ಹೆಚ್ಚಿನ ಬಂಡವಾಳ ಇಲ್ಲದೆ, ದೀಪಾವಳಿ ಹಬ್ಬದ ಸಮಯ ಈ ಬಿಸಿನೆಸ್ ಗಳನ್ನೂ ಮಾಡಿ, ಕೈತುಂಬಾ ಹಣ ಗಳಿಸುವುದು ಹೇಗೆ ಗೊತ್ತೇ?

ಹೆಚ್ಚಿನ ಬಂಡವಾಳ ಇಲ್ಲದೆ, ದೀಪಾವಳಿ ಹಬ್ಬದ ಸಮಯ ಈ ಬಿಸಿನೆಸ್ ಗಳನ್ನೂ ಮಾಡಿ, ಕೈತುಂಬಾ ಹಣ ಗಳಿಸುವುದು ಹೇಗೆ ಗೊತ್ತೇ?

ಸಮಾನ್ಯವಾಗಿ ಹಲವು ಜನರು ಬ್ಯುಸಿನೆಸ್ ಮಾಡಲು ಇಷ್ಟಪಡುತ್ತಾರೆ, ಬ್ಯುಸಿನೆಸ್ ಮೂಲಕ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಹಣ ಗಳಿಸಬೇಕು ಎಂದು ಬಯಸುತ್ತಾರೆ. ಹೀಗೆ ಬ್ಯುಸಿನೆಸ್ ಮಾಡಲು ದೀಪಾವಳಿ ಹಬ್ಬ ಬಹಳ ಒಳ್ಳೆಯ ಸಮಯ. ದೀಪಾವಳಿ ಸಮಯದಲ್ಲಿ ಕಡಿಮೆ ಹೂಡಿಕೆಯಲ್ಲಿ ಒಳ್ಳೆಯ ಹಣ ಸಂಪಾದನೆ ಮಾಡುವ ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ. ದೀಪಾವಳಿ ಸಮಯಕ್ಕೆ ನೀವು ಶುರು ಮಾಡಬಹುದಾದ ಒಳ್ಳೆಯ ಬ್ಯುಸಿನೆಸ್ ಗಳಲ್ಲಿ ಕ್ಯಾಂಡಲ್ ಬ್ಯುಸಿನೆಸ್ ಆಗಿದೆ.

ಈ ಬ್ಯುಸಿನೆಸ್ ಶುರು ಮಾಡುವುದರಿಂದ ನೀವು ಕಡಿಮೆ ಹಣ ಹೂಡಿಕೆ ಮಾಡಿ, ಹೆಚ್ಚು ಹಣ ಸಂಪಾದನೆ ಮಾಡಿ, ಕುಟುಂಬಕ್ಕೆ ಸಹ ಒಳ್ಳೆಯದಾಗುತ್ತದೆ. ಈ ಬ್ಯುಸಿನೆಸ್ ಇಂದ ನಿಮಗೆ ಹೆಚ್ಚು ಲಾಭ ಸಿಗುತ್ತದೆ. ಕ್ಯಾಂಡಲ್ ತಯಾರಿಕೆಯಲ್ಲಿ, ಮೊದಲು ನೀವು, ವ್ಯಾಕ್ಸ್ ಅಥವಾ ಮೇಣವನ್ನು 290-380 ಡಿಗ್ರಿಗಳಲ್ಲಿ ಇಟ್ಟು ಬಿಸಿ ಮಾಡಬೇಕು. ನಂತರ ವ್ಯಾಕ್ಸ್ ಅನ್ನು ನಿಮ್ಮ ಬಳಿ ಇರುವ ವಿಭಿನ್ನ ಶೇಪ್ ಗಳ ಅಚ್ಚುಗಳಿಗೆ ಹಾಕಿ, ಬಳಿಕ ಅವುಗಳನ್ನು ಡ್ರಿಲ್ ಇಂದ ಟ್ಯಾಪ್ ಮಾಡಿ, ಕ್ಯಾಂಡಲ್ ಗಳನ್ನು ನಿಮಗೆ ಇಷ್ಟವಾದ ಶೇಪ್ ಗೆ ತಯಾರಿಸಬಹುದು. ಕ್ಯಾಂಡಲ್ ಮೇಕಿಂಗ್ ಬ್ಯುಸಿನೆಸ್ ಶುರು ಮಾಡಲು ನಿಮಗೆ ದೊಡ್ಡ ಸ್ಥಳ ಬೇಕಾಗುವುದಿಲ್ಲ.

12×12 ವಿಸ್ತರಣೆಯ ಮನೆ ಇದ್ದರೆ ಮಾತ್ರ ಸಾಕು. ವ್ಯಜೆಸ್ ಅನ್ನು ಕರಗಿಸಲು ನಿಮಗೆ ಸ್ವಲ್ಪ ವಿಶಾಲವಾದ ಸ್ಥಳ ಬೇಕಾಗುತ್ತದೆ, ಜೊತೆಗೆ ಕ್ಯಾಂಡಲ್ ಸಿದ್ಧಪಡಿಸಿದ ನಂತರ ಅದನ್ನು ಸ್ಟೋರ್ ಮಾಡಿ ಇಡಲು ಜಾಗ ಬೇಕಾಗುತ್ತದೆ. ಕ್ಯಾಂಡಲ್ ಬ್ಯುಸಿನೆಸ್ ಶುರು ಮಾಡಲು ನಿಮಗೆ ಹೆಚ್ಚು ಹಣ ಬೇಕಾಗುವುದಿಲ್ಲ. ಬಹಳ ಕಡಿಮೆ ಹಣ ಹೂಡಿಕೆ ಮಾಡಿದರೆ ಸಾಕು, 10 ರಿಂದ 50 ಸಾವಿರ ರೂಪಾಯಿ ಬಂಡವಾಳ ಬೇಕಾಗುತ್ತದೆ. ಬೇರೆ ಬ್ಯುಸಿನೆಸ್ ಗೆ ಕಂಪೇರ್ ಮಾಡಿ ನೋಡಿದರೆ, ಕ್ಯಾಂಡಲ್ ಮೇಕಿಂಗ್ ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗಿ ಬರುತ್ತದೆ. 20 ಕ್ಯಾಂಡಲ್ ಗಳು ಇರುವ ಒಂದು ಪ್ಯಾಕೆಟ್ ಮಾಡಿ, ಅದಕ್ಕೆ 100 ರೂಪಾಯಿ ಫಿಕ್ಸ್ ಮಾಡಬಹುದು. ದೀಪಾವಳಿ ಸಮಯದಲ್ಲಿ ಈ ಕ್ಯಾಂಡಲ್ ಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ, ಒಳ್ಳೆಯ ಲಾಭ ಪಡೆಯಬಹುದು.