ಪಾಕಿಸ್ತಾನಕ್ಕೂ ಜಗ್ಗಲ್ಲ ಆಸ್ಟ್ರೇಲಿಯಾ ನು ಏನು ಮಾಡೋಕೆ ಆಗಲ್ಲ, ಭಾರತಕ್ಕೆ ತೊಂದ್ರೆ ನೀಡುವ ತಂಡವನ್ನು ಹೆಸರಿಸಿದ ಗಂಭೀರ್

ಪಾಕಿಸ್ತಾನಕ್ಕೂ ಜಗ್ಗಲ್ಲ ಆಸ್ಟ್ರೇಲಿಯಾ ನು ಏನು ಮಾಡೋಕೆ ಆಗಲ್ಲ, ಭಾರತಕ್ಕೆ ತೊಂದ್ರೆ ನೀಡುವ ತಂಡವನ್ನು ಹೆಸರಿಸಿದ ಗಂಭೀರ್

ಇಂದಿನಿಂದ ಟಿ20 ವಿಶ್ವಕಪ್ ಶುರುವಾಗಿದ್ದು, ನಮ್ಮ ಭಾರತ ತಂಡದ ಮೊದಲ ಪಂದ್ಯ ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯಲಿದೆ. ಈ ವರ್ಷ ವಿಶ್ವಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಭಾರತ ತಂಡ ಎರಡು ವಾರಗಳ ಮೊದಲೇ ಆಸ್ಟ್ರೇಲಿಯಾಗೆ ತೆರಳಿ ಅಭ್ಯಾಸ ಶುರು ಮಾಡಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಪಂದ್ಯಗಳನ್ನಾಡಿ, ಮುಂದಿನ ಎರಡು ಅಭ್ಯಾಸ ಪಂದ್ಯಗಳನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಆಡಲಿದೆ. ವಿಶ್ವಕಪ್ ನಲ್ಲಿ ಭಾಗಿಯಾಗುತ್ತಿರುವ ಎಲ್ಲಾ ತಂಡಗಳು ಅಂತಿಮ ಹಂತದ ಅಭ್ಯಾಸಗಳನ್ನು ನಡೆಸುತ್ತಿವೆ.

ಈ ಸಮಯದಲ್ಲಿ ಭಾರತ ತಂಡದ ಪ್ರದರ್ಶನ ಚೆನ್ನಾಗಿಯೇ ಇದ್ದರು ಸಹ, ಕೆಲವು ತಂಡಗಳು ಭಾರತ ತಂಡಕ್ಕೆ ಭಾರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಪಾಕಿಸ್ತಾನ್,, ಆಸ್ಟ್ರೇಲಿಯಾ ಮತ್ತು ಇನ್ನಿತರ ತಂಡಗಳು ಭಾರತಕ್ಕೆ ಭಾರಿ ಪೈಪೋಟಿ ಕೊಡಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರೆ, ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಭಾರತ ತಂಡಕ್ಕೆ ಪೈಪೋಟಿ ಕೊಡುವ ತಂಡ ಎಂದು ಬೇರೆಯದೇ ತಂಡವನ್ನು ಹೆಸರಿಸಿದ್ದಾರೆ, ಗೌತಮ್ ಗಂಭೀರ್ ಅವರು ಹೇಳಿದ ಆ ತಂಡ ಯಾವುದು ಗೊತ್ತಾ? ಗಂಭೀರ್ ಅವರು ಹೇಳಿರುವುದು ಶ್ರೀಲಂಕಾ ತಂಡ ಭಾರತ ತಂಡಕ್ಕೆ ಸ್ಟ್ರಾಂಗ್ ಪೈಪೋಟಿ ಕೊಡಬಹುದು ಎಂದು.

ಏಕೆಂದರೆ ಶ್ರೀಲಂಕಾ ತಂಡ ಏಷ್ಯಾಕಪ್ ಟೂರ್ನಿ ಗೆದ್ದಿದೆ, ಹಾಗೂ ಹಿಂದಿನ ಸರಣಿಗಳಲ್ಲಿ ಗೆದ್ದಿರುವ ಶ್ರೀಲಂಕಾ ತಂಡ, ಟಿ20 ವಿಶ್ವಕಪ್ ಗೆ ನೇರವಾಗಿ ಸೆಲೆಕ್ಟ್ ಆಗಿದೆ. ತಂಡ ಬಲಿಷ್ಠವಾಗಿಯು ಇದೆ, ಹಾಗಾಗಿ ಶ್ರೀಲಂಕಾ ತಂಡ ಪೈಪೋಟಿ ಕೊಡುತ್ತಿದೆ ಎಂದು ಹೇಳಿದ್ದಾರೆ ಗಂಭೀರ್, “ಶ್ರೀಲಂಕಾ ತಂಡವು ಏಷ್ಯಾಕಪ್ ನಲ್ಲಿ ಅತ್ಯುತ್ತಮವಾಗಿ ಆಡಿ, ಏಷ್ಯಾಕಪ್ ಗೆದ್ದ ರೀತಿ, ಅವರು ಈಗ ಆಡುತ್ತಿರುವ ಶೈಲಿ ನೋಡಿದರೆ, ಸರಿಯಾದ ಸಮಯದಲ್ಲೇ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ ಎಂದು ಅನ್ನಿಸುತ್ತಿದೆ. ಚಮೀರಾ ಮತ್ತು ಲಹೀರು ಕುಮಾರ ಇಬ್ಬರು ಸಹ ಈಗ ಶ್ರೀಲಂಕಾ ತಂಡಕ್ಕೆ ಮರಳಿ ಬಂದಿರುವುದು, ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ. ಭಾರತ ತಂಡಕ್ಕೆ ಅವರು ಬೆದರಿಕೆ ಆಗಬಹುದು..”ಎಂದಿದ್ದಾರೆ ಗೌತಮ್ ಗಂಭೀರ್.