ಒಂದು ಕಡೆ ಶ್ರೇಯಸ್ ಹಾಗೂ ಇಶಾನ್ ಪಂದ್ಯ ಗೆಲ್ಲಿಸಿದರೆ ನಾಯಕ ಧವನ್ ಹೊಗಳಿದ್ದು ಯಾರನ್ನು ಗೊತ್ತೇ??

ಒಂದು ಕಡೆ ಶ್ರೇಯಸ್ ಹಾಗೂ ಇಶಾನ್ ಪಂದ್ಯ ಗೆಲ್ಲಿಸಿದರೆ ನಾಯಕ ಧವನ್ ಹೊಗಳಿದ್ದು ಯಾರನ್ನು ಗೊತ್ತೇ??

ಪ್ರಸ್ತುತ ಭಾರತ ವರ್ಸಸ್ ದಕ್ಷಿಣ ಆಫ್ರಿಕಾ ಮೂರು ಏಕದಿನ ಪಂದ್ಯಗಳು ನಡೆಯುತ್ತಿವೆ, ಈ ಪಂದ್ಯಗಳಿಗೆ ಭಾರತ ತಂಡದ ನೇತೃತ್ವ ಶಿಖರ್ ಧವನ್ ಅವರದ್ದು,3 ಏಕದಿನ ಸರಣಿಗಳಲ್ಲಿ ಮೊದಲ ಪಂದ್ಯವನ್ನು ಭಾರತ ಸೋತಿತು, ಆದರೆ ಎರಡನೇ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದಿದೆ. ಶ್ರೇಯಸ್ ಅಯ್ಯರ್ ಅವರು ಶತಕ ಸಿಡಿಸಿದ್ದು, ಇಶಾನ್ ಕಿಶನ್ ಅವರು ಸಹ ಉತ್ತಮ ಪ್ರದರ್ಶನ ನೀಡಿದ್ದು, ಶತಕದ ಅಂಚಿನಲ್ಲಿ ಔಟ್ ಆದರು. ಈ ಇಬ್ಬರು ಆಟಗಾರರು, ಇನ್ನು ಕೆಲವು ಬ್ಯಾಟ್ಸ್ಮನ್ ಗಳ ಭರ್ಜರಿ ಪ್ರದರ್ಶನದಿಂದ ಗೆದ್ದ ಭಾರತ, 1-1 ಸಮಬಲ ಸಾಧಿಸಿ, ಮುಂದಿನ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಮೊದಲಿಗೆ ಸೌತ್ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡಿತು ಹೆಂಡ್ರಿಕ್ಸ್ ಮತ್ತು ಮಾರ್ಕಮ್ ಅದ್ಭುತ ಪ್ರದರ್ಶನ ನೀಡಿದರು, ಇತ್ತ ನಮ್ಮ ತಂಡದ ಉತ್ತಮವಾದ ಬೌಲಿಂಗ್ ಪ್ರದರ್ಶನದಿಂದ ಸೌತ್ ಆಫ್ರಿಕಾ ತಂಡ 278 ರನ್ ಗಳನ್ನು ಸ್ಕೋರ್ ಮಾಡುವ ಹಾಗೆ ಮಾಡಿತು. ಭಾರತ ತಂಡದ ಬ್ಯಾಟಿಂಗ್ ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಜೊತೆಯಾಟ ಬರೋಬ್ಬರಿ 161 ರನ್ ಕಲೆಹಾಕಿತು, ನಂತರ ಬಂದ ಸಂಜು ಸ್ಯಾಮ್ಸನ್ ಸಹ ಉತ್ತಮ ಪ್ರದರ್ಶನ ನೀಡಿದರು. ಇದರಿಂದಾಗಿ ಭಾರತ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. ಪಂದ್ಯ ಮುಗಿದ ಬಲೋಕ ಕ್ಯಾಪ್ಟನ್ ಶಿಖರ್ ಧವನ್ ಅವರು ಸಂತೋಷದ ಮಾತುಗಳನ್ನಾಡಿದ್ದಾರೆ.

ಶಿಖರ್ ಧವನ್ ಅವರು ಫೀಲ್ಡಿಂಗ್ ಮತ್ತು ಬೌಲಿಂಗ್ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.. “ಸೌತ್ ಆಫ್ರಿಕಾ ಬ್ಯಾಟ್ಸ್ಮನ್ ಗಳ ವಿರುದ್ಧ ಅತ್ಯುತ್ತಮವಾಗಿ ಬೌಲಿಂಗ್ ಫೀಲ್ಡಿಂಗ್ ಮಾಡಿದ್ದು ಸಂತೋಷ ತಂದಿದೆ. ಬೌಲಿಂಗ್ ಪ್ರದರ್ಶನ ನನಗೆ ತುಂಬಾ ಸಂತೋಷ ತಂದಿದೆ, ವಿಶೇಷವಾಗಿ ಶಾಹಾಜ್ ಅಹ್ಮದ್ ಅವರ ಬೌಲಿಂಗ ಪ್ರದರ್ಶನ, ಮೊದಲ ಹತ್ತು ಓವರ್ ಗಳಲ್ಲಿ ಶಾಬಾಜ್ ಅವರ ಬೌಲಿಂಗ್ ದಾಳಿ ಇಂದ ನಮಗೆ ಜಯ ಸಿಕ್ಕಿತು..”ಎಂದಿರುವ ಶಿಖರ್ ಧವನ್ ಅವರು, ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ ಬಗ್ಗೆ ಸಹ ಒಳ್ಳೆಯ ಮಾತುಗಳನ್ನಾಡಿದ್ದಾರೆ.