ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಟಿ 20 ಯಲ್ಲಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಟಿ 20 ಯಲ್ಲಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??
ಭಾರತ ಕ್ರಿಕೆಟ್ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರ ವಿರಾಟ್ ಕೋಹ್ಲಿ ಅವರು, ಸುಮಾರು 1 ದಶಕದಿಂದ ವಿರಾಟ್ ಕೋಹ್ಲಿ ಅವರೇ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾ ಸ್ಥಿರವಾಗಿ ನಿಂತ್ತಿದ್ದಾರೆ. ವಿರಾಟ್ ಅವರು ಕಳೆದ ಸೀರೀಸ್ ಗಳಾದ ಆಸ್ಟ್ರೇಲಿಯಾ ವಿರುದ್ಧ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸೀರೀಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಫಾರ್ಮ್ ಗೆ ಮರಳಿ ಬಂದು ತಂಡಕ್ಕೆ ಇದ್ದ ಆತಂಕ ಕಡಿಮೆ ಮಾಡಿದ್ದರು. 3ನೇ ಕ್ರಮಾಂಕಕ್ಕೆ ವಿರಾಟ್ ಕೋಹ್ಲಿ ಅವರೆ ಸೂಕ್ತ ಆದರೆ, ಒಂದು ವೇಳೆ ಯಾವುದಾದರೂ ಕಾರಣದಿಂದ ವಿರಾಟ್ ಕೋಹ್ಲಿ ಅವರು ಪಂದ್ಯಗಳಿಂದ ದೂರ ಉಳಿಯುವುದಾದರೆ, ಭಾರತ ತಂಡ ಆತಂಕ ಪಡಬೇಕಾದ ಅಗತ್ಯವಿಲ್ಲ. ಅವರ ಸ್ಥಾನ ತುಂಬಬಲ್ಲ ಮೂಬರು ಆಟಗಾರರು ತಂಡದಲ್ಲಿದ್ದಾರೆ, ಹಾಗಿದ್ದರೆ 3ನೇ ಸ್ಥಾನಕ್ಕೆ ಆಯ್ಕೆಯಾಗಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ..
ಸೂರ್ಯಕುಮಾರ್ ಯಾದವ್ :- ಈ ಕ್ರಮಕ್ಕೆ ಮೊದಲ ಆಯ್ಕೆ ಎಂದರೆ ಸೂರ್ಯಕುಮಾರ್ ಯಾದವ್, ಮಧ್ಯಮ ಕ್ರಮಾಂಕದಲ್ಲಿ ಆಡಿ ಅದ್ಭುತವಾಗಿ ರನ್ ಸ್ಕೋರ್ ಮಾಡುವ ಬ್ಯಾಟ್ಸ್ಮನ್ ಇವರು. ಕಳೆದ ಸೀರೀಸ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸೂರ್ಯಕುಮಾರ್ ಯಾದವ್ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಹ ಸೂಕ್ತವಾಗಿರುತ್ತಾರೆ. ಕಳೆದ ಕೆಲವು ಪಂದ್ಯಗಳಲ್ಲಿ ಭಾರತ ತಂಡದ ಓಪನಾಡ್ ಗಳ ವಿಕೆಟ್ ಬೇಗ ಉರುಳಿದಾಗ ಕ್ರೀಸ್ ಗೆ ಬಂದ ಸೂರ್ಯಕುಮಾರ್ ಯಾದವ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ, ಭಾರತ ತಂಡ ದೊಡ್ಡ ಮೊತ್ತ ಕಲೆಹಾಕಲು ಸಹಾಯ ಮಾಡಿದರು.
ದೀಪಕ್ ಹೂಡಾ :- 3ನೇ ಸ್ಥಾನಕ್ಕೆ ವಿರಾಟ್ ಕೋಹ್ಲಿ ಅವರ ಬದಲಾಗಿ ಎರಡನೇ ಆಯ್ಕೆ ಆಗಿಬಲ್ಲ ಬ್ಯಾಟ್ಸ್ಮನ್ ದೀಪಕ್ ಹೂಡಾ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈವರೆಗೂ 12 ಟಿ20 ಮ್ಯಾಚ್ ಗಳನ್ನು ಆಡಿರುವ ದೀಪಕ್ ಹೂಡಾ ಅವರ ಆವರೇಜ್ 41 ರನ್ ಗಳ ಮೇಲಿದೆ. ಈ ವರ್ಷ ಐರ್ಲೆಂಡ್ ಸೀರೀಸ್ ನಲ್ಲಿ ದೀಪಕ್ ಹೂಡಾ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಸೆಂಚುರಿ ಭಾರಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಈ ಮೂಲಕ ಸೆಂಚುರಿ ಭಾರಿಸಿದ ಭಾರತದ 4ನೇ ಆಟಗಾರ ಎನ್ನುವ ಖ್ಯಾತಿ ಪಡೆದುಕೊಂಡರು ಹೂಡಾ. ಹಾಗಾಗಿ ದೀಪಕ್ ಹೂಡಾ ಅವರು 3ನೇ ಕ್ರಮಾಂಕಕ್ಕೆ ಆಯ್ಕೆಯಾಗಿ, ವಿರಾಟ್ ಕೋಹ್ಲಿ ಅವರ ಸ್ಥಾನವನ್ನು ಪಡೆದುಕೊಳ್ಳಬಹುದು.
ರಿಷಬ್ ಪಂತ್ :- ವಿರಾಟ್ ಕೋಹ್ಲಿ ಅವರ 3ನೇ ಕ್ರಮಾಂಕದ ಸ್ಥಾನಕ್ಕೆ ಬರಬಹುದಾದ 3ನೇ ಆಟಗಾರ ರಿಷಬ್ ಪಂತ್. ಇವರು ಮಧ್ಯಮ ಕ್ರಮಾಂಕದ ಆಟಗಾರ ಆದರೂ ಕೂಡ ಆರಂಭ ಕ್ರಮಾಂಕಗಳಲ್ಲಿ ಸಹ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರು ಬಿಗ್ ಹಿಟ್ಸ್ ಸಹ ಹೊಡೆಯುವುದರಿಂದ, ಪಂತ್ ಅವರು 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಒಳ್ಳೆಯ ಆಯ್ಕೆ ಆಗುತ್ತಾರೆ. ಜೊತೆಗೆ ಭಾರತ ತಂಡದ ಓಪನರ್ ಕೆ.ಎಲ್.ರಾಹುಲ್ ಬಲಗೈ ಬ್ಯಾಟ್ಸ್ಮನ್ ಆಗಿದ್ದು, ರಿಷಬ್ ಪಂತ್ ಎಡಗೈ ಬ್ಯಾಟ್ಸ್ಮನ್ ಆಗಿರುವ ಕಾರಣ, ರೈಟ್ ಹ್ಯಾಂಡ್ ಮತ್ತು ಲೆಫ್ಟ್ ಹ್ಯಾಂಡ್ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗುತ್ತದೆ.