ಕೊಹ್ಲಿ ರೋಹಿತ್ ಅಲ್ಲವೇ ಅಲ್ಲ, ಈತನೊಬ್ಬನೇ ಪಂದ್ಯದಲ್ಲಿ ಮುಖ್ಯ. ಈತ ಪಂದ್ಯವನ್ನು ನಿಯಂತ್ರಣ ಮಾಡುತ್ತಾನೆ ಎಂದ ರೈನಾ. ಯಾರು ಅಂತೇ ಗೊತ್ತೇ??
ಕೊಹ್ಲಿ ರೋಹಿತ್ ಅಲ್ಲವೇ ಅಲ್ಲ, ಈತನೊಬ್ಬನೇ ಪಂದ್ಯದಲ್ಲಿ ಮುಖ್ಯ. ಈತ ಪಂದ್ಯವನ್ನು ನಿಯಂತ್ರಣ ಮಾಡುತ್ತಾನೆ ಎಂದ ರೈನಾ. ಯಾರು ಅಂತೇ ಗೊತ್ತೇ??
ಎಲ್ಲರೂ ಕಾದು ಕುಳಿತಿರುವ ಟಿ20 ವಿಶ್ವಕಪ್ ಪಂದ್ಯಗಳು ಇಂದಿನಿಂದ ಆಸ್ಟ್ರೇಲಿಯಾದಲ್ಲಿ ಶುರುವಾಗುತ್ತದೆ. ಎಲ್ಲಾ ತಂಡಗಳು ಅಂತಿಮ ತಯಾರಿಯಲ್ಲಿವೆ.. ವಿಶ್ವಕಪ್ ನಲ್ಲಿ ಎಲ್ಲರ ಫೇವರೆಟ್ ತಂಡಗಳಲ್ಲಿ ಒಂದು ಟೀಮ್ ಇಂಡಿಯಾ. ನಮ್ಮ ಭಾರತ ತಂಡದ ವಿರುದ್ಧದ ಪಂದ್ಯ ಶುರುವಾಗುವುದು, ಅಕ್ಟೋಬರ್ 23ರಿಂದ, ಮೊದಲ ಪಂದ್ಯ ಬದ್ಧವೈರಿ ಪಾಕಿಸ್ತಾನ್ ವಿರುದ್ಧ. ಟೀಮ್ ಇಂಡಿಯಾ ತಂಡದ ಪೂರ್ತಿ ಆಟಗಾರರು ಆಯ್ಕೆಯಾಗಿ ಅಭ್ಯಾಸ ಪಂದ್ಯಗಳಲ್ಲಿ ತೊಡಗಿದ್ದಾರೆ. ಈ ಸಮಯದಲ್ಲಿ ಭಾರತ ತಂಡ ಕೆಲವು ಸಮಸ್ಯೆಗಳನ್ನು ಸಹ ಎದುರಿಸುತ್ತಿದೆ. ಪ್ರಮುಖ ಆಟಗಾರರಾದ ರವೀಂದ್ರ ಜಡೇಜಾ ಇಂಜುರಿ ಕಾರಣದಿಂದ ವಿಶ್ವಕಪ್ ಇಂದ ದೂರವಾಗಿದ್ದಾರೆ.
ಜಸ್ಪ್ರೀತ್ ಬುಮ್ರ ಅವರದ್ದು ಸಹ ಅದೇ ಪರಿಸ್ಥಿತಿ ಆಗಿದ, ಬುಮ್ರ ಅವರ ಬದಲಾಗಿ ಈಗ ಮೊಹಮ್ಮದ್ ಶಮಿ ಅವರು ವಿಶ್ವಕಪ್ ಗೆ ಆಯ್ಕೆಯಾಗಿದ್ದು, ಅವರು ಆಸ್ಟ್ರೇಲಿಯಾಗೆ ತೆರಳಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಬ್ಯಾಟಿಂಗ್ ಲೈನಪ್ ಅದ್ಭುತವಾಗಿದ್ದರು ಸಹ, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಸಮಸ್ಯೆ ಇದೆ, ಅದರಲ್ಲೂ ಡೆತ್ ಬೌಲಿಂಗ್ ನಲ್ಲಿ ಹಿನ್ನಡೆ ಅನುಭವಿಸುತ್ತಿದೆ ಭಾರತ ತಂಡ, ಇದೆಲ್ಲವನ್ನು ಸರಿಪಡಿಸಿಕೊಳ್ಳಲು ಭಾರತ ತಂಡಕ್ಕೆ ಇರುವುದು ಎರಡೇ ಅವಕಾಶ. ಅದನ್ನು ತಂಡ ಹೇಗೆ ಸರಿಪಡಿಸಿಕೊಳ್ಳುತ್ತದೆ ಎಂದು ನೋಡಬೇಕಿದೆ. ಇದೀಗ 2011ರಲ್ಲಿ 50 ಓವರ್ ಗಳ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರ ಸುರೇಶ್ ರೈನಾ ಅವರು, ವಿಶ್ವಕಪ್ ನಲ್ಲಿ ಭಾರತ ತಂಡದ ಮುಖ್ಯ ಆಟಗಾರ ಯಾರು ಎಂದು ಹೆಸರಿಸಿದ್ದಾರೆ.
