ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಶುರುವಾಯಿತು ವಿಶ್ವಕಪ್ ಕಾವು: ಎಲ್ಲಾ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ ಭಾರತದ ಸ್ಟಾರ್ ಪ್ಲೇಯರ್.

633

Get real time updates directly on you device, subscribe now.

ಟಿ20 ವಿಶ್ವಕಪ್ ಶುರುವಾಗಲು ಸ್ವಲ್ಪ ಸಮಯ ಮಾತ್ರ ಬಾಕಿ ಉಳಿದಿದೆ. ಭಾರತ ತಂಡ ಈಗಾಗಲೇ 14 ಸದಸ್ಯರ ಜೊತೆಗೆ ಆಸ್ಟ್ರೇಲಿಯಾ ತಲುಪಿದ್ದು, ಬ್ರಿಸ್ಟನ್ ನಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದೆ. ಭಾರತ ತಂಡದ 2007ರಲ್ಲಿ ಟಿ20 ವಿಶ್ವಕಪ್ ಶುರುವಾದ ಮೊದಲ ಸೀಸನ್ ನಲ್ಲಿ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು, ಅದಾದ್ ಬಳಿಕ 15 ವರ್ಷಗಳಿಂದ ಭಾರತ ತಂಡ ವಿಶ್ವಕಪ್ ಗೆದ್ದಿಲ್ಲ. ಈ ವರ್ಷ ಭಾರತ ತಂಡ ಭಾರತ ತಂಡದ ವಿಶ್ವಕಪ್ ಗೆಲ್ಲಲೇಬೇಕು ಎನ್ನುವ ಚಲದಿಂದ ಆಸ್ಟೇಲಿಯಾ ತಲುಪಿದೆ.

14 ಸದಸ್ಯರು ಮಾತ್ರ ಆಸ್ಟ್ರೇಲಿಯಾ ತಲುಪಿದ್ದಾರೆ, ಭಾರತ ತಂಡದ ಸ್ಟಾರ್ ಪ್ಲೇಯರ್ ಜಸ್ಪ್ರೀತ್ ಬುಮ್ರ ಅವರು ಬೆನ್ನು ನೋವಿನಿಂದ ಹೊರಗುಳಿದಿರುವ ಕಾರಣ ಅವರ ಬದಲಿ ಆಟಗಾರನನ್ನು ಭಾರತ ತಂಡ ಇನ್ನು ಪ್ರಕಟಣೆ ಮಾಡಿಲ್ಲ. ಇದೊಂದು ಗೊಂದಲ ತಂಡದಲ್ಲಿದೆ. ಇದರ ಜೊತೆಗೆ ಈಗ ಭಾರತ ತಂಡ ಪ್ರಾಕ್ಟೀಸ್ ಶುರು ಮಾಡಿದೆ. ಈ ವರ್ಷ ಭಾರತ ತಂಡ ಗೆಲ್ಲಲು ಆ ಒಬ್ಬ ಬ್ಯಾಟ್ಸ್ಮನ್ ಪ್ರಯತ್ನ ಬಹಳ ಮುಖ್ಯ ಎಂದು ಕ್ರಿಕೆಟ್ ಅಭಿಮಾನಿಗಳು, ತಜ್ಞರು ಮತ್ತು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ, ಅತ್ಯದ್ಭುತ ಫಾರ್ಮ್ ನಲ್ಲಿರುವ ಸೂರ್ಯಕುಮಾರ್ ಯಾದವ್ ಅವರು. ಆಸ್ಟ್ರೇಲಿಯಾ ತಲುಪಿದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಸಹ ಅಲ್ಲಿನ ಹವಾಮಾನ ಮತ್ತು ಪಿಚ್ ಬಗ್ಗೆ ಮಾತನಾಡಿದ್ದಾರೆ.

ಆಸ್ಟ್ರೇಲಿಯಾ ಹವಾಮಾನ ಬಹಳ ತಂಪಾಗಿದೆ ಎಂದು ಹೇಳಿರುವ ಸೂರ್ಯ ಅವರು, ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಭಾರತದ ಪಿಚ್ ಗಿಂತ ಅಲ್ಲಿನ ಪಿಚ್ ಬಹಳ ದೊಡ್ಡದಾಗಿದ್ದು, ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸೂರ್ಯಕುಮಾರ್ ಅವರು ಹೇಳಿದ್ದು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುತ್ತಿದ್ದಾರೆ, ಚೆನ್ನಾಗಿ ಆಡುವ ಭರವಸೆಯನ್ನು ಸಹ ತೋರಿಸಿದ್ದಾರೆ. ಆಸ್ಟ್ರೇಲಿಯಾ ಪಿಚ್ ಹೇಗಿದೆ ಎಂದರೆ ಭಾರತದ ಮೈದಾನದಲ್ಲಿ ಬೌಂಡರಿ ಲೆಂಥ್ 70 ಮೀಟರ್ ಗಿಂತ ಕಡಿಮೆ ಇರುತ್ತದೆ, ಆದರೆ ಆಸ್ಟ್ರೇಲಿಯಾದಲ್ಲಿ 70 ರಿಂದ 80 ಮೀಟರ್ ಇರುತ್ತದೆ, ಇಂಡಿಯಾದಲ್ಲಿ ಹೊಡೆಯುವ ಸಿಕ್ಸರ್ ಇಲ್ಲಿ ಕ್ಯಾಚ್ ಔಟ್ ಆಗಬಹುದು. ಹಾಗಾಗಿ ಆಟಗಾರರು ಉತ್ತಮವಾಗಿ ಆಡಬೇಕಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗು ವಿಶ್ವಕಪ್ ಪಂದ್ಯಗಳು ನಡೆಯಲಿದ್ದು, ಭಾರತದ ಮೊದಲ ಪಂದ್ಯ ಅಕ್ಟೋಬರ್ 23ರಂದು ಪಾಕಿಸ್ತಾನ್ ವಿರುದ್ಧ ನಡೆಯಲಿದೆ.

Get real time updates directly on you device, subscribe now.