ಟೀಮ್ ಇಂಡಿಯಾ ದಲ್ಲಿ ಕೋಟಿ ಕೋಟಿ ದುಡಿಯುವ ಜೊತೆಗೆ ಕ್ರೀಡಾ ಕೋಟಾದಲ್ಲಿ ಸರ್ಕಾರೀ ಉದ್ಯೋಗ ಪಡೆದಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಟೀಮ್ ಇಂಡಿಯಾ ದಲ್ಲಿ ಕೋಟಿ ಕೋಟಿ ದುಡಿಯುವ ಜೊತೆಗೆ ಕ್ರೀಡಾ ಕೋಟಾದಲ್ಲಿ ಸರ್ಕಾರೀ ಉದ್ಯೋಗ ಪಡೆದಿರುವ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ನಮ್ಮ ಭಾರತ ದೇಶದಲ್ಲಿ ಕ್ರಿಕೆಟ್ ಎನ್ನುವುದು ಒಂದು ಕ್ರೀಡೆ ಅಷ್ಟೇ ಅಲ್ಲ ಅದೊಂದು ಧರ್ಮ ಎಂದೇ ಹೇಳಬಹುದು. ವಿವಿಧತೆಯಲ್ಲಿ ಏಕತೆ ಎನ್ನುವ ಹಾಗೆ ಭಾರತ ದೇಶದಲ್ಲಿ ಹಲವು ಜಾತಿ ಧರ್ಮಗಳು ಇದ್ದರು ಸಹ, ಕ್ರಿಕೆಟ್ ಎಂದು ಬಂದರೆ ಎಲ್ಲರೂ ಒಂದಾಗಿ ನಿಲ್ಲುತ್ತಾರೆ. ಅದ್ಭುತವಾಗಿ ಕ್ರಿಕೆಟ್ ಆಡುವ ಆಟಗಾರರಿಗೆ ದೊಡ್ಡ ಅಭಿಮಾನಿ ಬಳಗವೇ ಶುರುವಾಗುತ್ತದೆ. ಒಂದೆರಡು ಒಳ್ಳೆಯ ಇನ್ನಿಂಗ್ಸ್ ಆಡಿ ಭಾರತ ತಂಡವನ್ನು ಗೆಲ್ಲಿಸಿದ ಆಟಗಾರನಿಗೆ ರಾತ್ರೋ ರಾತ್ರಿ ದೊಡ್ಡ ಅಭಿಮಾನಿ ಬಳಗ ಹುಟ್ಟುಕೊಳ್ಳುತ್ತದೆ. ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಅಭಿಮಾನಿಗಳು ಹೇಗೆ ಸಿಗುತ್ತಾರೋ ಅದೇ ರೀತಿ, ಭಾರತ ಸರ್ಕಾರ ಸಹ ಅವರನ್ನು ಗೌರವಿಸಿ ಅವರಿಗೆ ಸರ್ಕಾರಿ ಕೆಲಸ ನೀಡುತ್ತದೆ. ಹೀಗೆ, ಕ್ರಿಕೆಟಿಗರಾಗಿ ಸಾಧನೆ ಮಾಡಿ ಸರ್ಕಾರಿ ಕೆಲಸ ಪಡೆದ ಕ್ರಿಕೆಟ್ ಆಟಗಾರರ ಬಗ್ಗೆ ತಿಳಿಸುತ್ತೇವೆ..

ಕೆ.ಎಲ್.ರಾಹುಲ್ :- ಇವರು ಭಾರತ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು, ಕರ್ನಾಟಕದವರಾದ ಕೆ.ಎಲ್.ರಾಹುಲ್ ಭಾರತ ತಂಡದ ಪರವಾಗಿ ಹಲವು ಅದ್ಭುತವಾದ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಉಪನಾಯನಾಗಿ ಮತ್ತು ಕೆಲವು ಪಂದ್ಯಗಳಲ್ಲಿ ನಾಯಕನಾಗಿ ಭಾರತ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾರೆ. ಕೆ.ಎಲ್.ರಾಹುಲ್ ಅವರು ಪ್ರಸ್ತುತ ಭಾರತ ತಂಡದ ಓಪನರ್ ಆಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರೊಡನೆ ಕಣಕ್ಕೆ ಇಳಿಯುತ್ತಿದ್ದಾರೆ. ರಾಹುಲ್ ಅವರ ಅತ್ಯದ್ಭುತ ಕ್ರಿಕೆಟ್ ಪ್ರದರ್ಶನಕ್ಕಾಗಿ, ಭಾರತ ಸರ್ಕಾರವು ಆರ್.ಬಿ.ಐ ನಲ್ಲಿ ಸಹಾಯಕ ವ್ಯವಸ್ಥಾಪಕನ ಸ್ಥಾನವನ್ನು ಇವರಿಗೆ ನೀಡಿದೆ.

