ವಿಶ್ವಕಪ್ ಗೆಲ್ಲಲು ತೆರಳಿರುವ ಭಾರತ ತಂಡಕ್ಕೆ ಅಭ್ಯಾಸ ಪಂದ್ಯದಲ್ಲಿಯೇ ಶಾಕ್ ನೀಡಿದ ಹರ್ಷಲ್ ಪಟೇಲ್. ಇನ್ನು ಭಾರತ ಗೆದ್ದಂತೆ. ನಿಜಕ್ಕೂ ಇವರು ಗೆಲ್ಲುತ್ತಾರಾ??

ವಿಶ್ವಕಪ್ ಗೆಲ್ಲಲು ತೆರಳಿರುವ ಭಾರತ ತಂಡಕ್ಕೆ ಅಭ್ಯಾಸ ಪಂದ್ಯದಲ್ಲಿಯೇ ಶಾಕ್ ನೀಡಿದ ಹರ್ಷಲ್ ಪಟೇಲ್. ಇನ್ನು ಭಾರತ ಗೆದ್ದಂತೆ. ನಿಜಕ್ಕೂ ಇವರು ಗೆಲ್ಲುತ್ತಾರಾ??

ಭಾರತ ತಂಡ ವಿಶ್ವಕಪ್ ಕೊನೆಯ ಹಂತದ ತಯಾರಿಗಾಗಿ ಈಗಾಗಲೇ ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಶುರು ಮಾಡಿದೆ. ವೆಸ್ಟರ್ನ್ ಅಸ್ಟ್ರೇಲಿಯಾ ತಂಡದ ಜೊತೆಗೆ ಮೊದಲ ಅಭ್ಯಾಸ ಪಂದ್ಯ ನಡೆದಿದ್ದು ಭಾರತ ತಂಡ 13 ರನ್ ಗಳ ಜಯ ಸಾಧಿಸಿದೆ. ಆದರೂ ಸಹ ಭಾರತ ತಂಡದ ಆಟಗಾರರ ಬಗ್ಗೆ ಚೆರ್ಚೆಗಳು ಶುರುವಾಗಿದೆ. ಏಕೆಂದರೆ ದ್ವಿತೀಯ ದರ್ಜೆ ಟೀಮ್ ಎದುರು ಟೀಮ್ ಇಂಡಿಯಾ ನಿರೀಕ್ಷೆಯ ಮಟ್ಟದಲ್ಲಿ ಆಟವಾಡಿಲ್ಲ. ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ನಲ್ಲಿ 35 ಎಸೆತಗಳಲ್ಲಿ 52 ರನ್ ಭಾರಿಸಿದರು. ಇವರನ್ನು ಹೊರತು ಪಡಿಸಿ ಬೇರೆ ಆಟಗಾರರು ಹೇಳಿಕೊಳ್ಳುವಂಥ ಪ್ರದರ್ಶನ ನೀಡಲಿಲ್ಲ.

ಇನ್ನು ಬೌಲಿಂಗ್ ಲೈನಪ್ ನಲ್ಲಿ ಸಹ ಭಾರತ ತಂಡ ಎಡವಿದೆ. ಬೌಲಿಂಗ್ ನಲ್ಲಿ ಸಹ ಉತ್ತಮ ಪ್ರದರ್ಶನ ಕಂಡುಬಂದಿಲ್ಲ. ದ್ವಿತೀಯ ದರ್ಜೆ ತಂಡ ವೆಸ್ಟರ್ನ್ ಆಸ್ಟ್ರೇಲಿಯಾ ಭಾರತದಂತಹ ಬಲಿಷ್ಠ ತಂಡದ ಎದುರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಈಗ ಭಾರತ ತಂಡದ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಅವರಿಂದ ಮತ್ತೆ ಟೆನ್ಷನ್ ಶುರುವಾಗಿದೆ, ಅಭ್ಯಾಸ ಪಂದ್ಯದಲ್ಲಿ ಸಹ ಇವರು 4 ಓವರ್ ಗಳಲ್ಲಿ ಬರೋಬ್ಬರಿ 49 ರನ್ ಬಿಟ್ಟುಕೊಟ್ಟಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಯಾವುದೇ ಒತ್ತಡ ಇಲ್ಲದೆ ಹೋದರು ಸಹ, ಹರ್ಷಲ್ ಪಟೇಲ್ ಅವರು ಈ ರೀತಿಯ ಕಳಪೆ ಪ್ರದರ್ಶನ ನೀಡಿರುವುದು ಆತಂಕ ಸೃಷ್ಟಿಸಿದೆ.

ಕೊನೆಗೆ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವವು 8 ವಿಕೆಟ್ ಗಳ ನಷ್ಟಕ್ಕೆ 145 ರನ್ ಗಳಿಸಿದರು. ಈ ರೀತಿಯ ಬೌಲಿಂಗ್ ಪ್ರದರ್ಶನ ನೋಡಿ, ಭಾರತ ತಂಡದ ಬೌಲಿಂಗ್ ಲೈನಪ್ ಇನ್ನು ಫಾರ್ಮ್ ಗೆ ಬಂದಿಲ್ಲ ಎಂದು ಗೊತ್ತಾಗುತ್ತಿದೆ, ಅದರಲ್ಲೂ ಪ್ರಮುಖ ಬೌಲರ್ ಆಗಿರುವ ಹರ್ಷಲ್ ಪಟೇಲ್ ಅವರು ಹೀಗೆ ಆಡುತ್ತಿರುವುದು ಭಾರತ ತಂಡದ ಆತಂಕ ಹೆಚ್ಚಿಸಿದೆ. ತಂಡದ ಸ್ಥಿತಿ ಹೀಗಿರುವಾಗ, ಅಕ್ಟೋಬರ್ 23ರಂದು ಬದ್ಧ ವೈರಿ ಪಾಕಿಸ್ತಾನ್ ವಿರುದ್ಧ ಪಂದ್ಯವನ್ನಾಡಲಿದ್ದು, ಅಂದಿನ ಪಂದ್ಯ ಹೇಗಿರುತ್ತದೆ, ಗೆಲ್ಲುವುದು ಹೇಗೆ ಸಾಧ್ಯ ಎಂದು ಅಭಿಮಮಾನಿಗಳಲ್ಲಿ ಸ್ವಲ್ಪ ಭಯವೂ ಶುರುವಾಗಿದೆ.