ಈ ಕೆಟ್ಟ ಕಲಿಯುಗದ ಹಣೆಬರಹವನ್ನು ಶ್ರೀ ಕೃಷ್ಣ ಮಹಾಭಾರತದಲ್ಲಿಯೇ ಹೇಳಿ ಬಿಟ್ಟಿದ್ದ, ಕೃಷ್ಣ ಹೇಳಿದ ಪ್ರತಿ ಮಾತುಗಳು ನಿಜವೇ. ಏನೆಲ್ಲ ಹೇಳಿದ್ದಾನೆ ಗೊತ್ತೇ??

ಈ ಕೆಟ್ಟ ಕಲಿಯುಗದ ಹಣೆಬರಹವನ್ನು ಶ್ರೀ ಕೃಷ್ಣ ಮಹಾಭಾರತದಲ್ಲಿಯೇ ಹೇಳಿ ಬಿಟ್ಟಿದ್ದ, ಕೃಷ್ಣ ಹೇಳಿದ ಪ್ರತಿ ಮಾತುಗಳು ನಿಜವೇ. ಏನೆಲ್ಲ ಹೇಳಿದ್ದಾನೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ನಾವು ವಾಸ ಮಾಡುತ್ತಿರುವುದು 4ನೇ ಯುಗವಾದ ಕಲಿಯುಗದಲ್ಲಿ, ಈ ಯುಗದ ಬಗ್ಗೆ ನಮ್ಮ ಧರ್ಮ ಪುರಾಣಗಳಲ್ಲಿ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇವೆ. ಕಲಿಯುಗ ಅಂತ್ಯ ಆಗುವ ಸಮಯಕ್ಕೆ ಈ ಪ್ರಪಂಚದಲ್ಲಿ ನ್ಯಾಯ, ನಿಷ್ಠೆ, ಧರ್ಮ ಎಲ್ಲವೂ ಕೊನೆಗೊಂಡಿರುತ್ತದೆ. ಮನುಷ್ಯನ ಆಯಸ್ಸು ಕಡಿಮೆ ಆಗಿರುತ್ತದೆ, ಮನುಷ್ಯರು ಸ್ವಾರ್ಥ ಜೀವಿಗಳಾಗಿರುತ್ತಾರೆ. ಎಲ್ಲೇ ನೋಡಿದರು ಮೋಸ, ಜಗಳ, ವಂಚನೆ ಕಂಡುಬರುತ್ತದೆ, ಅಧರ್ಮ ತಾಂಡವ ಆಡುವ ಆ ಸಮಯದಲ್ಲಿ ಭಗವಾನ್ ವಿಷ್ಣು ಕಲ್ಕಿ ರೂಪದಲ್ಲಿ ಭೂಲೋಕಕ್ಕೆ ಬಂದು, ಅಧರ್ಮವನ್ನು ಸಂಹರಿಸಿ, ಧರ್ಮದ ಸ್ಥಾಪನೆ ಮಾಡುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.

ಈ ಕಲಿಯುಗದಲ್ಲಿ ಏನೆಲ್ಲಾ ಆಗುತ್ತದೆ ಎಂದು ಶ್ರೀಕೃಷ್ಣ ಮಹಾಭಾರತದಲ್ಲಿಯೇ ಹೇಳಿದ್ದನು, ಮಹಾಭಾರತದ ಹಲವು ಸಂದರ್ಭಗಳಲ್ಲಿ ಶ್ರೀಕೃಷ್ಣ ಕಲಿಯುಗದ ಬಗ್ಗೆ ಹೇಳಿರುವ ಮಾತುಗಳು ಸತ್ಯವಾಗಿದೆ. ಈಗಲೂ ಅದೆಲ್ಲವೂ ಪ್ರಪಂಚದಲ್ಲಿ ನಡೆಯುತ್ತಿದೆ. ಹಾಗಿದ್ದರೆ, ಶ್ರೀಕೃಷ್ಣ ಮಹಾಭಾರತದಲ್ಲಿ ಯಾವ ಸಂದರ್ಭಗಳಲ್ಲಿ ಕಲಿಯುಗದ ಬಗ್ಗೆ ತಿಳಿಸಿದ್ದಾನೆ ಎಂದು ಈಗ ನೋಡೋಣ..

