ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಪ್ರತಿ ಸಿನಿಮಾದಲ್ಲಿಯೂ ಜನರ ಮನಗೆಲ್ಲುವ ಪ್ರಕಾಶ್ ತುಮಿನಾಡ್ ಯಾರು ಗೊತ್ತೇ?? ಇವರ ಬಗ್ಗೆ ನಿಮಗೆ ಗೊತ್ತಿಲ್ಲ ಮಾಹಿತಿ.

85

Get real time updates directly on you device, subscribe now.

ಕಾಂತಾರ ಈಗ ಎಲ್ಲೆಡೆ ಚರ್ಚೆ ಮಾಡಲ್ಪಡುತ್ತಿರುವ ಸಿನಿಮಾ ಆಗಿದೆ. ಕಾಂತಾರ ಸಿನಿಮಾ ನೋಡಿದ ಸಿನಿಪ್ರಿಯರು ಬೇರೆಯದೇ ಲೋಕಕ್ಕೆ ಹೋಗುತ್ತಾರೆ, ದೇವರ ಮೇಲೆ ನಂಬಿಕೆ ಹೆಚ್ಚಿಸಿಕೊಳ್ಳುತ್ತಾರೆ ಎಂದರೆ ತಪ್ಪಾಗುವುದಿಲ್ಲ. ಕಾಂತಾರ ಸಿನಿಮಾದ ಕ್ರೇಜ್ ಹೇಗಿದೆ ಎಂದರೆ ಬೇರೆ ಭಾಷೆಗಳಲ್ಲಿ ಸಿನಿಮಾ ಬರಬೇಕೆಂದು ತೆಲುಗು, ತಮಿಳು, ಹಿಂದು ಮತ್ತು ಮಲಯಾಳಂ ಸಿನಿಮಾ ತಯಾರಕರು ಮನವಿ ಮಾಡಿ ಡಬ್ ಮಾಡಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಒಂದು ಇಷ್ಟರ ಮಟ್ಟಿಗೆ ಸದ್ದು ಮಾಡುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಚಾರ..

ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ಪಾತ್ರ ಅಭಿನಯ ಹೇಗೆ ಎಲ್ಲರ ಗಮನ ಸೆಳೆದಿದೆಯೋ, ಅದೇ ರೀತಿ ಬೇರೆ ಕೆಲವು ಕಲಾವಿದರ ಪಾತ್ರಗಳು ಸಹ ಜನರಿಗೆ ಬಹಳ ಇಷ್ಟವಾಗಿದೆ. ಅಂತಹ ಪಾತ್ರಗಳಲ್ಲಿ ಒಂದು ರಾಂಪ ಪಾತ್ರ. ಈ ಪಾತ್ರದ ಸ್ಕ್ರೀನ್ ಮೇಲೆ ಬಂದಾಗ ಎಲ್ಲರೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿ, ಬಿದ್ದು ಬಿದ್ದು ನಕ್ಕಿದ್ದಾರೆ. ರಾಂಪ ಪಾತ್ರ ಹೇಳುವ ಡೈಲಾಗ್ ಗಳು, ತುಳುನಾಡಿನ ಕನ್ನಡ ಮಾತನಾಡುವ ರೀತಿ ಎಲ್ಲವನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಪಾತ್ರದಲ್ಲಿ ನಟಿಸಿರುವ ಕಲಾವಿದನನ್ನು ಈ ಹಿಂದೆ ಕೂಡ ಕೆಲವು ಸಿನಿಮಾಗಳಲ್ಲಿ ನೋಡಿರುತ್ತೀರಿ, ಆದರೆ ಇವರ ಬಗ್ಗೆ ಹೆಚ್ಚಾಗಿ ಯಾರಿಗು ಗೊತ್ತಿಲ್ಲ. ಕಾಂತಾರ ಸಿನಿಮಾ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಇವರ ಬಗ್ಗೆ ಇಂದು ತಿಳಿಸುತ್ತೇವೆ.

ಕಾಂತಾರ ಸಿನಿಮಾದಲ್ಲಿ ರಾಂಪ ಪಾತ್ರದಲ್ಲಿ ನಟಿಸಿರುವ ಇವರ ಹೆಸರು ಪ್ರಕಾಶ್ ತುಮಿನಾಡು, ಇವರು ಮೂಲತಃ ಮಂಗಳೂರಿನವರು. ಕಷ್ಟದಲ್ಲಿ ಹುಟ್ಟಿ ಬೆಳೆದ ಇವರು 10ನೇ ತರಗತಿ ವರೆಗು ಓದಿದರು, ಕಾಲೇಜು ಶಿಕ್ಷಣ ಪಡೆಯಲು ಪ್ರವೇಶ ಪಡೆದರು, ಆದರೆ ಅದೇ ಸಮಯಕೆ ಪ್ರಕಾಶ್ ಅವರ ತಂದೆ ಕೆಲಸ ಕಳೆದುಕೊಂಡ ಕಾರಣ, ಓದನ್ನು ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಹೋಗಲು ಶುರು ಮಾಡಿದರು. ಇವರ ತಂದೆ ತೀರಿಕೊಂಡ ನಂತರ ಇಡೀ ಕುಟುಂಬದ ಜವಾಬ್ದಾರಿ ಇವರ ಮೇಲೆಯೇ ಇತ್ತು. ಮನೆಯನ್ನು ಮನೆಯವರನ್ನು ನೋಡಿಕೊಳ್ಳುವ ಸಲುವಾಗಿ ಹಲವು ಸಣ್ಣ ಪುಟ್ಟ ಕೆಲಸಗಳನ್ನು ಮಾಡಲು ಶುರು ಮಾಡಿದರು.