ಯುಜವೇಂದ್ರ ಚಾಹಲ್ :- ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ಎಂದೇ ಚಾಹಲ್ ಅವರು ಗುರುತಿಸಿಕೊಂಡಿದ್ದಾರೆ. ಚಾಹಲ್ ಅವರು ಬೌಲಿಂಗ್ ಮಾಡುವ ಶೈಲಿಗೆ ಎದುರಾಳಿ ತಂಡದ ಬ್ಯಾಟ್ಸ್ಮನ್ ಗಳು ಹೆದರುವುದು ಟೆನ್ಷನ್ ಆಗುವುದಂತೂ ಖಂಡಿತ. ಸೋಲಿನ ಅಂಚಿನಲ್ಲಿದ್ದ ಹಲವು ಪಂದ್ಯಗಳನ್ನು ಚಾಹಲ್ ಅವರು ತಮ್ಮ ಬೌಲಿಂಗ್ ಮೂಲಕ ವಿಕೆಟ್ಸ್ ತೆಗೆದು ಗೆಲ್ಲುವ ಹಾಗೆ ಮಾಡಿದ್ದಾರೆ. ಬ್ಯಾಟರ್ ಗಳ ಪಾಲಿಗೆ ಸಿಂಹ ಸ್ವಪ್ನದ ಹಾಗಿರುವ ಚಾಹಲ್ ಅವರಿಗೆ ಭಾರತ ಸರ್ಕಾರವು ತೆರಿಗೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಹುದ್ದೆ ನೀಡಿದೆ.

ಉಮೇಶ್ ಯಾದವ್ :- ಇವರು ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಆಗಿ ಹೆಸರು ಮಾಡಿರುವವರು. ಉಮೇಶ್ ಯಾದವ್ ಅವರು ಟೆಸ್ಟ್ ಕ್ರಿಕೆಟ್ ಗೆ ಎಂಟ್ರಿ ಕೊಟ್ಟಿದ್ದು 2010ರಲ್ಲಿ ಸುರೇಶ್ ರೈನಾ ಅವರು ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದಾಗ, ಭಾರತದ ಪರವಾಗಿ ಹಲವು ಮ್ಯಾಚ್ ಗಳನ್ನಾಡಿರುವ ಉಮೇಶ್ ಯಾದವ್ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಪೊಲೀಸ್ ಆಫೀಸರ್ ಆಗಬೇಕು ಎಂದುಕೊಂಡಿದ್ದ ಇವರು ನಂತರ ಕ್ರಿಕೆಟರ್ ಆದರು, ಪ್ರಸ್ತುತ ಭಾರತ ಸರ್ಕಾರವು ಉಮೇಶ್ ಯಾದವ್ ಅವರಿಗೆ ಆರ್.ಬಿ.ಐ ನಲ್ಲಿ ಮ್ಯಾನೇಜರ್ ಪೋಸ್ಟ್ ನೀಡಿದೆ.

ಮಹೇಂದ್ರ ಸಿಂಗ್ ಧೋನಿ :- ಭಾರತ ತಂಡದ ಕೂಲ್ ಕ್ಯಾಪ್ಟನ್ ಎಂದೇ ಧೋನಿ ಅವರು ಹೆಸರು ಮಾಡಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡವು ಹಲವಾರು ಐಸಿಸಿ ಪಂದ್ಯಗಳನ್ನು ಟೂರ್ನಿಗಳನ್ನು ಗೆದ್ದಿದೆ. ಇವರಿಂದ ತಂಡಕ್ಕೆ ಸಿಕ್ಕಿರುವ ಐಸಿಸಿ ಪ್ರಶಸ್ತಿಗಳನ್ನು ಜನರು ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಧೋನಿ ಅವರು ಕ್ರಿಕೆಟ್ ಪ್ರಪಂಚಕ್ಕೆ ನೀಡಿರುವ ಕೊಡುಗೆ, ಅವರು ಮಾಡಿರುವ ಸಾಧನೆ ಅಗಾಧ. ಇಂತಹ ಶ್ರೇಷ್ಠ ನಾಯಕ ಧೋನಿ ಅವರಿಗೆ ಭಾರತ ಸರ್ಕಾರವು ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನಲ್ ಕರ್ನಲ್ ಆಗಿ ನೇಮಕ ಮಾಡಿದೆ.

