ವಿಶ್ವಕಪ್ ಗೆ ಒಂದು ದಿನ ಇರುವಾಗ ಅಧಿಕೃತವಾಗಿ ಬುಮ್ರಾ ಬದಲಿಗೆ ಖಡಕ್ ಯಾರ್ಕರ್ ಕಿಂಗ್ ಅನ್ನು ಆಯ್ಕೆ ಮಾಡಿದ ಭಾರತ. ಆಯ್ಕೆಯಾದವರು ಯಾರು ಗೊತ್ತೇ??

ವಿಶ್ವಕಪ್ ಗೆ ಒಂದು ದಿನ ಇರುವಾಗ ಅಧಿಕೃತವಾಗಿ ಬುಮ್ರಾ ಬದಲಿಗೆ ಖಡಕ್ ಯಾರ್ಕರ್ ಕಿಂಗ್ ಅನ್ನು ಆಯ್ಕೆ ಮಾಡಿದ ಭಾರತ. ಆಯ್ಕೆಯಾದವರು ಯಾರು ಗೊತ್ತೇ??

ಟಿ20 ವಿಶ್ವಕಪ್ ಪಂದ್ಯಾವಳಿ ಶುರುವಾಗಲು ಇನ್ನು ಒಂದು ದಿನ ಮಾತ್ರ ಉಳಿದಿರುವಾಗ, ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನಿಂದ ಇಂಜುರಿಗೆ ಒಳಗಾಗಿರುವ ಕಾರಣ, ವಿಶ್ವಕಪ್ ಸ್ಕ್ವಾಡ್ ಇಂದ ಹೊರಗಿದ್ದಾರೆ. ಇವರ ಸ್ಥಾನಕ್ಕೆ ಯಾವ ಆಟಗಾರ ಬರಬಹುದು ಎಂದು ಎಲ್ಲರೂ ಚರ್ಚೆ ಮಾಡುತ್ತಿದ್ದರು. ಹಿರಿಯ ಆಟಗಾರರು ಬಿಸಿಸಿಐ ಗೆ ಕೆಲವು ಸಲಹೆಗಳನ್ನು ಸಹ ಕೊಟ್ಟಿದ್ದರು. ಇದೀಗ ಬಿಸಿಸಿಐ ಕೊನೆಗೂ ಜಸ್ಪ್ರೀತ್ ಬುಮ್ರ ಅವರ ಬದಲಾಗಿ ಆಡುವ ಆಟಗಾರ ಯಾರು ಎಂದು ತಿಳಿಸಿದೆ.

ಬಿಸಿಸಿಐ ತಮ್ಮ ಟ್ವಿಟರ್ ಖಾತೆಯಲ್ಲಿ ಅಧಿಕೃತವಾಗಿ ಜಸ್ಪ್ರೀತ್ ಬುಮ್ರ ಅವರ ಬದಲಿ ಆಟಗಾರ ಯಾರು ಎಂದು ತಿಳಿಸಿದ್ದು, ಈ ಮೊದಲೇ ಎಲ್ಲರೂ ಊಹೆ ಮಾಡಿ, ಸಲಹೆ ನೀಡಿದ್ದ ಹಾಗೆ, ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರನ್ನೇ ಜಸ್ಪ್ರೀತ್ ಬುಮ್ರ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರನ್ನು ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದ್ದು, ಇವರಿಬ್ಬರು ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ವಿಶ್ವಕಪ್ ನಲ್ಲಿ ಸ್ಟ್ಯಾಂಡ್ ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು, ಆದರೆ ಶಮಿ ಅವರು ಕರೊನಾ ಸೋಂಕಿಹೆ ತುತ್ತಾದ ಕಾರಣ ಇಷ್ಟು ದಿನಗಳ ಕಾಲ ತಂಡದೊಡನೆ ಇರಲು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಶಮಿ ಅವರು ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದು, ಅಭ್ಯಾಸ ಮಾಡುತ್ತಿದ್ದಾರೆ. ಮುಂದೆ ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ. ಬುಮ್ರ ಅವರ ಬದಲಾಗಿ, ದೀಪಕ್ ಚಹರ್ ಅವರನ್ನು ಸಹ ಆಯ್ಕೆ ಮಾಡುವ ಅವಕಾಶ ಇತ್ತು, ಆದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ಸಮಯದಲ್ಲಿ ದೀಪಕ್ ಚಹರ್ ಅವರ ಕಾಲಿಗೆ ಪೆಟ್ಟಾಗಿ ಅವರು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಹೇಳಿದ ಬಳಿಕ, ಅವರನ್ನು ವಿಶ್ವಕಪ್ ಇಂದ ಕೈಬಿಡಲಾಯಿತು. ಪ್ರಸ್ತುತ ಶಮಿ ಅವರು ಆಯ್ಕೆಯಾಗಿದ್ದು, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರು ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.