ಮಹಾಭಾರತ ಎಂದರೆ, ಪಾಂಡವರು ಮತ್ತು ಕೌರವರ ನಡುವೆ ರಾಜ್ಯಕ್ಕಾಗಿ, ಅಧಿಕಾರಕ್ಕಾಗಿ ನಡೆದ ಯುದ್ಧದ ಕಥೆಯಷ್ಟೇ ಎಂದು ಹಲವು ಜನರು ಅಂದುಕೊಂಡಿದ್ದಾರೆ, ಆದರೆ ಅದನ್ನಷ್ಟೇ ಮಹಾಭಾರತದಲ್ಲಿ ತಿಳಿಸಿಲ್ಲ, ಮಹಾಭಾರತದ ಹಲವು ಘಟನೆಗಳಲ್ಲಿ ಸಂಗತಿಗಳಲ್ಲಿ ಕಲಿಯುಗದ ಉಲ್ಲೇಖ ಇದೆ, ಕಲಿಯುಗದ ಬಗ್ಗೆ ವಿವರಣೆ ನೀಡಲಾಗಿದೆ. ಮಹಾಭಾರತದಲ್ಲಿ ಪಾಂಡವರು ಕೌರವರ ವಿರುದ್ಧ ಪಗಡೆ ಆಟದಲ್ಲಿ ಸೋತು ವನವಾಸಕ್ಕೆ ಹೋಗುವ ಸಮಯದಲ್ಲಿ, ಪಾಂಡವ ರಾಜಕುಮಾರರಲ್ಲಿ ಹಿರಿಯನಾದ ಯುಧಿಷ್ಠಿರರು ಭಗವಾನ್ ಶ್ರೀಕೃಷ್ಣರ ಬಳಿ ಒಂದು ಪ್ರಶ್ನೆ ಕೇಳುತ್ತಾನೆ, “ಪ್ರಭು ದ್ವಾಪರ ಯುಗ ಮುಗಿಯುತ್ತಿದೆ, ಮುಂದೆ ಬರುವ ಯುಗ ಯಾವುದು? ಅದು ಹೇಗಿರುತ್ತದೆ? ಆ ಯುಗದ ಲಕ್ಷಣಗಳೇನು..?” ಎಂದು ಪ್ರಶ್ನೆ ಮಾಡುತ್ತಾರೆ.

ಆಗ ಶ್ರೀಕೃಷ್ಣ ನಗುತ್ತಾ, “ಮೊದಲು ನೀವು ಸಿದ್ಧವಾಗಿ ವನವಾಸಕ್ಕೆ ಹೊರಡಿ.. ಅಲ್ಲಿ ನಿಮ್ಮ ಕಣ್ಣಿಗೆ ಏನೆಲ್ಲ ಕಾಣಿಸುತ್ತದೆ ಎಂದು ನನಗೆ ತಿಳಿಸಿ..ನಂತರ ನಾನು ಕಲಿಯುಗದ ಬಗ್ಗೆ ಹೇಳುತ್ತೇನೆ..”ಎಂದು ಹೇಳಿ, ಪಾಂಡವರಿಗೆ ಆದೇಶ ಕೊಡುತ್ತಾರೆ ಶ್ರೀಕೃಷ್ಣ. ಶ್ರೀಕೃಷ್ಣ ಹೇಳಿದ ಹಾಗೆ ಹೊರಟ ಪಾಂಡವರು, ಐವರಲ್ಲಿ ಒಬ್ಬೊಬ್ಬರು ಕೂಡ ಒಂದೊಂದು ದಿಕ್ಕಿನಲ್ಲಿ ಹೋಗುತ್ತಾರೆ, ಐವರು ಸಹ ಅನೇಕ ವಿಚಿತ್ರ ಘಟನೆಗಳನ್ನು ನೋಡುತ್ತಾರೆ, ಅನುಭವಿಸುತ್ತಾರೆ. ಮೊದಲ ದಿನದ ವನವಾಸ ಮುಗಿಸಿ ಎಲ್ಲರೂ ಸಹ, ವಾಪಸ್ ಬಂದು ತಾವು ನೋಡಿದ್ದನ್ನು ಶ್ರೀಕೃಷ್ಣನ ಬಳಿ ವಿವರಿಸುತ್ತಾರೆ.

