ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತ ತಂಡದಿಂದ ನಾಲ್ಕು ಆಟಗಾರರು ಔಟ್: ವಿಶ್ವಕಪ್ ನಲ್ಲಿ ಹನ್ನೊಂದರ ತಂಡ ಹೇಗಿರಲಿದೆ ಗೊತ್ತೇ??

ವಿಶ್ವಕಪ್ ಆರಂಭಕ್ಕೂ ಮುನ್ನವೇ ಭಾರತ ತಂಡದಿಂದ ನಾಲ್ಕು ಆಟಗಾರರು ಔಟ್: ವಿಶ್ವಕಪ್ ನಲ್ಲಿ ಹನ್ನೊಂದರ ತಂಡ ಹೇಗಿರಲಿದೆ ಗೊತ್ತೇ??

ಟಿ20 ವಿಶ್ವಕಪ್ ನಿನ್ನೆಯಿಂದ ಶುರುವಾಗಿದ್ದು, ಎಲ್ಲರ ಗಮನ ಈಗ ಈ ಟೂರ್ನಿಯ ಮೇಲಿದೆ. ವಿಶ್ವಕಪ್ ನಲ್ಲಿ ಸೂಪರ್ 12 ಹಂತದ ಪಂದ್ಯಗಳು ಅಕ್ಟೋಬರ್ 22 ರಿಂದ ಶುರುವಾಗಲಿದ್ದು, ಭಾರತ ತಂಡದ ಮೊದಲ ಪಂದ್ಯ ಅಕ್ಟೋಬರ್ 23ರಂದು ಬದ್ಧವೈರಿ ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಭಾರತ ತಂಡ ಈಗ ಅಂತಿಮ ಹಂತದ ಪ್ರಾಕ್ಟೀಸ್ ನಡೆಸುತ್ತಿದ್ದು, ಐಸಿಸಿ ಈಗ ವಿಶ್ವಕಪ್ ನಲ್ಲಿ ಸ್ಪರ್ಧಿಸುವ ಎಲ್ಲಾ ತಂಡಗಳ ಪ್ಲೇಯಿಂಗ್ 11 ಅನ್ನಿ ಪ್ರಿಡಿಕ್ಟ್ ಮಾಡಿದ್ದು, ಭಾರತ ತಂಡದ ಪರವಾಗಿ ಆಯ್ಕೆ ಮಾಡಿರುವ 11 ಆಟಗಾರರ ಲಿಸ್ಟ್ ಕುತೂಹಲ ಮೂಡಿಸಿದೆ. ಐಸಿಸಿ ಆಯ್ಕೆ ಮಾಡಿರುವ ಲಿಸ್ಟ್ ನಲ್ಲಿ ಭಾರತದ ನಾಲ್ಕು ಬಲಿಷ್ಠ ಆಟಗಾರರು ತಂಡದಿಂದ ಹೊರಗಿದ್ದಾರೆ.

ಐಸಿಸಿ ಆಯ್ಕೆ ಮಾಡಿರುವ ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಅನುಭವಿ ಆಟಗಾರ ಮೊಹಮ್ಮದ್ ಶಮಿ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್, ಆಲ್ ರೌಂಡರ್ ಗಳಾದ ದೀಪಕ್ ಹೂಡಾ ಮತ್ತು ರವಿಚಂದ್ರನ್ ಅಶ್ವಿನ್, ಈ ನಾಲ್ವರು ಸಹ ಆಯ್ಕೆಯಾಗಿಲ್ಲ. ಜಸ್ಪ್ರೀತ್ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿದ್ದು ಈ ಲಿಸ್ಟ್ ನೋಡಿವರರೆಲ್ಲರು ಆಶ್ಚರ್ಯ ಪಟ್ಟಿದ್ದಾರೆ. ಭಾರತ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಗಳಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ. ಮೂರನೇ ಸ್ಥಾನಕ್ಕೆ ವಿರಾಟ್ ಕೋಹ್ಲಿ ಅವರು ಮತ್ತು ನಾಲ್ಕನೇ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆಮಾಡಲಾಗಿದೆ.

ಐದನೇ ಸ್ಥಾನಕ್ಕಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಐಸಿಸಿ ಆಯ್ಕೆಮಾಡಿದ್ದು, ದಿನೇಶ್ ಕಾರ್ತಿಕ್ ಅವರಿಗೆ ವಿಕೆಟ್ ಕೀಪರ್ ಸ್ಥಾನ ನೀಡಿದೆ. ಐಸಿಸಿ ಆಯ್ಕೆ ಮಾಡಿರುವ ಪ್ಲೇಯಿಂಗ್ 11ನಲ್ಲಿ ಆಯ್ಕೆಯಾಗಿರುವ ಬೌಲರ್ ಗಳು, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಾಹಲ್, ಅರ್ಷದೀಪ್ ಸಿಂಗ್ ಮತ್ತು ಹರ್ಷಲ್ ಪಟೇಲ್..ಇಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಐಸಿಸಿ ಆಯ್ಕೆ ಮಾಡಿರುವ ಪ್ಲೇಯಿಂಗ್ 11 ಹೀಗಿದೆ, ರೋಹಿತ್ ಶರ್ಮಾ (ಕ್ಯಾಪ್ಟನ್), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್.