ನಿಮಿಷಗಳಲ್ಲಿ ಕೋಟಿ ಮಾಡುವ ಕಲಾವಿದ: ಕಬ್ಜ ಸಿನಿಮಾದಲ್ಲಿ ಸುದೀಪ್ ನಟನೆ ಮಾಡಲು ಪಡೆದ ಕೋಟಿ ಕೋಟಿ ಸಂಭಾವನೆ ಎಷ್ಟು ಗೊತ್ತೇ??

ನಿಮಿಷಗಳಲ್ಲಿ ಕೋಟಿ ಮಾಡುವ ಕಲಾವಿದ: ಕಬ್ಜ ಸಿನಿಮಾದಲ್ಲಿ ಸುದೀಪ್ ನಟನೆ ಮಾಡಲು ಪಡೆದ ಕೋಟಿ ಕೋಟಿ ಸಂಭಾವನೆ ಎಷ್ಟು ಗೊತ್ತೇ??

ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿರುವ ಮತ್ತೊಂದು ಬಿಗ್ ಬಿಜೆಟ್, ಬಿಗ್ ಸ್ಟಾರ್ ಕಾಸ್ಟ್ ಹೊಂದಿರುವ, ಬಹು ನಿರೀಕ್ಷಿತ ಸಿನಿಮಾ ಕಬ್ಜ. ಈ ಸಿನಿಮಾದ ಟೀಸರ್ ಇತ್ತೀಚೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತು. ಸಿನಿಮಾ ಟೀಸರ್ ನೋಡಿದರೆ, ಇದೊಂದು ಗ್ಯಾಂಗ್ಸ್ಟರ್ ಕಥೆ ಎಂದು ತಿಳಿದುಬಂದಿದ್ದು, ರಿಯಲ್ ಸ್ಟಾರ್ ಉಪೇಂದ್ರ ಅವರು, ಕಿಚ್ಚ ಸುದೀಪ್ ಅವರು ಮುಖ್ಯ ಪಾತ್ರದಲ್ಲಿ, ನಾಯಕಿಯಾಗಿ ಬಹುಭಾಷಾ ನಟಿ ಶ್ರೀಯ ಸರನ್ ಕಾಣಿಸಿಕೊಂಡಿದ್ದಾರೆ. ಕಬ್ಜ ಸಿನಿಮಾದ ಟೀಸರ್ ಬಹಳ ರಿಚ್ ಆಗಿ ಮೂಡಿಬಂದಿದ್ದು, ವಿಷುವಲ್ಸ್ ನೋಡಿದರೆ, ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ ಸಿನಿಪ್ರಿಯರು..

ಕಬ್ಜ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಹಾಗೂ ಇನ್ನಿತರ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ, ಈ ವರ್ಷ ಕನ್ನಡ ಚಿತ್ರರಂಗದಲ್ಲಿ ತೆರೆಕಾಣಲಿರುವ, ದೊಡ್ಡ ಸಿನಿಮಾಗಳಲ್ಲಿ ಕಬ್ಜ ಸಹ ಒಂದಾಗುವುದರಲ್ಲಿ ಸಂಶಯ ಇಲ್ಲ. ರಿಯಲ್ ಸ್ಟಾರ್ ಉಪೇಂದ್ರ ಅವರು ಭಾರತ ಚಿತ್ರರಂಗದ ಮಟ್ಟದಲ್ಲಿ ಅತ್ಯದ್ಭುತ ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಇನ್ನು ಸುದೀಪ್ ಅವರು ಸಹ ಈ ಸಿನಿಮಾದಲ್ಲಿ ನಟಿಸಿರುವುದು ಕಬ್ಜ ಗೆ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ತಪ್ಪಾಗುವುದಿಲ್ಲ. ಕಬ್ಜ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಆಫೀಸರ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿ ಸುದೀಪ್ ಅವರು ವಿಶೇಷವಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಬ್ಜ ಒಂದು ಪೀರಿಯಾಡಿಕ್ ಸಿನಿಮಾ ಆಗಿದ್ದು, ಪ್ರತಿ ಪಾತ್ರವನ್ನು ಆರ್ಟಿಸ್ಟಿಕ್ ಆಗಿ ರಚಿಸಲಾಗಿದೆ. ಎಲ್ಲಾ ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಇನ್ನು ಸುದೀಪ್ ಅವರದ್ದು ಅತಿಥಿ ಪಾತ್ರ ಎಂದು ಹೇಳಲಾಗಿತ್ತು, ಆದರೆ ಟೀಸರ್ ನೋಡಿದರೆ ಅತಿಥಿ ಪಾತ್ರಕ್ಕಿಂತ ಹೆಚ್ಚಿನದನ್ನೇ ಸುದೀಪ್ ಅವರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಭಾರ್ಗವ್ ಭಕ್ಷಿ ಪಾತ್ರ ಸುದೀಪ್ ಅವರಿಗೂ ಬಹಳ ಸ್ಪೆಷಲ್, ಸುದೀಪ್ ಅವರು ಈ ಸಿನಿಮಾಗೆ ನೀಡಿರುವ ಸಂಭಾವನೆ ಬಗ್ಗೆ ಸಹ ಚರ್ಚೆಯಾಗುತ್ತಿದ್ದು, ಮೂಲಗಳ ಪ್ರಕಾರ ಸಿಕ್ಕಿರುವ ಮಾಹಿತಿ ಇಂದ ತಿಳಿದು ಬಂದಿರುವ ಮಾಹಿತಿ ಏನೆಂದರೆ, ಸುದೀಪ್ ಅವರು ಕಬ್ಜ ಸಿನಿಮಾದಲ್ಲಿ ನಟಿಸಲು 10 ರಿಂದ 12 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.