ವಿಶ್ವಕಪ್ ನಲ್ಲಿ ಜಡೇಜಾ ರವರ ಸ್ಥಾನವನ್ನು ತುಂಬುವ ಆಟಗಾರರನ್ನು ಹೆಸರಿಸಿದ ಚಾಹಲ್: ಈತನೇ ಕಪ್ ಗೆದ್ದು ಕೊಡುತ್ತಾನಾ??

ವಿಶ್ವಕಪ್ ನಲ್ಲಿ ಜಡೇಜಾ ರವರ ಸ್ಥಾನವನ್ನು ತುಂಬುವ ಆಟಗಾರರನ್ನು ಹೆಸರಿಸಿದ ಚಾಹಲ್: ಈತನೇ ಕಪ್ ಗೆದ್ದು ಕೊಡುತ್ತಾನಾ??

ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ಭಾಗವಹಿಸುವ ಎಲ್ಲಾ ತಂಡಗಳು ಕೊನೆಯ ಹಂತದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಭಾರತ ತಂಡ ಕೂಡ ಈಗಾಗಲೇ ಆಸ್ಟ್ರೇಲಿಯಾ ತಲುಪಿ, ಅಭ್ಯಾಸ ಶುರು ಮಾಡಿದ್ದು, ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಒಂದು ಅಭ್ಯಾಸ ಪಂದ್ಯವನ್ನಾಡಿ ಗೆದ್ದಿದೆ. ಭಾರತ ತಂಡದಿಂದ ಚಾಣಾಕ್ಷ ಬೌಲರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅದ್ಭುತ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಸಹ ಇಂಜುರಿ ಕಾರಣದಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಜಸ್ಪ್ರೀತ್ ಬುಮ್ರ ಅವರ ಸ್ಥಾನಕ್ಕೆ ಬಿಸಿಸಿಐ ಯಾರನ್ನು ಆಯ್ಕೆಮಾಡುತ್ತದೆ ಎಂದು ಇನ್ನು ಬಿಟ್ಟುಕೊಟ್ಟಿಲ್ಲ. ಆದರೆ ರವೀಂದ್ರ ಜಡೇಜಾ ಅವರ ಬದಲಾಗಿ ಆಯ್ಕೆಯಾಗಬಹುದಾದ ಅವರಷ್ಟು ಸಾಮರ್ಥ್ಯ ಹೊಂದಿರುವ ಆಟಗಾರ ಯಾರು, ಆಯ್ಕೆಯಾಗಬಲ್ಲ ಆಟಗಾರ ಯಾರು ಎನ್ನುವ ಪ್ರಶ್ನೆ ಸಹ ಶುರುವಾಗಿದ್ದು, ಜಡೇಜಾ ಅವರ ಬದಲಾಗಿ ಯಾರು ಆಯ್ಕೆ ಆಗಬಹುದು ಎನ್ನುವ ಪ್ರಶ್ನೆಗೆ ಯುಜವೇಂದ್ರ ಚಾಹಲ್ ಅವರು ಉತ್ತರ ಕೊಟ್ಟಿದ್ದಾರೆ. ಭಾರತ ತಂಡದ ಮತ್ತೊಬ್ಬ ಆಟಗಾರ, ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಬಲ್ಲ ಆಟಗಾರ ದೀಪಕ್ ಚಹರ್ ಅವರು ಸಹ ಇಂಜುರಿ ಸಮಸ್ಯೆಯಿಂದ ಹೊರಗುಳಿದಿದ್ದು, ಹೀಗಿದ್ದಾಗ ಜಡೇಜಾ ಅವರ ಬದಲಾಗಿ ಆಡುವವರು ಯಾರು ಎನ್ನುವ ಆತಂಕ ಶುರುವಾಗಿದೆ.

ಇದಕ್ಕೆ ಉತ್ತರ ಕೊಟ್ಟಿರುವ ಭಾರತ ತಂಡದ ಸ್ಪಿನ್ನರ್ ಯುಜವೇಂದ್ರ ಚಾಹಲ್ ಅವರು, “ರವೀಂದ್ರ ಜಡೇಜಾ ಅವರು ಒಬ್ಬ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಬೌಲರ್ ಜೊತೆಗೆ ಅತ್ಯುತ್ತಮವಾದ ಬ್ಯಾಟ್ಸ್ಮನ್. ಆಟ ಎಂದಮೇಲೆ ಗಾಯಗಳು ಆಗುವುದು ಸಹಜ, ಜಡೇಜಾ ಅವರ ಸ್ಥಾನವನ್ನು ತುಂಬಲು ಬೇರೆ ಯಾವ ಆಟಗಾರನಿಂದಲು ಆಗುವುದಿಲ್ಲ. ಆದರೆ ಅಕ್ಷರ್ ಪಟೇಲ್ ಅವರು ಆಡುತ್ತಿರುವ ರೀತಿ ನೀಡಿದರೆ, ಜಡೇಜಾ ಅವರ ಸ್ಥಾನಕ್ಕೆ ಅವರು ಸೂಕ್ತ ಆಟಗಾರ ಎಂದು ನನಗೆ ಅನ್ನಿಸುತ್ತದೆ. ಅಕ್ಷರ್ ಅವರು ಕೆಲ ಕ್ರಮಾಂಕದಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ..” ಎಂದು ಹೇಳಿದ್ದಾರೆ. ಚಾಹಲ್ ಅವರ ಮಾತಿನ ಹಾಗೆ, ಅಕ್ಷರ್ ಪಟೇಲ್ ಅವರು ಬೌಲಿಂಗ್ ಮಾಡುವುದರ ಜೊತೆಗೇಜ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಸಹ ಮಾಡಬಲ್ಲರು.