ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇದ್ದಕ್ಕಿದ್ದ ಹಾಗೆ ಪಂದ್ಯಗಳಿಂದ ದೂರ ಆಗಿ ಒಂದು ದಿನ ಪೂರ್ತಿ ಉಪವಾಸ ಮಾಡಿ ವಿರಾಟ್ ಕೊಹ್ಲಿ. ಯಾಕೆ ಗೊತ್ತೇ??

227

Get real time updates directly on you device, subscribe now.

ಕ್ರಿಕೆಟ್ ಲೋಕದಲ್ಲಿ ಕಿಂಗ್ ಕೋಹ್ಲಿ, ರನ್ ಮಷಿನ್ ಎನ್ನಿಸಿಕೊಂಡಿರುವ ವಿರಾಟ್ ಕೋಹ್ಲಿ ಅವರು ಸಧ್ಯಕ್ಕೆ ಆಸ್ಟ್ರೇಲಿಯಾದಲ್ಲಿದ್ದರೆ. ಭಾರತ ತಂಡ ವಿಶ್ವಕಪ್ ಅಭ್ಯಾಸಕ್ಕಾಗಿ ಅಸ್ಟ್ರೇಲಿಯಾಗೆ ಎರಡು ವಾರ ಮೊದಲೇ ತಲುಪಿ ಭರ್ಜರಿಯಾದ ಅಭ್ಯಾಸ ನಡೆಸುತ್ತಿವೆ. ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಪಂದ್ಯಗಳನ್ನು ಆಡಿರುವ ಭಾರತ ತಂಡ ಒಂದು ಪಂದ್ಯದಲ್ಲಿ ಸೋತು ಒಂದು ಪಂದ್ಯವನ್ನು ಗೆದ್ದು ತಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಅವಕಾಶ ಪಡೆದುಕೊಂಡಿದೆ. ತಂಡ ಏನೋ ಪಂದ್ಯಗಳಲ್ಲಿ ಬ್ಯುಸಿ ಆಗಿದ್ದಾಗ, ಕಿಂಗ್ ಕೋಹ್ಲಿ ಅವರು ಪಂದ್ಯಗಳನ್ನೆಲ್ಲಾ ಸ್ವಲ್ಪ ಬದಿಗಿಟ್ಟು ಉಪವಾಸ ಮಾಡಿದ್ದಾರೆ.

ಕೋಹ್ಲಿ ಅವರು ಪಂದ್ಯಗಳನ್ನು ಬಿಟ್ಟು, ಅಭ್ಯಾಸವನ್ನು ಪಕ್ಕಕ್ಕಿಟ್ಟು ಉಪವಾಸ ಮಾಡಿರೋದಕ್ಕೆ ಒಂದು ಮುಖ್ಯವಾದ ಕಾರಣ ಇದೆ. ಕೋಹ್ಲಿ ಅವರು ಉಪವಾಸ ಮಾಡಿರುವುದು ಪತ್ನಿ ಅನುಷ್ಕಾ ಅವರಿಗಾಗಿ. ಉತ್ತರ ಭಾರತದಲ್ಲಿ ನಿನ್ನೆ ಕರ್ವಾ ಚೌತ್ ಆಚರಿಸಲಾಗಿದೆ. ಇದು ವಿಶೇಷವಾಗಿ ಪತ್ನಿಯರು ತಮ್ಮ ಗಂಡನಿಗೆ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ಇದೆಲ್ಲವನ್ನು ದೇವರು ಕೊಡಲಿ ಎಂದು ಪ್ರಾರ್ಥನೆ ಮಾಡಿ, ಅವರಿಗಾಗಿ ಉಪವಾಸ ಮಾಡುವ ವಿಶೇಷವಾದ ವ್ರತದ ದಿನ ಆಗಿದೆ. ಈ ದಿನ ಗಂಡಂದಿರು ಸಹ, ತಮ್ಮ ಹೆಂಡತಿಯರಿಗೆ ಒಳ್ಳೆಯದಾಗಲಿ ಎಂದು ಉಪವಾಸ ಮಾಡಿ ವ್ರತದ ಆಚರಣೆ ಮಾಡುತ್ತಾರೆ. ಕೋಹ್ಲಿ ಅವರು ಸಹ ಹೀಗೆ ಪತ್ನಿಗಾಗಿ ಉಪವಾಸ ಮಾಡಿದ್ದಾರೆ.

ಅನುಷ್ಕಾ ಅವರು ಕೋಹ್ಲಿ ಅವರ ಎಲ್ಲಾ ಕಷ್ಟದ ಸಮಯದಲ್ಲೂ ಜೊತೆಗಿದ್ದು, ಸಪೋರ್ಟ್ ಮಾಡಿದವರು. ಕಳೆದ ಮೂರು ವರ್ಷಗಳಿಂದ ಕೋಹ್ಲಿ ಅವರು ಕಳಪೆ ಫಾರ್ಮ್ ನಲ್ಲಿದ್ದಾಗ, ಅನುಷ್ಕಾ ಅವರೇ ಜೊತೆಗಿದ್ದು, ಕೋಹ್ಲಿ ಅವರು ಮತ್ತೆ ಫಾರ್ಮ್ ಗೆ ಬರುವ ಹಾಗೆ ಪ್ರೋತ್ಸಾಹ ನೀಡಿದರು. ವೃತ್ತಿಯಲ್ಲಿ ಕೋಹ್ಲಿ ಅವರು ಹೇಗೆ ಕಿಂಗ್ ಎಂದು ಹೆಸರು ಮಾಡಿದ್ದಾರೋ, ಅದೇ ರೀತಿ ನಿಜ ಜೀವನದಲ್ಲಿ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಫ್ಯಾಮಿಲಿಗೆ ಹೇಗೆ ಸಾಮಯ ಕೊಡಬೇಕು, ಗೌರವ ಕೊಡಬೇಕೋ ಅದೆಲ್ಲವನ್ನು ಕೋಹ್ಲಿ ಅವರು ಮಾಡುತ್ತಾರೆ. ಅದೇ ರೀತಿ ಈಗ ಪತ್ನಿ ಅನುಷ್ಕಾ ಅವರಿಗೆ ಒಳ್ಳೆಯದಾಗಬೇಕು, ಅವರು ಸುಖವಾಗಿ ಶಾಂತಿಯಿಂದ ಇರಬೇಕು ಎಂದು ಕೋಹ್ಲಿ ಅವರು ಉಪವಾಸ ಮಾಡಿದ್ದಾರೆ.

Get real time updates directly on you device, subscribe now.