ಮೊದಲಿಗೆ ಮಾತನಾಡುವ ಯುಧಿಷ್ಠಿರ, “ದೇವ, ನಿಮ್ಮ ಆಜ್ಞೆಯಂತೆ ನಾವು ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೋದೆವು.. ನಾನು ಹೋದ ದಿಕ್ಕಿನಲ್ಲಿ ಕೊಳದ ಬಳಿ, ಗುಲಾಬಿ ಬಣ್ಣದ ಎರಡು ಸೊಂಡಿಲುಗಳು ಇರುವ ಆನೆಯೊಂದನ್ನು ನೋಡಿ ನನಗೆ ಆಶ್ಚರ್ಯ ಆಯಿತು. ಆನೆಗೆ ಗುಲಾಬಿ ಬಣ್ಣ ಮತ್ತು ಸೊಂಡಿಲು ಇರಲು ಹೇಗೆ ಸಾಧ್ಯ ಎಂದು ಅನ್ನಿಸಿತು. ಇದಕ್ಕೂ ಕಲಿಯುಗಕ್ಕೂ ಏನಾದರೂ ಸಂಬಂಧ ಇದೆಯೇ, ದಯವಿಟ್ಟು ಆರ್ಥಮಾಡಿಸಿ..” ಎಂದು ಕೇಳುತ್ತಾರೆ.

ಆಗ ನಗುವ ಶ್ರೀಕೃಷ್ಣ, “ಯುಧಿಷ್ಠಿರ ಸ್ವಲ್ಪ ಸಾವಧಾನ ಇರಲಿ. ಭೀಮ ಮತ್ತು ಅರ್ಜುನರು ಬರಲಿ, ಇಂದು ಅವರು ಏನು ನೋಡಿದ್ದಾರೆ ಎಂದು ತಿಳಿಯಲು ನಾನು ಕಾತುರನಾಗಿದ್ದೇನೆ, ಅವರು ನೋಡಿದ್ದನ್ನು ತಿಳಿದ ಬಳಿಕ, ನಾನು ಎಲ್ಲವನ್ನು ವಿವರಿಸುತ್ತೇನೆ..” ಎನ್ನುತ್ತಾರೆ. ಆಗ ಅರ್ಜುನರು ಬಂದು, “ಕೃಷ್ಣ, ನಾನು ಒಂದು ಕಡೆ ಒಂದು ಹಕ್ಕಿಯನ್ನು ನೋಡಿದೆ, ಅದರ ರೆಕ್ಕೆಗಳ ಮೇಲೆ ವೇದ ಶಾಸ್ತ್ರ ಬರೆದಿತ್ತು, ಆದರೆ ಆ ಹಕ್ಕಿ ಮಾಂಸಾಹಾರ ಸೇವಿಸುತ್ತಿತ್ತು.. ಅದನ್ನು ನೋಡಿ ಆಶ್ಚರ್ಯವಾಯಿತು..”ಎಂದರು. ನಂತರ ಭೀಮ, “ಕೃಷ್ಣ, ನಾನು ಒಂದು ಹಸು ತನ್ನ ಮಗುವಿಗೆ ಜನ್ಮ ಕೊಡುವುದನ್ನು ನೋಡಿದೆ. ನಂತರ ಅದೇ ಹಸು ತನ್ನ ಕರುವಿಗೆ ರಕ್ತಬರುವ ವರೆಗು, ನಾಲಿಗೆಯಿಂದ ನೆಕ್ಕುತ್ತಿತ್ತು. ಅದನ್ನು ನೋಡಿ ನನಗೆ ಆಶ್ಚರ್ಯ ಆಯಿತು, ಒಬ್ಬ ತಾಯಿ ತನ್ನ ಮಗುವಿಗೆ ಇಷ್ಟು ಕಷ್ಟ ಕೊಡಲು ಹೇಗೆ ಸಾಧ್ಯ ಎನ್ನಿಸುತು..”ಎಂದು ಹೇಳುತ್ತಾರೆ ಭೀಮ..