ಜೋಗಿಂದರ್ ಶರ್ಮ :- ಇವರು ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರರಲ್ಲಿ ಒಬ್ಬರು. ಮೊದಲ ಬಾರಿಗೆ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿದ್ದು 2007 ರಲ್ಲಿ ಆಗ ಎಂಎಸ್ ಧೋನಿ ಅವರು ತಂಡದ ಕ್ಯಾಪ್ಟನ್ ಆಗಿದ್ದರು, ಆಗ ಗೆದ್ದ ತಂಡದ ಬಳಗದಲ್ಲಿ ಇದ್ದವರಲ್ಲಿ ಒಬ್ಬರು ಜೋಗಿಂದರ್ ಸಿಂಗ್. ಇವರು ಈಗ ಕ್ರಿಕೆಟ್ ಇಂದ ದೂರ ಉಳಿದಿದ್ದಾರೆ. ಭಾರತ ಸರ್ಕಾರವು, ಹರಿಯಾಣದಲ್ಲಿ ಇವರಿಗೆ ಡಿ.ಎಸ್.ಪಿ ಪೋಸ್ಟ್ ನೀಡಿದ್ದು, ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಚಿನ್ ತೆಂಡೂಲ್ಕರ್ :- ಕ್ರಿಕೆಟ್ ಲೋಕಕ್ಕೆ ಇವರು ನೀಡಿರುವ ಕೊಡುಗೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ, ಭಾರತ ತಂಡದ ಮಾಸ್ಟರ್ ಬ್ಲಾಸ್ಟರ್ ಎಂದು ಗುರುತಿಸಿಕೊಂಡವರು ಸಚಿನ್ ತೆಂಡೂಲ್ಕರ್. ಇವರನ್ನು ಕ್ರಿಕೆಟ್ ಲೋಕದ ದೇವರು, ಗಾಡ್ ಆಫ್ ಕ್ರಿಕೆಟ್ ಎಂದೇ ಕರೆಯುತ್ತಾರೆ. ಸಚಿನ್ ಅವರಷ್ಟು ಚಾಣಾಕ್ಷವಾಗಿ ಬ್ಯಾಟಿಂಗ್ ಮಾಡುವ ಬ್ಯಾಟ್ಸ್ಮನ್ ಮತ್ತೊಬ್ಬರಿಲ್ಲ ಎನ್ನುತ್ತಾರೆ ಕ್ರಿಕೆಟ್ ತಜ್ಞರು. ಇಂತಹ ವಿಶ್ವಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ಸರ್ಕಾರವು, ಭಾರತದ ವಾಯುಪಡೆಯಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆ ನೀಡಿದೆ.

ಕಪಿಲ್ ದೇವ್ :- ಭಾರತ ತಂಡದ ಮಾಜಿ ಕ್ಯಾಪ್ಟನ್ ಇವರು, ಕಪಿಲ್ ದೇವ್ ಅವರ ಕ್ಯಾಪ್ಟನ್ಸಿಯಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಭಾರತ ತಂಡ ಮೊದಲ ಸಾರಿ ಓಡಿಐ ವಿಶ್ವ ಚಾಂಪಿಯನ್ಶಿಪ್ ಗೆದ್ದಿದ್ದು ಸಹ ಇವರ ಕ್ಯಾಪ್ಟನ್ಸಿಯಲ್ಲಿ. ಶ್ರೇಷ್ಠ ಕ್ಯಾಪ್ಟನ್ ಎನ್ನಿಸಿಕೊಂಡಿರುವ ಕಪಿಲ್ ದೇವ್ ಅವರನ್ನು ಭಾರತ ಸರ್ಕಾರವು ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕ ಮಾಡಲಾಗಿತ್ತು.