ಶುರುವಾಯಿತು ಆಸ್ಟ್ರೇಲಿಯಾ ದಲ್ಲಿ ಭಾರತದ ತಿಣುಕಾಟ: ಅಭ್ಯಾಸ ಪಂದ್ಯದಲ್ಲಿ ಪ್ರದರ್ಶನ ಹೇಗಿತ್ತು ಗೊತ್ತೇ? ಇವರಿಂದ ಕಪ್ ಗೆಲ್ಲಲು ಸಾಧ್ಯನಾ??

ಶುರುವಾಯಿತು ಆಸ್ಟ್ರೇಲಿಯಾ ದಲ್ಲಿ ಭಾರತದ ತಿಣುಕಾಟ: ಅಭ್ಯಾಸ ಪಂದ್ಯದಲ್ಲಿ ಪ್ರದರ್ಶನ ಹೇಗಿತ್ತು ಗೊತ್ತೇ? ಇವರಿಂದ ಕಪ್ ಗೆಲ್ಲಲು ಸಾಧ್ಯನಾ??

ಭಾರತ ತಂಡವು ಆಸ್ಟ್ರೇಲಿಯಾ ತಲುಪಿ ವಿಶ್ವಕಪ್ ಗಾಗಿ ತಯಾರಿ ನಡೆಸುತ್ತಿದೆ. ಅದರಲ್ಲಿ ಭಾರತ ತಂಡ ವೆಸ್ಟರ್ನ್ ಆಸ್ಟ್ರೇಲಿಯಾ ಅಭ್ಯಾಸ ಪಂದ್ಯವಾಡಿದ್ದು, ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಗೆದ್ದಿದ್ದರು ಸಹ, ತಂಡದ ಪ್ರದರ್ಶನ ಚೆನ್ನಾಗಿರಲಿಲ್ಲ. ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 3ರನ್ ಗಳಿಸಿ ಔಟ್ ಆದರೂ, ಕೆ.ಎಲ್.ರಾಹುಲ್ ಅವರ ಅನುಪಸ್ಥಿತಿಯಲ್ಲಿ ಓಪನರ್ ಆಗಿ ಬಂದಿದ್ದ ರಿಷಬ್ ಪಂತ್ 17 ಎಸೆತಗಳಲ್ಲಿ ಕೇವಲ 9ರನ್ ಗಳಿಸಿ ಔಟ್ ಆದರು. ಬಳಿಕ ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಪಾರ್ಟ್ನರ್ಶಿಪ್ ಮುಂದುವರೆಯಿತು, ದೀಪಕ್ ಹೂಡಾ ಅವರು 22 ರನ್ ಗಳಿಸಿ ಔಟ್ ಆದರು, ಸೂರ್ಯಕುಮಾರ್ ಯಾದವ್ ಆಟ ಮುಂದುವರೆಸಿ, 35 ಎಸೆತಗಳಲ್ಲಿ ಅರ್ಧಶತಕ ಪೂರ್ತಿ ಮಾಡಿದರು. ನಂತರ ಐದನೆಯ ಪ್ಲೇಯರ್ ಆಗಿ ಬಂದ ಹಾರ್ದಿಕ್ ಪಾಂಡ್ಯ ಅವರು 20 ಬಾಲ್ ಗಳಲ್ಲಿ 29 ರನ್ ಗಳಿಸಿ ಔಟ್ ಆದರು.

