ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆಸ್ಟ್ರೇಲಿಯಾ ದಲ್ಲಿ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕೊಹ್ಲಿ ಆಡಿಲ್ಲ ಯಾಕೆ ಎಂದಿದ್ದಕ್ಕೆ ಖಡಕ್ ಉತ್ತರ ಕೊಟ್ಟ ಅಶ್ವಿನ್. ಹೇಳಿದ್ದೇನು ಗೊತ್ತೇ??

931

Get real time updates directly on you device, subscribe now.

ಟಿ20 ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ಕೆಲವು ದಿನಗಳು ಉಳಿದಿದೆ. ಹೀಗಿರುವಾಗ, ಭಾರತ ತಂಡಕಕ್ಕೆ ಹೆಚ್ಚಿನ ಅಭ್ಯಾಸ ಅವಶ್ಯಕತೆ ಇದ್ದ ಕಾರಣ, ಟೂರ್ನಿ ಶುರುವಾಗುವ ಎರಡು ವಾರಗಳ ಮೊದಲೇ ಭಾರತ ತಂಡವು ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಶುರು ಮಾಡಿದೆ. ಮೊನ್ನೆ ಸೋಮವಾರ ಭಾರತ ವರ್ಸಸ್ ವೆಸ್ಟರ್ನ್ ಹೊಸ ಅಭ್ಯಾಸ ಪಂದ್ಯ ಸಹ ನಡೆದಿದೆ. ಆದರೆ ಈ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಆಡಲಿಲ್ಲ. ವಿರಾಟ್ ಅವರು ಪಂದ್ಯದಿಂದ ದೂರ ಉಳಿದಿದ್ದೇಕೆ ಎನ್ನುವ ಪ್ರಶ್ನೆಯೊಂದು ಈಗ ಶುರುವಾಗಿದೆ.

ವಿರಾಟ್ ಅವರ ಗೈರು ಹಾಜರಿಯಲ್ಲಿ, ಭಾರತ ತಂಡದ ಬ್ಯಾಟಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಸೂರ್ಯಕುಮಾರ್ ಯಾದವ್ ಅವರು, 35 ಎಸೆತಗಳಲ್ಲಿ 52 ರನ್ಸ್ ಭಾರಿಸಿದರು. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನವನ್ನೇ ನೀಡಿದರು. ಆದರೂ ಆರಂಭಿಕ ಬ್ಯಾಟಿಂಗ್ ಲೈನಪ್ ಇನ್ನು ಉತ್ತಮವಾಗಬೇಕಿದೆ. ಇನ್ನು ಬೌಲಿಂಗ್ ವಿಷಯಕ್ಕೆ ಬರುವುದಾದರೆ, ಅರ್ಷದೀಪ್ ಸಿಂಗ್ ಅದ್ಭುತ ಪ್ರದರ್ಶನ ನೀಡಿದರು, 3 ಓವರ್ ಗಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟು 3 ವಿಕೆಟ್ಸ್ ಉರುಳಿಸಿದರು. ರವಿಚಂದ್ರನ್ ಅಶ್ವಿನ್ ಅವರು ಸಹ ಈ ಪಂದ್ಯದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರು.

ಇನ್ನು ವಿರಾಟ್ ಕೋಹ್ಲಿ ಅವರು ಪಂದ್ಯವನ್ನು ಯಾಕೆ ಆಡಲಿಲ್ಲ ಎನ್ನುವ ಪ್ರಶ್ನೆಯನ್ನು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಅಶ್ವಿನ್ ಅವರನ್ನು ಕೇಳಿದ್ದು, ಅಶ್ವಿನ್ ಅವರು ತಮಾಷೆಯ ಉತ್ತರ ನೀಡಿದ್ದಾರೆ. “ಒಂದಲ್ಲಾ ಒಂದು ದಿನ ನಾನು ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಸ್ಥಾನ ತಲುಪುತ್ತೇವೆ..ಆಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತೇನೇ..” ಎಂದು ತಮಾಷೆಯಾಗಿ ಹೇಳಿದ್ದಾರೆ. ಇನ್ನು ವಿಶ್ವಕಪ್ ಬಗ್ಗೆ ಮಾತನಾಡಿರುವ ಅಶ್ವಿನ್ ಅವರು, “ಟೂರ್ನಿ ಶುರುವಾಗಲು ಇನ್ನು 2 ವಾರಗಳ ಸಮಯ ಇದೆ, ಈ ಟೂರ್ನಿಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ, ಹಾಗಾಗಿ ಅಭ್ಯಾಸ ಮಾಡುವ ಸಲುವಾಗಿ ಬೇಗ ಬಂದಿದ್ದೇವೆ. ಅಸ್ಟ್ರೇಲಿಯಾಗೆ ಈವರೆಗೂ ಬಂದಿರದ ಹೊಸ ಆಟಗಾರರು ಇದ್ದಾರೆ, ಅವರೆಲ್ಲರಿಗೂ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಹೆಚ್ಚಿನ ಸಮಯ ಸಿಕ್ಕಿದೆ..” ಎಂದು ಹೇಳಿದ್ದಾರೆ ಅಶ್ವಿನ್.

Get real time updates directly on you device, subscribe now.