ನಂತರ ಶ್ರೀಕೃಷ್ಣ, ಸಹದೇವನ ಕಡೆಗೆ ನೋಡಿ, ನೀನು ಏನು ನೋಡಿದೆ ಹೇಳು ಸಹದೇವ ಎಂದು ಕೇಳುತ್ತಾರೆ, ಆಗ ಸಹದೇವ, “ಕೃಷ್ಣ, ನಾನು ಒಂದು ಮನೆಯ ಸುತ್ತ ಆರು ಬಾವಿಗಳನ್ನು ನೋಡಿ, ಅದರಲ್ಲಿ ಮಧ್ಯದ ಬಾವು ಒಂದನ್ನು ಬಿಟ್ಟು, ಇನ್ನೆಲ್ಲಾ ಬಾವಿಗಳಲ್ಲ ನೀರಿತ್ತು. ಉಳಿದ ಎಲ್ಲಾ ಬಾವಿಗಳಿಗಿಂತ ಆಳವಾದ ಬಾವಿ ಆ ಮಧ್ಯದ ಬಾವಿ ಆಗಿತ್ತು, ಆದರೆ ಆ ಬಾವಿಯಲ್ಲಿ ನೀರಿಲ್ಲ ಎನ್ನುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು..” ಎನ್ನುತ್ತಾರೆ. ನಂತರ ನಕುಲನ ಕಡೆಗೆ ನೋಡಿ ಶ್ರೀಕೃಷ್ಣ, ನೀನೇನು ನೋಡಿದೆ ಹೇಳು ನಕುಲ ಎಂದು ಕೇಳುತ್ತಾರೆ, ಆಗ ನಕುಲ₹ “ಕೃಷ್ಣ, ಒಂದು ಪರ್ವತದಿಂದ ಬೃಹತ್ ಆಕಾರದ ಬಂಡೆಯೊಂದು ಉರುಳಿ ಬರುತ್ತಿರುವುದನ್ನು ನೋಡಿದೆ, ಎಲ್ಲಾ ಮರಗಳನ್ನು ಆ ಬಂಡೆ ಉರುಳಿಸುತ್ತಿತ್ತು, ಆದರೆ ಒಂದು ಸಣ್ಣ ಗಿಡದ ಎದುರು ನಿಂತು ಹೋಯಿತು..”ಇದನ್ನು ನೋಡಿ ನನಗೆ ಆಶ್ಚರ್ಯ ಆಯಿತು ಎನ್ನುತ್ತಾರೆ ನಕುಲ.

