ಭಾರತ ತಂಡಕ್ಕೆ ಮತ್ತೊಂದು ಶಾಕ್: ವಿಶ್ವಕಪ್ ರೂಲ್ಸ್ ಗೂ ಕ್ಯಾರೇ ಎನ್ನದ ಬಿಸಿಸಿಐ: ಐಸಿಸಿ ಗಡುವು ಕೂಡ ಅಂತ್ಯ.

ಭಾರತ ತಂಡಕ್ಕೆ ಮತ್ತೊಂದು ಶಾಕ್: ವಿಶ್ವಕಪ್ ರೂಲ್ಸ್ ಗೂ ಕ್ಯಾರೇ ಎನ್ನದ ಬಿಸಿಸಿಐ: ಐಸಿಸಿ ಗಡುವು ಕೂಡ ಅಂತ್ಯ.

ಅಕ್ಟೋಬರ್ 16ರಿಂದ ಐಸಿಸಿ ಟಿ20 ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಶುರುವಾಗಲಿದ್ದು, ಭಾರತ ತಂಡದ 14 ಸದಸ್ಯರು ಈಗಾಗಲೆ ಆಸ್ಟ್ರೇಲಿಯಾ ತಲುಪಿ ಅಭ್ಯಾಸ ಶುರು ಮಾಡಿದ್ದಾರೆ. ಭಾರತ ತಂಡಕ್ಕೆ ಬೌಲಿಂಗ್ ನಲ್ಲಿ ಪ್ರಮುಖ ಅಸ್ತ್ರ ಆಗಿದ್ದ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ಇಂದ ಹೊರಗಿರುವ ವಿಚಾರ ಗೊತ್ತೇ ಇದೆ, ಆದರೆ ಬುಮ್ರ ಅವರ ಬದಲಾಗಿ ವಿಶ್ವಕಪ್ ನಲ್ಲಿ ಆಡುವ ಬದಲಿ ಆಟಗಾರ ಯಾರು ಎಂದು ಬಿಸಿಸಿಐ ಇನ್ನು ತಿಳಿಸಿಲ್ಲ. ಬದಲಿ ಆಟಗಾರರನ್ನು ಆಯ್ಕೆ ಮಾಡಿ ತಿಳಿಸಲು ಐಸಿಸಿ ಕೊಟ್ಟಿದ್ದ ಗಡುವು ಮುಗಿದು ಹೋಗಿದ್ದು ಬಿಸಿಸಿಐ ಇನ್ನು ಬದಲಿ ಆಟಗಾರನನ್ನು ಆಯ್ಕೆ ಮಾಡಿ ತಿಳಸಿಲ್ಲ ಎಂದು ಮಾಹಿತಿ ಸಿಕ್ಕಿದೆ.

ಜಸ್ಪ್ರೀತ್ ಬುಮ್ರ ಅವರು ಎಂತಹ ಬೌಲರ್ ಎಂದು ನಮಗೆಲ್ಲ ಗೊತ್ತಿದೆ. ಅವರ ಬದಲಾಗಿ ಬರುವ ಆಟಗಾರ ಸಹ ಬುಮ್ರ ಅವರ ಹಾಗೆ ಚಾಣಾಕ್ಷ ಬೌಲರ್ ಆಗಿರಬೇಕು. ಹಾಗಾಗಿ ಬಿಸಿಸಿಐ ಎದುರು ಇಬ್ಬರು ಆಟಗಾರರು ಪ್ರಮುಖ ಆಯ್ಕೆಯಾಗಿದ್ದಾರೆ, ಒಬ್ಬರು ಮೊಹಮ್ಮದ್ ಶಮಿ, ಮತ್ತೊಬ್ಬರು ದೀಪಕ್ ಚಹರ್, ಇವರಿಬ್ಬರು ಸಹ ಪ್ರಸ್ತುತ ಬೆಂಗಳೂರಿನ ಎನ್.ಸಿ.ಎ ನಲ್ಲಿದ್ದಾರೆ. ಬೌಲಿಂಗ್ ಗೆ ಬರುವುದಾದರೆ ಮೊಹಮ್ಮದ್ ಶಮಿ ಅವರು ಪ್ರಮುಖ ಆಯ್ಕೆಯಾಗುತ್ತಾರೆ. ಏಕೆಂದರೆ ಶಮಿ ಅವರು ಅನುಭವಿ ಆಟಗಾರ ಆಗಿದ್ದಾರೆ. ವಿಶ್ವಕಪ್ ಗೆ ಇವರು ಸೂಕ್ತವಾದ ಆಟಗಾರ ಆಗುತ್ತಾರೆ, ಆದರೆ ಭಾರತ ತಂಡ ಬೌಲರ್ ಆಲ್ ರೌಂಡರ್ ಗಾಗಿ ಪ್ಲಾನ್ ಮಾಡುತ್ತಿದ್ದರೆ, ದೀಪಕ್ ಚಹರ್ ಉತ್ತಮವಾದ ಆಯ್ಕೆಯಾಗುತ್ತಾರೆ. ಆದರೆ ಇವರಿಬ್ಬರು ಫಿಟ್ನೆಸ್ ತೆಗೆದುಕೊಂಡ ಮೇಲಷ್ಟೇ ಯಾರು ಆಯ್ಕೆಯಾಗಬಹುದು ಎಂದು ಗೊತ್ತಾಗಲಿದೆ.

ಕೋವಿಡ್ ಸೋಂಕಿಗೆ ಒಳಗಾಗಿದ್ದ ಶಮಿ ಅವರು ಫಿಟ್ನೆಸ್ ಟೆಸ್ಟ್ ಗಾಗಿ ತಯಾರಾಗಿದ್ದಾರೆ. ಆದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಚಹರ್ ಅವರನ್ನು ವೈದ್ಯರು ಗಮನಿಸುತ್ತಿದ್ದು ಚಹರ್ ಅವರು ಇನ್ನು ಫಿಟ್ನೆಸ್ ಟೆಸ್ಟ್ ತೆಗೆದುಕೊಳ್ಳಲು ಅನುಮತಿ, ಅವರಿಗೆ ಕೆಲವು ದಿನಗಳ ರೆಸ್ಟ್ ಬೇಕು ಎಂದು ಹೇಳಲಾಗಿದೆ. ಈ ಇಬ್ಬರು ಆಟಗಾರರು ವರ್ಲ್ಡ್ ಕಪ್ ತಂಡದ ಸ್ಟ್ಯಾಂಡ್ ಬೈ ಆಟಗಾರರ ಪಟ್ಟಿಯಲ್ಲಿದ್ದಾರೆ. ಹಾಗಾಗಿ ಭಾರತ ತಂಡ ಶಮಿ ಅವರನ್ನೇ ಆಯ್ಕೆ ಮಾಡಬಹುದು ಎನ್ನಲಾಗಿದೆ. ಆದರೆ ಬಿಸಿಸಿಐ ಕೊಟ್ಟಿರುವ ಗಡುವು ಮುಗಿದು ಹೋಗಿದ್ದು, ಇನ್ನುಮುಂದೆ ಆಟಗಾರರ ಬದಲಾವಣೆ ಮಾಡಬೇಕಾದರೆ, ತಂಡಗಳು ಐಸಿಸಿ ಅನುಮತಿ ಪಡೆಯಬೇಕು. ಬಿಸಿಸಿಐ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಸ್ಪ್ರೀತ್ ಬುಮ್ರ ಅವರ ಬದಲಾಗಿ ಆಡುವ ಆಟಗಾರನನ್ನು ಶೀಘ್ರದಲ್ಲೇ ಪ್ರಕಟಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.