ವಿಶ್ವಕಪ್ ನಲ್ಲಿ ಈತ ನಮಗೆ ಬಹಳ ಮುಖ್ಯ; ಈತನೇ ತಂಡದ ಪ್ರಮುಖ ಅಂಶ ಎಂದ ರೋಹಿತ್: ಆ ಕಿಲಾಡಿ ಬ್ಯಾಟ್ಸಮನ್ ಯಾರು ಅಂತೇ ಗೊತ್ತೇ?

ವಿಶ್ವಕಪ್ ನಲ್ಲಿ ಈತ ನಮಗೆ ಬಹಳ ಮುಖ್ಯ; ಈತನೇ ತಂಡದ ಪ್ರಮುಖ ಅಂಶ ಎಂದ ರೋಹಿತ್: ಆ ಕಿಲಾಡಿ ಬ್ಯಾಟ್ಸಮನ್ ಯಾರು ಅಂತೇ ಗೊತ್ತೇ?

ನಿನ್ನೆಯಷ್ಟೇ ಟಿ20 ವಿಶ್ವಕಪ್ ಪಂದ್ಯಗಳಿಗೆ ಚಾಲನೆ ಸಿಕ್ಕಿದೆ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ನ, ಮೊದಲ ಪಂದ್ಯವು ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳ ನಡುವೆ ನಡೆದಿದೆ. ವಿಶ್ವಕಪ್ ನಲ್ಲಿ ಬಹಳ ಭರವಸೆ ಮೂಡಿಸಿರುವ ತಂಡ ನಮ್ಮ ಭಾರತ, ಭಾರತದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ಅಕ್ಟೋಬರ್ 23ರಂದು ನಡೆಯಲಿದೆ. ಈ ಪಂದ್ಯಕ್ಕಿಂತ ಮೊದಲು ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಮಾಧ್ಯಮದ ಮುಂದೆ ಮಾತನಾಡಿ ಕೆಲವು ವಿಚಾರಗಳನ್ನು ಮಾತನಾಡಿದ್ದು, ಭಾರತ ತಂಡದ ಎಕ್ಸ್ ಫ್ಯಾಕ್ಟರ್ ಆಟಗಾರ ಯಾರು ಎಂದು ತಿಳಿಸಿದ್ದಾರೆ..

ರೋಹಿತ್ ಅವರು ಜಸ್ಪ್ರೀತ್ ಬುಮ್ರ ಅವರ ಬದಲಾಗಿ ಮೊಹಮ್ಮದ್ ಶಮಿ ಅವರು ಆಯ್ಕೆಯಾಗಿರುವ ಬಗ್ಗೆ ಮಾತನಾಡಿದರು, ಹಾಗೆಯೇ ಸೂರ್ಯಕುಮಾರ್ ಯಾದವ್ ಅಬರ ಅದ್ಭುತ ಪ್ರದರ್ಶನದ ಗುಣಗಾನ ಮಾಡಿದ್ದಾರೆ. ಸೂರ್ಯಕುಮಾರ್ ಅವರು ಭಾರತ ತಂಡದ ಪ್ರಮುಖ ಆಟಗಾರ ಮತ್ತು ಎಕ್ಸ್ ಫ್ಯಾಕ್ಟರ್ ಎಂದು ಹೇಳಿದ್ದಾರೆ ರೋಹಿತ್, “ಅದ್ಬುತ ಫಾರ್ಮ್ ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರು, ಇದೆ ರೀತಿಯ ಅಗ್ರಸ್ಥಾನದ ಫಾರ್ಮ್ ಅನ್ನು ವಿಶ್ವಕಪ್ ನಲ್ಲಿ ಸಹ ಮುಂದುವರೆಸುತ್ತಾರೆ ಎನ್ನುವ ನಂಬಿಕೆ ಇದೆ. ಅತಿಹೆಚ್ಚು ವಿಶ್ವಾಸ ಇಡಬಹುದಾದ ಆಟಗಾರ ಅವರು, ನಿರ್ಭಿತಿಯಿಂದ ಬ್ಯಾಟ್ ಬೀಸುತ್ತಾರೆ, ತಮ್ಮ ಪ್ರತಿಭೆಯನ್ನು ಪೂರ್ತಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ವಿಶ್ವಕಪ್ ಟೂರ್ನಿಯಲ್ಲಿ ಅವರು ನಮ್ಮ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗುತ್ತಾರೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.

ಇನ್ನು ಭಾರತದ ಮೊದಲ ಪಂದ್ಯದ ಬಗ್ಗೆ ಸಹ ಮಾತನಾಡಿದ ರೋಹಿತ್ ಶರ್ಮಾ, “ನಮ್ಮ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ, ಅದಕ್ಕಾಗಿ ನಾವು ಪೂರ್ತಿಯಾಗಿ ತಯಾರಿ ಮಾಡಿಕೊಂಡಿದ್ದೇವೆ. ಲಾಸ್ಟ್ ಮೊಮೆಂಟ್ ನಿರ್ಧಾರದ ಸಂದರ್ಭ ಬರುವುದಿಲ್ಲ. ಪ್ಲೇಯಿಂಗ್ 11 ನಲ್ಲಿ ಇರುವ ಆಟಗಾರರ ಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ..” ಎಂದಿದ್ದಾರೆ ರೋಹಿತ್. ಸೂರ್ಯಕುಮಾರ್ ಯಾದವ್ ಅವರು ಈಗ ಅದ್ಭುತವಾದ ಫಾರ್ಮ್ ನಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ಈ ವರ್ಷ ಆಡಿರುವ 21 ಟಿ20 ಪಂದ್ಯಗಳಲ್ಲಿ ಬರೋಬ್ಬರಿ 801 ರನ್ಸ್ ಗಳಿಸಿದ್ದಾರೆ. ಹಾಗಾಗಿ, ಸೂರ್ಯಕುಮಾರ್ ಯಾದವ್ ಅವರ ಮೇಲೆ ಈಗ ಭಾರತ ತಂಡ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಸೂರ್ಯಕುಮಾರ್ ಯಾದವ್ ಅವರು ಹೇಗೆ ಆಡುತ್ತಾರೆ ಎಂದು ಕಾದು ನೋಡಬೇಕಿದೆ.