ಆಗ ಶ್ರೀಕೃಷ್ಣ ನಗುತ್ತಾ, ಅವರೆಲ್ಲರು ನೋಡಿದ್ದಕ್ಕೆಲ್ಲ ಉತ್ತರ ತಿಳಿಸುತ್ತಾರೆ. ಮೊದಲಿಗೆ ಯುಧಿಷ್ಠಿರನ ಕಡೆಗೆ ನೋಡುವ ಶ್ರೀಕೃಷ್ಣ, “ಧರ್ಮರಾಯ ನೀನು ನೋಡಿದ ಎರಡು ಸೊಂಡಿಲು ಇರುವ ಆನೆ, ಕಲಿಯುಗದಲ್ಲಿ ಮನುಷ್ಯರು ಹೇಳುವುದೊಂದು, ಮಾಡುವುದೊಂದು ಎನ್ನುವುದನ್ನು ಸೂಚಿಸುತ್ತದೆ. ಮನುಷ್ಯರ ಬಾಯಲ್ಲಿ ಬರುವುದು ಒಂದು ಮಾತು, ಮಾಡುವ ಕೆಲಸ ಒಂದು, ಅವರ ಮನಸ್ಸಿನಲ್ಲಿ ಇರುವ ಕೃತ್ಯ ಮತ್ತೊಂದು. ಕಲಿಯುಗದ ಜನನಾಯಕರು ಕೂಡ ಹಾಗಯೇ ಇರುತ್ತಾರೆ. ಅವರು ಹೇಳುವುದೊಂದು, ಮಾಡುವುದೊಂದು, ಅವರಿಗೆ ಜನರ ಮೇಲೆ ಯಾವುದೇ, ಕಾಳಜಿ ಪ್ರೀತಿ ಇರುವುದಿಲ್ಲ. ನೀನು ನೋಡಿದ ಎರಡು ಸೊಂಡಿಲಿನ ಆನೆಗಳ ಅರ್ಥ ಇದು..” ಎನ್ನುತ್ತಾರೆ ಶ್ರೀಕೃಷ್ಣ.

ನಂತರ ಅರ್ಜುನನ ಕಡೆಗೆ ನೋಡಿ, “ಅರ್ಜುನ ನೀನು ಒಂದು ಹಕ್ಕಿಯ ರೆಕ್ಕೆ ಮೇಲೆ ವೇದ ಬರೆದಿತ್ತು, ಆದರೆ ಆ ಹಕ್ಕಿ ಮಾಂಸಹಾರ ತಿನ್ನುತ್ತಾ ಇತ್ತು ಎಂದು ಹೇಳಿದೆ. ಕಲಿಯುಗದಲ್ಲಿ ವೇದ ಉಪನ್ಯಾಸ ತಿಳಿದವರು, ಜ್ಞಾನಿಗಳು ತಾವು ಕಲಿತ ವಿದೆಯಿಂದ ಮತ್ತೊಬ್ಬರಿಗೆ ಸಹಾಯ ಮಾಡದೆ, ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ. ಅಧಿಕಾರದಲ್ಲಿರುವವರನ್ನು ಕೆಳಗಿಳಿಸಿ, ಎಲ್ಲವೂ ತಮಗೆ ಬೇಕು ಎನ್ನುವಂಥ ಮನಸ್ಥಿತಿ ಹೊಂದಿರುತ್ತಾರೆ. ಹಣಕ್ಕಾಗಿ ಅಂತಸ್ತಿಗಾಗಿ ಏನು ಬೇಕಾದರು ಮಾಡುವ ಹಾಗಿರುತ್ತಾರೆ. ಕಲಿಯುಗದ ತುಂಬಾ ಇಂಥ ಜನರೇ ಇರುತ್ತಾರೆ ಲಕ್ಷಕ್ಕೊಬ್ಬರು ಒಳ್ಳೆಯವರಿರುತ್ತಾರೆ. ಇದನ್ನು ನೀನು ನೋಡಿದ ವಿಚಿತ್ರ ದೃಶ್ಯ ಸೂಚಿಸುತ್ತದೆ..” ಎನ್ನುತ್ತಾರೆ ಕೃಷ್ಣ.