ಅಂತಿಮ ಓವರ್ ಗಳಲ್ಲಿ ದಿನೇಶ್ ಕಾರ್ತಿಕ್ ಅವರು 19 ರನ್ ಸಿಡಿಸಿದರು, ಸ್ಟ್ರೈಕ್ ನಲ್ಲಿ ಉಳಿದ ಸೂರ್ಯಕುಮಾರ್ ಯಾದವ್ ಅವರು ಭರ್ಜರಿಯಾಗಿ 3 ಫೋರ್ ಗಳು ಮತ್ತು 3 ಸಿಕ್ಸರ್ ಗಳಿಂದ ಬರೊಬ್ಬರಿ 52ರನ್ಸ್ ಗಳಿಸಿದರು. ಈ ಮೂಲಕ 20 ಓವರ್ ಗಳಲ್ಲಿ ಭಾರತ ತಂಡ ಗಳಿಸಿದ್ದು, 6 ವಿಕೆಟ್ ನಷ್ಟಕ್ಕೆ 158 ರನ್ ಗಳು. 159 ರನ್ ಗಳ ಟಾರ್ಗೆಟ್ ಬೆನ್ನತ್ತಿದ ವೆಸ್ಟರ್ನ್ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ, ಆರ್ಷದೀಪ್ ಸಿಂಗ್ ಅವರು 3 ಓವರ್ ಗಳಲ್ಲಿ 6 ರನ್ ನೀಡಿ ಮೂರು ವಿಕೆಟ್ ಪಡೆದುಕೊಂಡರು. ಚಾಹಲ್ ಅವರು 3 ಓವರ್ ಗಳಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾ ತಂಡ ಆರಂಭದಲ್ಲಿ 12 ರನ್ ಗಳಿಸಿ, 4 ವಿಕೆಟ್ ಕಳೆದುಕೊಂಡಿತು. ಆದರೆ ಸ್ಯಾಮ್ ಫನ್ನಿಂಗ್ ಅವರು 58 ರನ್ ಗಳಿಸುವ ಮೂಲಕ ವೆಸ್ಟರ್ನ್ ಆಸ್ಟ್ರೇಲಿಯ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಿದರು.

ನಂತರ ಭುವನೇಶ್ವರ್ ಕುಮಾರ್ ಅವರು 2 ವಿಕೆಟ್ ಪಡೆದರು. ಒಟ್ಟಾರೆಯಾಗಿ ವೆಸ್ಟರ್ನ್ ಅಸ್ಟ್ರೇಲಿಯಾ ತಂಡವು, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 145 ರನ್ಸ್ ಗಳಿಸಿತು. ಈ ಮೂಲಕ ಭಾರತ ತಂಡ ಗೆದ್ದರು ಸಹ, ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ಇರಲಿಲ್ಲ ಎನ್ನುವದು ಗಮನಿಸಬೇಕಾದ ವಿಚಾರ. ಭಾರತ ತಂಡ ಸ್ಕೋರ್ ಮಾಡಿದ್ದು ಕೇವಲ 158 ರನ್ ಗಳು, ಗೆದ್ದಿದ್ದು 13 ರನ್ ಗಳ ಅಂತರದಲ್ಲಿ. ಭಾರತ ತಂಡ ಸ್ಟ್ರಾಂಗ್ ಆದ ತಂಡವಾಗಿದ್ದರು ಸಹ ಇಷ್ಟು ಕಡಿಮೆ ಸ್ಕೋರ್ ಮಾಡಿದ್ದು, ಆವರೇಜ್ ಅನ್ನಿಸಿಕೊಂಡಿದ್ದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡ 145 ಸ್ಕೋರ್ ಮಾಡಿತು. ಭಾರತ ತಂಡಕ್ಕೆ ಇದು ಒಳ್ಳೆಯ ಗೆಲುವಲ್ಲ ಎಂದೇ ಹೇಳಬಹುದು.

ಈ ರೀತಿಯ ಪರ್ಫಾರ್ಮೆನ್ಸ್ ಇದ್ದರೆ ವಿಶ್ವಕಪ್ ಪಂದ್ಯಗಳು ಶುರುವಾದ ಬಳಿಕ ಭಾರತ ತಂಡಕ್ಕೆ ಕಷ್ಟವಾಗುತ್ತದೆ. ಅಕ್ಟೋಬರ್ 23ರಂದು ಭಾರತ ತಂಡದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಲಿದ್ದು, ಅಷ್ಟರ ಒಳಗೆ ಇನ್ನು 3 ಅಭ್ಯಾಸ ಪಂದ್ಯಗಳನ್ನು ಭಾರತ ತಂಡ ಆಡಲಿದೆ, ಹಾಗಾಗಿ ಇನ್ನುಳಿದ 3 ಪಂದ್ಯಗಳಲ್ಲಿ ಭಾರತ ತಂಡದ ಪ್ರದರ್ಶನ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.