ಆತ ಒಬ್ಬ ಇದ್ದರೆ ಪಂದ್ಯವನ್ನು ನಿಯಂತ್ರಣ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ, “ಕಳೆದ ಎರಡು ವರ್ಷಗಳಿಂದ ಸೂರ್ಯಕುಮಾರ್ ಅವರು ಆಡುತ್ತಿರುವ ಶೈಲಿಯಲ್ಲಿ ಅದೇ ಉದ್ದೇಶದಿಂದ ಅವರು ಆಡಬೇಕು. ತಮ್ಮ ತಂಡದಲ್ಲಿ ಮತ್ತೊಂದು ಡಾರ್ಕ್ ಹಾರ್ಸ್ ಇದೆ, ಅವರು ಹಾರ್ದಿಕ್ ಪಾಂಡ್ಯ, ಇವರ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ಕೂಡ ಅದ್ಭುತವಾಗಿದೆ. ಹಾರ್ದಿಕ್ ಪಾಂಡ್ಯ ಅವರು ಪಂದ್ಯವನ್ನು ನಿಯಂತ್ರಣಕ್ಕೆ ತರುತ್ತಾರೆ. ನಿರ್ಣಾಯಕವಾಗಿ ಬೌಲಿಂಗ್ ಮಾಡುತ್ತಾರೆ, ಇದರಿಂದ ಪಂದ್ಯವನ್ನು ಮುಗಿಸುತ್ತಾರೆ, ಈ ಆಟಗಾರ ವಿಶ್ವಕಪ್ ಗೆ ಬಹಳ ಮುಖ್ಯವಾಗುತ್ತಾರೆ. ಇಲ್ಲಿ ಸೂರ್ಯಕುಮಾರ್ ಅವರು ಗೇಮ್ ಚೇಂಜರ್ ಆಗಬಹುದು. ಅರ್ಷದೀಪ್ ಸಿಂಗ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಅವರನ್ನು ಸಹ ಮರೆಯಲಾಗುವುದಿಲ್ಲ..”ಎಂದಿದ್ದಾರೆ ಸುರೇಶ್ ರೈನಾ.
ಅಕ್ಟೋಬರ್ 23ರಂದು ನಡೆಯುವ ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ಬಗ್ಗೆ ಸಹ ರೈನಾ ಅವರು ಮಾತನಾಡಿದ್ದು, “ಭಾರತ ತಂಡದ ಮೊದಲ ಪಂದ್ಯ ಇರುವುದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ. ಈ ಮ್ಯಾಚ್ ನಲ್ಲಿ ಉತ್ತಮವಾಗಿ ಶುರು ಮಾಡಬೇಕು, ಈ ಮ್ಯಾಚ್ ಮೂಲಕ ನಾವು ಒಳ್ಳೆಯ ಆರಂಭ ಪಡೆದುಕೊಂಡರೆ. ಮುಂದಿನ ಮ್ಯಾಚ್ ಗಳು ಸೌಮ್ಯವಾಗಿ ಸಾಗುತ್ತದೆ. ಈ ಪಂದ್ಯ ಟಿ20 ವಿಶ್ವಕಪ್ ನಲ್ಲಿ ನಿರ್ಣಾಯಕ ಪಂದ್ಯ ಆಗಿರಲಿದೆ..”ಎಂದಿದ್ದಾರೆ ಸುರೇಧ್ ರೈನಾ.