ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಶ್ವಕಪ್ ಗು ಮುನ್ನವೇ ಬಿಟ್ಟಿ ಸಲಹೆ ಆರಂಭಿಸಿದ ರೈನಾ: ದಿನೇಶ್ ಹಾಗೂ ಪಂತ್ ಇವರಿಬ್ಬರಲ್ಲಿ ಯಾರು ಆಡಬೇಕಂತೆ ಗೊತ್ತೇ??

347

Get real time updates directly on you device, subscribe now.

ಟಿ20 ವಿಶ್ವಕಪ್ ಪಂದ್ಯಗಳಿಗೆ ನಿನ್ನೆಯಷ್ಟೇ ಚಾಲನೆ ಸಿಕ್ಕಿದೆ, ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗು ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ. ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 22 ರಿಂದ ಶುರುವಾಗಲಿದ್ದು, ಭಾರತ ತಂಡದ ಮೊದಲ ಪಂದ್ಯ ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಈ ಸಮಯದಲ್ಲಿ ಭಾರತ ತಂಡದ ಅಂತಿಮ 15 ತಂಡದ ಸದಸ್ಯರು ಮತ್ತು 4 ಹೆಚ್ಚುವರಿ ಆಟಗಾರರು, ಒಟ್ಟಾರೆಯಾಗಿ 19 ಸದಸ್ಯರ ಪಟ್ಟಿಯನ್ನು ಸಹ ಭಾರತ ತಂಡ ಬಿಡುಗಡೆ ಮಾಡಿದೆ. ಭಾರತ ತಂಡದಲ್ಲಿ ಈಗ ಬಲಿಷ್ಠ ಬ್ಯಾಟಿಂಗ್ ಲೈನಪ್ ಇದೆ, ಬೌಲಿಂಗ್ ಮಾಡುವ ಆಟಗಾರರು ಸಹ ಇದ್ದಾರೆ.

ವಿಶ್ವಕಪ್ ಗೆ ಅಭ್ಯಾಸಗಳು ನಡೆಯುತ್ತಿರುವಾಗ, ಭಾರತ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಬ್ಯಾಟ್ಸ್ಮನ್ ಗಳ ಬಗ್ಗೆ ಮಾತನಾಡಿ, ಭಾರತ ತಂಡಕ್ಕೆ ಒಂದು ಸಲಹೆ ನೀಡಿದ್ದಾರೆ, 6ನೇ ಕ್ರಮಾಂಕದಲ್ಲಿ ರಿಷಬ್ ಪಂತ್ ಅವರಿಗೆ ಅವಕಾಶ ಕೊಡಬೇಕು ಎಂದಿದ್ದಾರೆ ರೈನಾ. ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಗಳ ಪಟ್ಟಿಯಲ್ಲಿ ಎಡಗೈ ಬ್ಯಾಟ್ಸ್ಮನ್ ಇಲ್ಲದೆ ಇರುವ ಕಾರಣ, ಪಂತ್ ಅವರು ಆಡಿದರೆ ಉತ್ತಮ ಎಂದು ಸುರೇಶ್ ರೈನಾ ಸಲಹೆ ನೀಡಿದ್ದಾರೆ, “ತಂಡಕ್ಕೆ ಪ್ರಮುಖ ಆಟಗಾರ ರಿಷಬ್, ಈ ಮೊದಲೇ ಅವರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಆಡಿರುವ ಅನುಭವ ಇದೆ, ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ, ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದಾರೆ. 1 ರಿಂದ 6ನೇ ಕ್ರಮಾಂಕದವರೆಗೂ ಭಾರತ ತಂಡದಲ್ಲಿ ಎಡಗೈ ಬ್ಯಾಟ್ಸ್ಮನ್ ಇಲ್ಲ, ಹಾಗಾಗಿ ರಿಷಬ್ ಪಂತ್ ಅವರು ಭಾರತ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗುತ್ತಾರೆ. ಮ್ಯಾನೇಜ್ಮೆಂಟ್ ಇವರನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ ಎನ್ನುವುದನ್ನು ನೋಡಬೇಕಿದೆ..” ಎಂದು ಹೇಳಿದ್ದಾರೆ ರಿಷಬ್ ಪಂತ್.

“ತಂಡದ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್ಮನ್ ಇರುವುದು ಬಹಳ ಮುಖ್ಯ. 2007, 2011, 2013ರಲ್ಲಿ ತಂಡ ಗೆದ್ದಾಗ ಗಂಭೀರ್, ಯುವಿ ಮತ್ತು ನಾನು ಇದ್ವಿ, ಆಗ ಎದುರಾಳಿ ತಂಡಗಳು ನಮ್ಮನ್ನ ನೋಡಿದ್ರೆ ಭಯ ಪಡ್ತಾ ಇದ್ರು. ರೋಹಿತ್ ಮತ್ತು ಕೆ.ಎಲ್.ರಾಹುಲ್ ಇದರ ಬಗ್ಗೆ ಯೋಚನೆ ಮಾಡಬೇಕು. ಹಾರ್ದಿಕ್ ಪಾಂಡ್ಯ ಅವರ ಜೊತೆಗೆ ಫಿನಿಷರ್ ಆಗಿ ಎಡಗೈ ಬ್ಯಾಟ್ಸ್ಮನ್ ಇದ್ದರೆ ಉತ್ತಮವಾಗಿರುತ್ತದೆ. ಪಂತ್ ಬದಲಾಗಿ ಡಿಕೆ ಅವರಿಗೆ ಅವಕಾಶ ಸಿಕ್ಕಿದೆ, ಅವರ ಅವಕಾಶ ಕಳಚಿ ಪಂತ್ ಗೆ ಕೊಡಬೇಕು ಎಂದು ನಾನು ಹೇಳುತ್ತಿಲ್ಲ. ಯಾರಿಗೆ ಅವಕಾಶ ಸಿಕ್ಕರು ಸಹ, ಜವಾಬ್ದಾರಿ ತೆಗೆದುಕೊಂಡು ಪಂದ್ಯವನ್ನು ಗೆಲ್ಲಿಸಬೇಕು. ಆಸ್ಟ್ರೇಲಿಯಾ ಗ್ರೌಂಡ್ ದೊಡ್ಡದಾಗಿರುವ ಕಾರಣ, ಎಡಗೈ ಬ್ಯಾಟ್ಸ್ಮನ್ ಇದ್ದರೆ ಒಳ್ಳೆಯದು..” ಎಂದು ಹೇಳಿದ್ದಾರೆ ಸುರೇಶ್ ರೈನಾ.

Get real time updates directly on you device, subscribe now.