ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಈ ಬಾರಿಯ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಗೆ ಹೋಗುವ ನಾಲ್ಕು ತಂಡಗಳನ್ನು ಹೆಸರಿಸಿದ ಸಚಿನ್; ಆಯ್ಕೆ ಮಾಡಿದ ಅಚ್ಚರಿಯ ನಾಲ್ಕು ತಂಡಗಳು ಯಾವುವು ಗೊತ್ತೇ??

79

Get real time updates directly on you device, subscribe now.

2022ರ ಟಿ20 ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 16ರಂದು ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈಗಾಗಲೇ ವಿಶ್ವಕಪ್ ನ ಅರ್ಹತಾ ಪಂದ್ಯಗಳು ಈಗ ನಡೆಯುತ್ತಿದ್ದು, ಅಕ್ಟೋಬರ್ 22ರಿಂದ ಸೂಪರ್ 12 ಹಂತದ ಪಂದ್ಯಗಳು ಶುರುವಾಗಲಿದೆ. ಪ್ರಸ್ತುತ ಈ ವರ್ಷ ವಿಶ್ವಕಪ್ ಅನ್ನು ಯಾವ ತಂಡ ಗೆಲ್ಲಬಹುದು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಕ್ರಿಕೆಟ್ ಪ್ರಪಂಚದಲ್ಲಿ ಜೋರಾಗಿಯೇ ನಡೆಯುತ್ತಿದೆ. ಹಿರಿಯ ಕ್ರಿಕೆಟ್ ಆಟಗಾರರು, ಯಾವ ತಂಡ ವಿಶ್ವಕಪ್ ಗೆಲ್ಲಬಹುದು ಎಂದು ಪ್ರಿಡಿಕ್ಟ್ ಮಾಡುತ್ತಿದ್ದಾರೆ. ಪ್ರಸ್ತುತ ಇದೇ ಪ್ರಶ್ನೆಯನ್ನು ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅವರ ಬಳಿ ಕೇಳಲಾಗಿದೆ.

ಸಚಿನ್ ತೆಂಡೂಲ್ಕರ್ ಅವರ ಬಳಿ ಈ ಬಾರಿ ಯಾವ ತಂಡ ವಿಶ್ವಕಪ್ ಗೆಲ್ಲಬಹುದು ಎಂದು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಉತ್ತರವಾಗಿ ಸಚಿನ್ ತೆಂಡೂಲ್ಕರ್ ಅವರು ಸೂಪರ್ 4 ಹಂತದಲ್ಲಿ ಯಾವ 4 ತಂಡಗಳು ಇರಬಹುದು ಎಂದು ಸಚಿನ್ ತೆಂಡೂಲ್ಕರ್ ಅವರು ಆಯ್ಕೆ ಮಾಡಿದ್ದಾರೆ, ಮೊದಲಿಗೆ ಸಚಿನ್ ಅವರು ಭಾರತ ತಂಡದ ಹೆಸರು ಹೇಳಿದ್ದಾರೆ, “ಈ ಬಾರಿ ಸೆಮಿಫೈನಲ್ ನಲ್ಲಿ ಭಾರತ ತಂಡ ಇರುವುದು ಖಂಡಿತ..” ಎನ್ನುತ್ತಾರೆ ಮಾಸ್ಟರ್ ಬ್ಲಾಸ್ಟರ್. ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡದ ಬಗ್ಗೆ ಮಾತನಾಡಿರುವ ಸಚಿನ್ ಅವರು, “ಪಾಕಿಸ್ತಾನ್ ತಂಡದ ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿದ್ದರೆ ಸೆವೈಫೈನಲ್ ಹಂತಕ್ಕೆ ಬರಬಹುದು, ಆದರೆ ಬ್ಲ್ಯಾಕ್ ಹಾರ್ಸ್ ಸೌತ್ ಆಫ್ರಿಕಾ ತಂಡದ ಪ್ರದರ್ಶನ ಅದಕ್ಕಿಂತ ಚೆನ್ನಾಗಿದ್ದು, ಪಾಕಿಸ್ತಾನ್ ವಿಫಲವಾದರೆ ಸೌತ್ ಆಫ್ರಿಕಾ ತಂಡ ಸೆಮಿಫೈನಲ್ ಗೆ ಬರಬಹುದು.” ಎಂದಿದ್ದಾರೆ.

ಆಸ್ಟ್ರೇಲಿಯಾ ತಂಡದ ಬಗ್ಗೆ ಮಾತನಾಡಿರುವ ಸಚಿನ್ ತೆಂಡೂಲ್ಕರ್ ಅವರು, ಟೂರ್ನಿ ನಡೆಯುತ್ತಿರುವುದು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾರಣ, ಟಿ20 ವಿಶ್ವಕಪ್ ನ ಸಂಪೂರ್ಣ ಲಾಭ ಆಸ್ಟ್ರೇಲಿಯಾ ತಂಡ ಪಡೆದುಕೊಳ್ಳುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂಗ್ಲೆಂಡ್ ತಂಡದ ಬಗ್ಗೆ ಮಾತನಾಡಿ, ಇಂಗ್ಲೆಂಡ್ ಸಹ ಫೈನಲ್ ತಲುಪಬಹುದು ಎಂದಿರುವ ಸಚಿನ್ ತೆಂಡೂಲ್ಕರ್ ಅವರು, ಪರಿಶ್ರಮ ಹಾಕಿದರೆ, ನ್ಯೂಜಿಲೆಂಡ್ ಸಹ ಸೆಮಿಫೈನಲ್ ತಲುಪಬಹುದು ಎಂದಿದ್ದಾರೆ. ಸಚಿನ್ ಅವರು ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ತಲುಪಬಹುದು ಎಂದಿದ್ದಾರೆ. ಸಚಿನ್ ಅವರು ಹೇಳಿರುವ ತಂಡಗಳು ಸೆಮಿಫೈನಲ್ ತಲುಪುತ್ತಾ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.