ಸೂರ್ಯ, ರಾಹುಲ್ ಅಲ್ಲ, ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಕಲೆಹಾಕುವ ಭಾರತೀಯ ಯಾರು ಎಂದು ಹೆಸರಿಸಿದ ನೆಹ್ರಾ. ಯಾರಂತೆ ಗೊತ್ತೇ??
ಸೂರ್ಯ, ರಾಹುಲ್ ಅಲ್ಲ, ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಕಲೆಹಾಕುವ ಭಾರತೀಯ ಯಾರು ಎಂದು ಹೆಸರಿಸಿದ ನೆಹ್ರಾ. ಯಾರಂತೆ ಗೊತ್ತೇ??
ನಾಳೆಯಿಂದ ಬಹುನಿರೀಕ್ಷಿತ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಇಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ತಂಡಗಳು ಅಂತಿಮ ಸಮಯದ ಅಭ್ಯಾಸಗಳನ್ನು ನಡೆಸುತ್ತಿದ್ದು, ಭಾರತ ತಂಡ ಸಹ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳನ್ನಾಡಿದ್ದು, ಇನ್ನು ಎರಡು ಅಭ್ಯಾಸ ಪಂದ್ಯಗಳನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಈ ಸಮಯದಲ್ಲಿ ಭಾರತ ತಂಡವು ತಮ್ಮಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಇದು ಕೊನೆಯ ಅವಕಾಶ ಆಗಿದ್ದು, ಭಾರತ ತಂಡ ಇದನ್ನು ಸರಿಪಡಿಸಿಕೊಳ್ಳುತ್ತಾ ಎನ್ನುವ ಆತಂಕ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ.
ಪ್ರಸ್ತುತ ಭಾರತ ತಂಡದ ಬ್ಯಾಟಿಂಗ್ ಲೈನಪ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆರಂಭಿಕರಾಗಿ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ನಂತರ ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಫಿನಿಷರ್ ಆಗಿ ದಿನೇಶ್ ಕಾರ್ತಿಕ್ ಅವರು..ಈ ಬ್ಯಾಟಿಂಗ್ ಲೈನಪ್ ಅದ್ಭುತವಾಗಿದ್ದು, ಇವರೆಲ್ಲರೂ ಫಾರ್ಮ್ ನಲ್ಲಿದ್ದಾರೆ. ಆದರೆ ಭಾರತ ತಂಡದಲ್ಲಿ ಸಮಸ್ಯೆ ಇರುವುದು ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ. ಅದರಲ್ಲೂ ಡೆತ್ ಓವರ್ ಗಳಲ್ಲಿ ಬೌಲರ್ ಗಳು ಹೆಚ್ಚು ರನ್ ಗಳನ್ನು ಬಿಟ್ಟುಕೊಡುತ್ತಿರುವುದೆ ಭಾರತ ತಂಡದ ಸೋಲಿಗೆ ಮುಖ್ಯ ಕಾರಣ ಆಗಿದೆ. ಕೆಲವೊಮ್ಮೆ ಪವರ್ ಪ್ಲೇ ನಲ್ಲಿ ಸಹ ಬೌಲರ್ ಗಳು ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡುತ್ತಿಲ್ಲ.
ಭಾರತ ತಂಡದ ಪರಿಸ್ಥಿತಿ ಹೀಗಿರುವಾಗ, ತಂಡದ ಮಾಜಿ ಹಿರಿಯ ಆಟಗಾರ ಆಶಿಷ್ ನೆಹ್ರಾ ಅವರು ಈ ಬಾರಿ ವಿಶ್ವಕಪ್ ನಲ್ಲಿ ಹೆಚ್ಚು ರನ್ಸ್ ಸ್ಕೋರ್ ಮಾಡುವ ಆಟಗಾರ ಯಾರು ಎಂದು ತಿಳಿಸಿದ್ದಾರೆ. ನೆಹ್ರಾ ಅವರು ಸೂರ್ಯಕುಮಾರ್ ಯಾದವ್ ಅಥವಾ ಕೆ.ಎಲ್.ರಾಹುಲ್ ಅವರ ಹೆಸರನ್ನು ಹೇಳಿಲ್ಲ, ಬದಲಾಗಿ ಇವರು ಹೇಳಿರುವುದು ರೋಹಿತ್ ಶರ್ಮಾ ಮತ್ತು ವಿರಾಟ್ ಕೋಹ್ಲಿ ಅವರ ಹೆಸರು, “ಭಾರತ ತಂಡದ ಹಿರಿಯ ಆಟಗಾರರಾದ ಕೋಹ್ಲಿ ಮತ್ತು ರೋಹಿತ್ ಶರ್ಮ, ಇಬ್ಬರು ಸಹ ಉತ್ತಮವಾದ ಆಟಗಾರರು. ವಿಶ್ವಕಪ್ ನಲ್ಲಿ ಇವರಿಬ್ಬರ ಮೇಲೆ ಹೆಚ್ಚಿನ ಭರವಸೆ ಇದೆ. ಒಂದು ವೇಳೆ ಇವರಿಬ್ಬರು ಉತ್ತಮ ಪ್ರದರ್ಶನ ನೀಡದೆ ಹೋದರೆ, ಭಾರತ ತಂಡ ಹೆಚ್ಚಾಗಿ ಏನನ್ನು ಸಾಧಿಸಲು ಆಗುವುದಿಲ್ಲ. ಆಸ್ಟ್ರೇಲಿಯಾ ಇಂದ ಭಾರತಕ್ಕೆ ರಿಟರ್ನ್ ಟಿಕೆಟ್ ತೆಗೆದುಕೊಳ್ಳಬೇಕಾಗುತ್ತದೆ..” ಎಂದು ಹೇಳಿದ್ದಾರೆ.
ನೆಹ್ರಾ ಅವರು ಹೇಳುವ ಪ್ರಕಾರ ಹಿರಿಯ ಆಟಗಾರರ ಮೇಲೆ ಹೆಚ್ಚಿನ ಒತ್ತಡ, ನಂಬಿಕೆ ಮತ್ತು ಭರವಸೆ ಇದೆ, ಇದನ್ನು ಇವರಿಬ್ಬರು ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಕಾದು ನೋಸಬೇಕಿದೆ, ಏಕೆಂದರೆ ವಿರಾಟ್ ಕೋಹ್ಲಿ ಅವರೇನೋ ಮೂರು ವರ್ಷಗಳ ನಂತರ ಈಗ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಏಷ್ಯಾಕಪ್ ನಲ್ಲಿ ಸೆಂಚುರಿ ಭಾರಿಸಿದರು, ಈ ವರ್ಷ 14 ಪಂದ್ಯಗಳಲ್ಲಿ 485 ರನ್ ಗಳಿಸಿದ್ದಾರೆ. ಆದರೆ ರೋಹಿತ್ ಅವರ ಫಾರ್ಮ್ ನಲ್ಲಿ ಸ್ಥಿರತೆ ಇಲ್ಲ. ಒಂದು ಮ್ಯಾಚ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮತ್ತೊಂದು ಮ್ಯಾಚ್ ನಲ್ಲಿ ಡಕ್ ಔಟ್ ಆಗುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಪ್ರದರ್ಶನ ಹೇಗಿರುತ್ತದೆ ಎಂದು ನೋಡಬೇಕಿದೆ.