು ಕೆ.ಎಲ್.ರಾಹುಲ್ ಅವರು ಉತ್ತಮ ಪ್ರದರ್ಶನ ನೀಡಿದರು. ಫಾರ್ಮ್ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್ ಅವರು ಒಳ್ಳೆಯ ಫಾರ್ಮ್ ಗೆ ಮರಳಿ ಬಂದಿರುವುದು ಒಳ್ಳೆಯ ವಿಚಾರ ಆಗಿದೆ. ಇನ್ನು ಬೌಲಿಂಗ್ ನಲ್ಲಿ ಶಮಿ ಅವರು ಶೈನ್ ಆದರು.

ನಮ್ಮ ತಂಡದ ಸ್ಟಾರ್ ಆಲ್ ರೌಂಡರ್, ಅತ್ಯುತ್ತಮ ಫಿನಿಷರ್ ಗಳಲ್ಲಿ ಒಬ್ಬರಾಗಿರುವವರು ಹಾರ್ದಿಕ್ ಪಾಂಡ್ಯ ಅವರು ನಿನ್ನೆಯ ಪಂದ್ಯ ಮುಗಿದ ಬಳಿಕ ಮಾತನಾಡಿ, ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ, “ನಮ್ಮ ಮುಂದೆ ಇರುವ ಒಂದೇ ಒಂದು ದೊಡ್ಡ ಸವಾಲು ಎಂದರೆ ಆಸ್ಟ್ರೇಲಿಯಾ ಕಂಡೀಷನ್ ಗೆ ಹೊಂದಿಕೊಳ್ಳುವುದು. ಇಲ್ಲಿನ ಕಂಡೀಷನ್ ಗೆ ಹೊಂದಿಕೊಂಡ್ವಿ ಅಂದ್ರೆ, ಮ್ಯಾಚ್ ಗಳು, ಸ್ಕೋರ್ ಮಾಡೋದು ಇದ್ಯಾವುದು ನಮಗೆ ಒಂದು ಟಾರ್ಗೆಟ್ ಅನ್ನಿಸುವುದಿಲ್ಲ. ಮೊದಲ ಪಂದ್ಯದ ಬಳಿಕ ನಾವು ಆಸಿಸ್ ಕಂಡೀಷನ್ ಗೆ ಹೊಂದಿಕೊಂಡಿದ್ದೇವೆ. ನಾನು ಮಿಲ್ಡ್ ಆರ್ಡರ್ ಬ್ಯಾಟ್ಸ್ಮನ್ ಮತ್ತು ಪೇಸರ್ ಆಗಿರುವುದರಿಂದ ಆಸೀಸ್ ಕಂಡೀಷನ್ ನನಗೆ ತುಂಬಾ ಸಂತೋಷ ನೀಡಿದೆ..” ಎಂದು ಹೇಳಿದ್ದಾರೆ ಹಾರ್ದಿಕ್ ಪಾಂಡ್ಯ.

“ಅಸ್ಟ್ರೇಲಿಯಾ ಗ್ರೌಂಡ್ ಒಂದು ಕಡೆ ಬೌನ್ಸಿಂಗ್ ಗೆ ಸಹಾಯ ಮಾಡುತ್ತೆ, ಮತ್ತೊಂದು ಕಡೆ ವಿಕೆಟ್ ಪಡೆಯೋದಕ್ಕೆ ಸಹಾಯ ಮಾಡುತ್ತೆ. ಆಸ್ಟ್ರೇಲಿಯಾದ ದೊಡ್ಡ ಗ್ರೌಂಡ್ ಗಳೇ ನಮ್ಮ ಸವಾಲು. ಆಸ್ಟ್ರೇಲಿಯಾದ ಕೆಲವು ಗ್ರೌಂಡ್ ಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಭಾರಿಸುವುದೇ ಕಷ್ಟ. ಹಾಗಾಗಿ ಎಚ್ಚರಿಕೆಯಿಂದ ಆಟವಾಡಬೇಕು. ಪವರ್ ಪ್ಲೇ ನಂತರ 30 ಯಾರ್ಡ್ಸ್ ಸರ್ಕಲ್ ದೂರದಲ್ಲಿ ಫೀಲ್ಡರ್ಸ್ ಇರ್ತಾರೆ. ಆಗ ಬಿಗ್ ಶಾಟ್ಸ್ ಹೊಡೆಯುವಾಗ ಡಬಲ್ ಮೈಂಡ್ ಆಗಿ ಬ್ಯಾಟ್ ಮಾಡಿದರೆ ಕ್ಯಾಚ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದು ನಮ್ಮ ಮುಂದಿರುವ ಸವಾಲು..” ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಗೆದ್ದಿದ್ದು, ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ಪಂದ್ಯ ಹೀಗಿರುತ್ತದೆ ಎಂದು ಕಾದು ನೋಡಬೇಕಿದೆ.