ಭೀಮನ ಕಡೆಗೆ ನೋಡಿ, “ಭೀಮ ನೀನು ಒಂದು ಹಸು ತನ್ನ ಕರುವಿನ ಮೈಯನ್ನು ರಕ್ತ ಬರುವ ಹಾಗೆ ನೆಕ್ಕಿದ್ದನ್ನು ನೋಡಿದೆ, ಇದರ ಅರ್ಥ, ಕಲಿಯುಗದಲ್ಲಿ ಪೋಷಕರು ಅತಿಯಾದ ಕಾಳಜಿಯಿಂದ ತಮ್ಮ ಮಕ್ಕಳ ಬಾಳಿಗೆ ಕಂಟಕವಾಗುತ್ತಾರೆ. ಪೋಷಕರು ಅತಿಯಾದ ಕಾಳಜಿ ತೋರಿಸುವುದರಿಂದ ಮಕ್ಕಳು ಹಾಳಾಗುತ್ತಾರೆ, ಸಮಜಕ್ಕೆ ಕಂಟಕ ಆಗುವ ಹಾಗೆ ಬೆಳೆಯುತ್ತಾರೆ. ಯಾರಾದರೂ ಒಬ್ಬ ವ್ಯಕ್ತಿ ಮನೆ ಬಿಟ್ಟು ಹೋಗಿ ಸನ್ಯಾಸಿ ಆದರೆ ಜನರು ಆತನನ್ನು ನೋಡಲು ಸಾಲು ಸಾಲಾಗಿ ಬರುತ್ತಾರೆ, ಆದರೆ ತಮ್ಮ ಮಕ್ಕಳು ಹಾಗೆ ಮಾಡಿದರೆ ಸಹಿಸುವುದಿಲ್ಲ. ನೀನು ನೋಡಿದ ವಿಚಿತ್ರ ಘಟನೆಯ ತಾತ್ಪರ್ಯ ಇದು..”ಎನ್ನುತ್ತಾರೆ ಶ್ರೀಕೃಷ್ಣ.

ನಂತರ ಸಹದೇವನ ಕಡೆಗೆ ನೋಡಿ, “ಸಹದೇವ ನೀನು ಐದು ಬಾವಿಗಳ ನಡುವೆ ಒಂದು ನೀರಿರದ ಬಾವಿಯನ್ನು ನೋಡಿದೆ ಅಂತ ಹೇಳಿದೆ.. ಅದರ ಅರ್ಥ, ಕಲಿಯುಗದಲ್ಲಿ ತಮಗೆ, ತಮ್ಮ ಮಕ್ಕಳಿಗೆ ಮತ್ತು ತಮ್ಮವರಿಗೆ ಎಷ್ಟು ಹಣ ಬೇಕಿದ್ದರು ಖರ್ಚು ಮಾಡುತ್ತಾರೆ, ಆದರೆ ತಮ್ಮ ಪಕ್ಕದ ಮನೆಯಲ್ಲಿರುವ ಕಷ್ಟದಲ್ಲಿರುವವರಿಗೆ ಯಾವುದೇ ಸಹಾಯ ಮಾಡುವುದಿಲ್ಲ. ತಿನ್ನಲು, ಕುಡಿಯಲು, ಐಷಾರಾಮಿ ಜೀವನ ಮಾಡಲು ಸಾಕಷ್ಟು ಖರ್ಚು ಮಾಡುತ್ತಾರೆ ಹೊರತು ಬಡವರಿಗೆ ಸಹಾಯ ಮಾಡುವುದಿಲ್ಲ. ಕಲಿಯುಗದಲ್ಲಿ ಬಂಗಲೆಗಳ ಪಕ್ಕದಲ್ಲೇ ಗುಡಿಸಲು ಇರುತ್ತದೆ, ಆದರೆ ಯಾರೂ ಕೂಡ ಅಂತಹ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಿಲ್ಲ. ತಮ್ಮ ಸ್ವಾರ್ಥಕ್ಕಾಗಿ ತಮ್ಮ ಬಳಿ ಇರುವುದನ್ನು ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸೂಚಿಸುತ್ತದೆ..”ಎಂದು ಹೇಳುತ್ತಾರೆ ಶ್ರೀಕೃಷ್ಣ.