ಕೂಲಿ ಕೆಲಸ ಮಾಡುವುದು, ಆಟೋ ಓಡಿಸುವುದು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಬೀಡಿ ಕಟ್ಟುವ ಕೆಲಸ ಸಹ ಮಾಡುತ್ತಿದ್ದರು. ಹೀಗೆ ಬಹಳ ಕಷ್ಟದಲ್ಲಿ ಜೀವನ ಸಾಗಿಸುವಾಗ ಸ್ನೇಹಿತನ ಕಂಪನಿಯೊಂದರಲ್ಲಿ ಇವರಿಗೆ ಕೆಲಸ ಸಿಕ್ಕಿತು, ಆ ಕೆಲಸ ಜೊತೆಗೆ ತಮ್ಮ ಕನಸುಗಳ ಬೆನ್ನಟ್ಟಲು ಸ್ವಾತಂತ್ರ್ಯ ಸಹ ಸಿಕ್ಕಿತು. ಪ್ರಕಾಶ್ ಅವರು ಮತ್ತು ಅವರ ಇಡೀ ಕುಟುಂಬ ಸಿನಿಮಾ ಪ್ರಿಯರು, ಸಾಕಷ್ಟು ಸಿನಿಮಾ ಮತ್ತು ನಾಟಕಗಳನ್ನು ನೋಡಲು ಹೋಗುತ್ತಿದ್ದರು, ಹಾಗೆ ಒಂದು ಸಾರಿ ಪ್ರಕಾಶ ಅವರು ಒಂದು ನಾಟಕ ನೋಡಲು ಹೋಗಿದ್ದರು. ಆ ನಾಟಕದ ಪಾತ್ರಧಾರಿ ಬಂದಿಲ್ಲದ ಕಾರಣ ಪ್ರಕಾಶ್ ಅವರಿಗೆ ಆ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ತಮಗೆ ಸಿಕ್ಕ ಉಪಯೋಗಿಸಿಕೊಂಡು ಚೆನ್ನಾಗಿ ಅಭಿನಯಿಸಿದ ಪ್ರಕಾಶ್ ಅವರಿಗೆ ಎಲ್ಲರಿಂದ ಪ್ರಶಂಸೆ ಸಿಕ್ಕಿತು. ಅಲ್ಲಿಂದ ನಟನೆಯ ಜೊತೆಗೆ ಇವರ ಪ್ರಯಾಣ ಶುರುವಾಯಿತು. ನಂತರ ಪ್ರಕಾಶ್ ಅವರು ಹಲವು ನಾಟಕ ತಂಡಗಳ ಜೊತೆಗೆ ಸೇರಿ, ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದರು. ಕನ್ನಡ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಮೊದಲು ತುಳು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು. ಇವರು ನಟಿಸಿದ ಮೊದಲ ಕನ್ನಡ ಸಿನಿಮಾ ಒಂದು ಮೊಟ್ಟೆಯ ಕಥೆ. ರಾಜ್ ಬಿ ಶೆಟ್ಟಿ ಅವರು ಈ ಅವಕಾಶ ನೀಡಿದ ಕಾರಣ ಅವರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ ಪ್ರಕಾಶ್.

ಒಂದು ಮೊಟ್ಟೆಯ ಕಥೆ ಸಿನಿಮಾ ಇಂದ ಇವರು ಶೆಟ್ಟಿ ಗ್ಯಾಂಗ್ ನ ಸದಸ್ಯರಲ್ಲಿ ಒಬ್ಬರಾದರು, ಬಳಿಕ ಇವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಾ ಹೋಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗರುಡ ಗಮನ ವೃಷಭ ವಾಹನ ಸಿನಿಮಾಗಳಲ್ಲಿ ನಟಿಸಿದರು, ಗರುಡ ಗಮನ ಸಿನಿಮಾದಲ್ಲಿ ಇವರ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಪ್ರಕಾಶ್ ಅವರು ಶೆಟ್ಟಿ ಗ್ಯಾಂಗ್ ಹೊರತು ಪಡಿಸಿ, ಲುಂಗಿ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಭಜರಂಗಿ2, ಗಾಳಿಪಟ2 ಸಿನಿಮಾಗಳಲ್ಲಿ ಕೂಡ ನಟಿಸಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಆಫರ್ ಬಂದಿದ್ದು ಇವರ ಅಸೋಸಿಯೇಟ್ ಮೂಲಕ, ಕಾಂತಾರ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ಸಹ ಪ್ರಕಾಶ್ ಅವರು ಜೊತೆಗಿದ್ದರು.

ರಿಶಬ್ ಶೆಟ್ಟಿ ಅವರ ಬಗ್ಗೆ ಮಾತನಾಡಿ, “ರಿಷಬ್ ಅವರಿಗೆ ಕಲಾವಿದರಿಂದ ಹೇಗೆ ನಟನೆಯನ್ನು ಹೊರತರುವುದು ಎಂದು ಚೆನ್ನಾಗಿ ಗೊತ್ತಿದೆ. ಅವರು ದೈವ ನರ್ತನ ಮಾಡುವುದು ನೋಡಿದಾಗ, ಈ ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂದು ತುಂಬಾ ಹೆಮ್ಮೆ ಆಗಿತ್ತು..” ಎಂದು ಕಾಂತಾರ ಸಿನಿಮಾ ಬಗ್ಗೆ ಹೇಳುತ್ತಾರೆ ಪ್ರಕಾಶ್. ಇವರೊಬ್ಬ ಅಪ್ಪಟ ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ಸಹ ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ.

Get real time updates directly on you device, subscribe now.