ಸೋಲು ಹತ್ತಿರವಾಗುತ್ತಿದ್ದಂತೆ ಪಾರಾಗಲು ಕ್ರೀಡಾ ಸ್ಫೂರ್ತಿ ಮರೆತು ಆಸ್ಟ್ರೇಲಿಯಾ ವಾಡೆ ಏನು ಮಾಡಿದ್ದಾರೆ ಗೊತ್ತೇ?? ಕ್ರಿಕೆಟ್ ಲೋಕದ ಕರಾಳ ದಿನ.

ಸೋಲು ಹತ್ತಿರವಾಗುತ್ತಿದ್ದಂತೆ ಪಾರಾಗಲು ಕ್ರೀಡಾ ಸ್ಫೂರ್ತಿ ಮರೆತು ಆಸ್ಟ್ರೇಲಿಯಾ ವಾಡೆ ಏನು ಮಾಡಿದ್ದಾರೆ ಗೊತ್ತೇ?? ಕ್ರಿಕೆಟ್ ಲೋಕದ ಕರಾಳ ದಿನ.

ಟಿ20 ವಿಶ್ವಕಪ್ ಶುರು ಆಗುವುದಕ್ಕಿಂತ ಮೊದಲು ಆಸ್ಟ್ರೇಲಿಯಾ ವರ್ಸಸ್ ಸರಣಿ ಪಂದ್ಯಗಳು ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸೋಲು ಕಂಡಿದ್ದು, ಇಂಗ್ಲೆಂಡ್ ತಂಡ ಗೆದ್ದಿದೆ. ನಿನ್ನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ಮ್ಯಾಥ್ಯೂ ವೇಡ್ ಅವರು ಮಾಡಿದ ಅದೊಂದು ಕೆಲಸಕ್ಕೆ ಈಗ ಇಡೀ ಕ್ರಿಕೆಟ್ ಸಮೂಹವೇ ಇವರನ್ನು ಟೀಕೆ ಮಾಡುತ್ತಿದೆ. ಅಷ್ಟಕ್ಕೂ ವೇಡ್ ಅವರು ಮಾಡಿದ್ದೇನು ? ತಿಳಿಸುತ್ತೇವೆ ನೋಡಿ…

ಇಂಗ್ಲೆಂಡ್ ವರ್ಸಸ್ ಅಸ್ಟ್ರೇಲಿಯಾ ನಡುವಿನ ಮೂರು ಸರಣಿ ಪಂದ್ಯಗಳ ಮೊದಲ ಪಂದ್ಯ ನಿನ್ನೆ ನಡೆಯಿತು, ನಿನ್ನೆಯ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 209 ರನ್ ಗಳ ಗುರಿಯನ್ನು ಬೆನ್ನಟ್ಟಿತು ಆಸ್ಟ್ರೇಲಿಯಾ ತಂಡ, ಆಸ್ಟ್ರೇಲಿಯಾ ತಂಡದ ಪ್ರದರ್ಶನ ಹೇಳಿಕೊಳ್ಳುವಷ್ಟು ಚೆನ್ನಾಗೇನು ಇರಲಿಲ್ಲ. 17ನೇ ಓವರ್ ಸಮಯಕ್ಕಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭಯ ಶುರುವಾಗಿತ್ತು.17ನೇ ಓವರ್ ಬೌಲಿಂಗ್ ಮಾಡಿದವರು ಇಂಗ್ಲೆಂಡ್ ಆಟಗಾರ ಮಾರ್ಕ್ ವುಡ್, 17ನೇ ಓವರ್ ನ 3ನೇ ಚೆಂಡನ್ನು ವುಡ್ ಅವರು ಬೌನ್ಸರ್ ಹಾಕಿದರು, ಅದನ್ನು ಹೊಡೆಯಲು ಸ್ಟ್ರೈಕ್ ನಲ್ಲಿದ್ದ ವಾರ್ನರ್ ಅವರಿಗೆ ಸ್ವಲ್ಪ ಕಷ್ಟವಾಯಿತು, ಚೆಂಡು ವಾರ್ನರ್ ಅವರ ಹೆಲ್ಮೆಟ್ ಗೆ ತಾಗಿ ಮೇಲಕ್ಕೆ ಹಾರಿತು. ಆಗ ನಾನ್ ಸ್ಟ್ರೈಕ್ ನಲ್ಲಿದ್ದ ವೇಡ್ ಅವರು ರನ್ ಗಾಗಿ ಓಡಲು ಶುರು ಮಾಡಿದರು.

ಆಗ ವುಡ್ ಅವರು ಔಟ್ ಮಾಡುವ ಸಲುವಾಗಿ ಬಾಲ್ ಹಿಡಿಯಲು ನಾನ್ ಸ್ಟ್ರೈಕ್ ಕಡೆಗೆ ಓಡಿ ಬರುತ್ತಿದ್ದರು, ರನ್ ಗಾಗಿ ಓಡುತ್ತಿದ್ದ ವೇಡ್, ವುಡ್ ಅವರನ್ನು ನೋಡಿ ವಾಪಸ್ ನಾನ್ ಸ್ಟ್ರೈಕ್ ಕಡೆಗೆ ಓಡಿ ಬಂದು, ವುಡ್ ಅವರು ಬಾಲ್ ಅನ್ನು ಕ್ಯಾಚ್ ಹಿಡಿಯದ ಹಾಗೆ ತಮ್ಮ ಕೈ ಅಡ್ಡ ಮಾಡಿ ತಡೆದರು ವೇಡ್, ವೇಡ್ ಅವರು ಈ ರೀತಿ ತಪ್ಪಾಗಿ ಆಟವಾಡಿದ್ದು ಯಾರಿಗೂ ಇಷ್ಟವಾಗಲಿಲ್ಲ. ಈ ರೀತಿ ಮಾಡಿ ವಾರ್ನರ್ ಅವರನ್ನು ಉಳಿಸಿದರು ಸಹ, 17ನೇ ಓವರ್ ನ ಕೊನೆಯ ಬಾಲ್ ನಲ್ಲಿ ವಾರ್ನರ್ ಔಟ್ ಆದರು, ವೇಡ್ ಅವರಿಂದ ಆಸ್ಟ್ರೇಲಿಯಾ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ತಂಡವು, ವೇಡ್ ಅವರು ಫೀಲ್ಡಿಂಗ್ ಅಡ್ಡ ಪಡಿಸಿದ ಕಾರಣ ಇಂಗ್ಲೆಂಡ್ ತಂಡ ಅಪೀಲ್ ಮಾಡಿ ಅವರನ್ನು ಔಟ್ ಮಾಡಬಹುದಿತ್ತು. ಆದರೆ ಕ್ಯಾಪ್ಟನ್ ಜೋಸ್ ಬಟ್ಲರ್ ಅವರು, ಆ ರೀತಿ ಮಾಡದೆ ವೇಡ್ ಅವರಿಗೆ ಆಡುವ ಅವಕಾಶ ನೀಡಿದರು.