ನಂತರ ನಕುಲನ ಕಡೆಗೆ ತಿರುಗಿ, “ನಕುಲ ನೀನು ಒಂದು ದೊಡ್ಡ ಬಂಡೆ ದೊಡ್ಡ ದೊಡ್ಡ ಮರಗಳು ಉರುಳಿಸಿ, ಸಣ್ಣ ಗಿಡಕ್ಕೆ ತಾಗಿ ನಿಂತಿದ್ದನ್ನು ನೋಡಿದೆ, ಅದರ ಅರ್ಥ.. ಕಲಿಯುಗದಲ್ಲಿ ಮನುಷ್ಯರು ಹಣ, ಆಸ್ತಿ, ಅಧಿಕಾರ, ಉದ್ಯೋಗ, ಇದ್ಯಾವುದಕ್ಕೂ ಜಗ್ಗದೆ ಹರಿನಾಮ ಸ್ಮರಣೆಗೆ ಮಾತ್ರ ಜಗ್ಗುತ್ತಾರೆ, ನಿನ್ನ ಕಣ್ಣಿಗೆ ಕಂಡ ಆ ಪುಟ್ಟ ಗಿಡ, ಹರಿನಾಮ ಸ್ಮರಣೆಯನ್ನು ಸೂಚಿಸುತ್ತದೆ, ಲೌಕಿಕ ಸುಖಗಳಿಗೆ ಜಗ್ಗದ ಮನುಷ್ಯನ ಗುಣ ಶರಣಾಗುವುದು ಭಕ್ತಿಗೆ, ನನ್ನ ಚರಣಗಳಿಗೆ ಮಾತ್ರ. ಕಲಿಯುಗದಲ್ಲಿ ಹಣದ ಮದದಲ್ಲಿ ಮೆರೆಯುವ ಜನರು ನನ್ನ ದರ್ಶನಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಾರೆ, ಅಂಥವರು ಮೋಕ್ಷ ಪಡೆಯಲು ನೆಮ್ಮದಿ ಪಡೆಯಲು ನನ್ನ ಬಳಿಗೆ ಬರಬೇಕು. ನೀನು ಕಂಡ ದೃಶ್ಯದ ತಾತ್ಪರ್ಯ ಇದು..”ಎನ್ನುತ್ತಾರೆ ಶ್ರೀಕೃಷ್ಣ.

ಶ್ರೀಕೃಷ್ಣ ನೀಡಿದ ಈ ವಿವರಣೆ ಕೇಳಿದ ಪಾಂಡವರಿಗೆ ಕಲಿಯುವ ಹೇಗಿರುತ್ತದೆ, ಅಲ್ಲಿ ಏನೆಲ್ಲಾ ಆಗುತ್ತದೆ, ಆ ಯುಗದ ಲಕ್ಷಣ ಏನು ಎನ್ನುವ ಚಿತ್ರಣ ಸಿಕ್ಕಿತು. ಸಾಕಷ್ಟು ಜನರು ಮಹಾಭಾರತ ಒಂದು ಕಥೆ ಮಾತ್ರ ಎಂದುಕೊಳ್ಳುತ್ತಾರೆ, ಆದರೆ ಶ್ರೀಕೃಷ್ಣ ಹೇಳಿದ ಮಾತುಗಳನ್ನು ಸೂಕ್ಷ್ಮವಾಗಿ ಕೇಳಿದರೆ, ಆಗ ಅವರು ಹೇಳಿದ್ದು ಹೇಗೆ ಈಗ ನಿಜವಾಗುತ್ತಿದೆ ಎಂದು ಅರ್ಥವಾಗುತ್ತದೆ.