ಒಂದೇ ಓವರ್ ನಲ್ಲಿ ಮೂರು ವಿಕೆಟ್ ತೆಗೆದ ಶಮಿ ಗೆ ಒಂದೇ ಒಂದು ಓವರ್ ನೀಡಲು ಕಾರಣವೇನು ಗೊತ್ತೇ?? ರೋಹಿತ್ ಹೇಳಿದ್ದೇನು ಗೊತ್ತೇ??

ಒಂದೇ ಓವರ್ ನಲ್ಲಿ ಮೂರು ವಿಕೆಟ್ ತೆಗೆದ ಶಮಿ ಗೆ ಒಂದೇ ಒಂದು ಓವರ್ ನೀಡಲು ಕಾರಣವೇನು ಗೊತ್ತೇ?? ರೋಹಿತ್ ಹೇಳಿದ್ದೇನು ಗೊತ್ತೇ??

ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಭಾರತ ತಂಡ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಇಂದು ಒಂದು ಅಭ್ಯಾಸ ಪಂದ್ಯ, ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದಿದ್ದು, ಇದರಲ್ಲಿ ಭಾರತ ತಂಡ ಗೆಲುವು ಸಾಧಿಸಿದೆ. ಈ ಅಭ್ಯಾಸ ಪಂದ್ಯದಲ್ಲಿ ಅದ್ಭುತವಾದ ಪ್ರದರ್ಶನ ನೀಡಿದವರು ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರು. ಇಂದಿನ ಪಂದ್ಯದಲ್ಲಿ ಇವರು ಬೌಲಿಂಗ್ ಮಾಡಿದ್ದು ಒಂದೇ ಒಂದು ಓವರ್ ಆದರೂ, ಅತ್ಯದ್ಭುತ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾ ನೆಲದಲ್ಲಿ ಆಡಿರುವ ಅಭ್ಯಾಸ ಶಮಿ ಅವರಿಗೆ ಇದ್ದರು ಸಹ ಅವರಿಗೆ ಒಂದೇ ಒಂದು ಓವರ್ ನೀಡಿದ್ದು ಯಾಕೆ ಎನ್ನುವ ಪ್ರಶ್ನೆ ಶುರುವಾಗಿದ್ದು, ಅದಕ್ಕೆ ರೋಹಿತ್ ಶರ್ಮಾ ಅವರು ಉತ್ತರ ನೀಡಿದ್ದಾರೆ.

ಮೊಹಮ್ಮದ್ ಶಮಿ ಅವರು ಭಾರತದ ಪರವಾಗಿ ಕೊನೆಯದಾಗಿ ಆಡಿದ್ದು ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ. ಅದಾದ ಬಳಿಕ ಶಮಿ ಅವರನ್ನು ಟಿ20 ಮಾದರಿಯ ಪಂದ್ಯಗಳಿಂದ ದೂರ ಇಡುವುದು ಒಳ್ಳೆಯದು ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ಆದರೆ, ಜಸ್ಪ್ರೀತ್ ಬುಮ್ರ ಅವರ ಅಲಭ್ಯತೆ ಇಂದ ಶಮಿ ಅವರು ತಂಡಕ್ಕೆ ಆಯ್ಕೆಯಾಗಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಶಮಿ ಅವರಿಗೆ ಕಟ್ಟ ಕಡೆಯ ಓವರ್ ನಲ್ಲಿ ಬೌಲಿಂಗ್ ಮಾಡುವ ಅವಕಾಶ ಕೊಡಲಾಯಿತು, ಒಂದೇ ಓವರ್ ನಲ್ಲಿ 3 ವಿಕೆಟ್ ಮತ್ತು 1 ರನೌಟ್ ಸೇರಿದ ಹಾಗೆ 4 ವಿಕೆಟ್ಸ್ ಉರುಳಿಸಿದರು ಶಮಿ. ಕೊನೆಯ ಓವರ್ ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 11 ರನ್ ಗಳ ಅವಶ್ಯಕತೆ ಇತ್ತು. ಮೊದಲ ಎರಡು ಎಸೆತಗಳಲ್ಲಿ ಎರಡು ರನ್ ಗಳ ಹಾಗೆ, 4 ರನ್ ಗಳಿಸಿದರು.

ಮೂರನೇ ಬಾಲ್ ನಲ್ಲಿ, ವಿರಾಟ್ ಅವರು ಅದ್ಭುತ ಕ್ಯಾಚ್ ಹಿಡಿದ ಕಾರಣ ಪ್ಯಾಟ್ ಕಮಿನ್ಸ್ ಔಟ್ ಆದರು, ನಾಲ್ಕನೇ ಬಾಲ್ ನಲ್ಲಿ ಅಷ್ಟನ್ ಅಗರ್ ರನೌಟ್ ಆದರು, ಐದನೇ ಬಾಲ್ ನಲ್ಲಿ ಜೋಶ್ ಇಂಗ್ಲಿಷ್, 6ನೇ ಬಾಲ್ ನಲ್ಲಿ ಕೇನ್ ರಿಚರ್ಡ್ಸನ್ ಅವರನ್ನು ಔಟ್ ಮಾಡಿ 3 ವಿಕೆಟ್ಸ್ ಪಡೆದರು ಶಮಿ. ಈ ಮೂಲಕ ಒಂದೇ ಓಂದೆ ಓವರ್ ನಲ್ಲಿ 3 ವಿಕೆಟ್ಸ್ ಪಡೆರು. ಇವರಿಗೆ ಒಂದು ಓವರ್ ಮಾತ್ರ ನೀಡಿದ್ದು ಯಾಕೆ ಎಂದು ರೋಹಿತ್ ಶರ್ಮಾ ಅವರು ಮಾತನಾಡಿದ್ದಾರೆ, “ಬಹಳ ಸಮಯದ ನಂತರ ಶಮಿ ಅವರು ತಂಡಕ್ಕೆ ಮರಳಿ ಬಂದಿದ್ದರು, ಅದಕ್ಕೆ ನಾವು ಅವರಿಗೆ ಒಂದು ನೀಡುವ ನಿರ್ಧಾರ ಮಾಡಿಕೊಂಡೆವು, ಇದನ್ನು ಅವರಿಗೆ ಸವಾಲಿನ ಹಾಗೆ ನೀಡಿದೆವು. ಆ ಒಂದು ಓವರ್ ನಲ್ಲಿ ಅವರು ಎಂಥ ಪ್ರದರ್ಶನ ನೀಡಿದರು ಎಂದು ನೀವೆಲ್ಲರೂ ನೋಡಿದ್ದೀರಿ..” ಎಂದಿದ್ದಾರೆ ರೋಹಿತ್ ಶರ್ಮ.