ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಆಸ್ಟ್ರೇಲಿಯಾ ದಲ್ಲಿ ಶುರುವಾಗಲಿರುವ ಮಹಾ ಕದನಕ್ಕೂ ಮುನ್ನ ಪಾಂಡ್ಯ-ಮ್ಯಾಕ್ಸ್ವೆಲ್ ಇವರಿಬ್ಬರಲ್ಲಿ ಯಾರು ಬೆಸ್ಟ್ ಎಂದು ತಿಳಿಸಿದ ರಿಕ್ಕಿ ಪಾಂಟಿಂಗ್.

353

Get real time updates directly on you device, subscribe now.

ಹಾರ್ದಿಕ್ ಪಾಂಡ್ಯ ಪ್ರಸ್ತುತ ಭಾರತ ತಂಡದ ಪ್ರಮುಖ ಆಲ್ ರೌಂಡರ್ ಎಂದು ಹೇಳಬಹುದು. ಕಳೆದ ವವರ್ಷ ಯುಎಇ ನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಉತ್ತಮ ಪ್ರದರ್ಶನ ನೀಡಲಾಗಲಿಲ್ಲ, ಅದಾದ ಬಳಿಕ ಬಹಳಷ್ಟು ಸಮಯ ವಿಶ್ರಾಂತಿ ಪಡೆದ ಹಾರ್ದಿಕ್ ಪಾಂಡ್ಯ, ಐಪಿಎಲ್ ಮೂಲಕ ಕಂಬ್ಯಾಕ್ ಮಾಡಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮೊದಲನೇ ಸಾರಿಯೇ ತಮ್ಮ ತಂಡ ಗೆಲ್ಲುವ ಹಾಗೆ ಮಾಡಿದರು. ಇದರಿಂದ ಭಾರತ ತಂಡಕ್ಕೆ ಪ್ರಮುಖ ಆಲ್ ರೌಂಡರ್ ಆಗಿ ಮತ್ತೆ ಆಯ್ಕೆಯಾದರು. ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಸಹ ಈಗ ಹಿಂದೆಗಿಂತ ಹೆಚ್ಚು ಸುಧಾರಿಸಿದ್ದು, 140ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು ಪಾಂಡ್ಯ.

ಇವರ ಹಾಗೆ ಹೆಚ್ಚು ಮನ್ನಣೆ ಗಳಿಸಿರುವ ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು. ಇವರು ಎಂಥಹ ಅದ್ಭುತ ಆಟಗಾರ ಎಂದು ನಮ್ಮೆಲ್ಲರಿಗೂ ಗೊತ್ತಿದೆ, ಆರ್.ಸಿ.ಬಿ ತಂಡದ ಪರವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಇಬ್ಬರು ಆಲ್ ರೌಂಡರ್ ಆಟಗಾರರ ಪೈಕಿ, ನೀವು ಇಷ್ಟ ಪಡುವ ಬೆಸ್ಟ್ ಬ್ಯಾಟ್ಸ್ಮನ್ ಯಾರು ಎಂದು ಖ್ಯಾತ ಹಿರಿಯ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್ ಅವರನ್ನು ಕೇಳಿದ್ದು, ಪಾಂಟಿಂಗ್ ಅವರು ಪಾಂಡ್ಯ ಬಗ್ಗೆ ಮಾತನಾಡಿದ್ದಾರೆ, “ಹಾರ್ದಿಕ್ ಪಾಂಡ್ಯ ಅವರು ಇತ್ತೀಚಿನ ದಿನಗಳಲ್ಲಿ ನೀಡುತ್ತಿರುವ ಪ್ರದರ್ಶನ ನೋಡಿದರೆ, ಅವರು ತಮ್ಮ ವೃತ್ತಿ ಜೀವನದ ಬೆಸ್ಟ್ ಫಾರ್ಮ್ ನಲ್ಲಿರುವ ಹಾಗೆ ತೋರುತ್ತಿದೆ. ಪಾಂಡ್ಯ ಅವರ ಫಾರ್ಮ್ ನೋಡಿದರೆ, ಬೌಲಿಂಗ್ ನಲ್ಲಿ ಅವರು ಹೆಚ್ಚು ಪ್ರಭಾವ ಬೀರುತ್ತಾರೆ ಎನ್ನಿಸುತ್ತಿದೆ, ಬ್ಯಾಟಿಂಗ್ ನಲ್ಲಿ ಸಹ ಉತ್ತಮ ಪ್ರಭಾವ ಬೀರುತ್ತಾರೆ..

ಭಾರತ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅವರು ಅತ್ಯುತ್ತಮ ಆಲ್ ರೌಂಡರ್, ತಂಡದ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ ಪಾಂಡ್ಯ. ಇನ್ನು ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರು, ಸ್ಫೋಟಕ ಆಲ್ ರೌಂಡರ್ ಆಗಿದ್ದಾರೆ. ಪಾಂಡ್ಯ ಅವರಿಗೆ ಕಂಪೇರ್ ಮಾಡಿ ನೋಡಿದರೆ, ಮ್ಯಾಕ್ಸ್ವೆಲ್ ಕಡಿಮೆ ಓವರ್ ಗಳನ್ನು ಎದುರಿಸುತ್ತಾರೆ, ಅವರು ಬ್ಯಾಟಿಂಗ್ ಮಾಡುವುದು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ..”ಎನ್ನುವುದು ರಿಕ್ಕಿ ಪಾಂಟಿಂಗ್ ಅವರ ಅಭಿಪ್ರಾಯ. ಇವರಿಬ್ಬರ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕು ಎಂದಾಗ, ಪಾಂಡ್ಯ ಅವರನ್ನು ಆಯ್ಕೆ ಮಾಡಿದ ರಿಕ್ಕಿ ಅವರು, ನಂತರ ಮ್ಯಾಕ್ಸ್ವೆಲ್ ಅವರ ಬಗ್ಗೆಯು ಹೇಳಿದ್ದಾರೆ..”ಮ್ಯಾಕ್ಸ್ವೆಲ್ ಸಹ ಟಿ20 ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಆಸ್ಟ್ರೇಲಿಯಾ ಪಿಚ್ ನಲ್ಲಿ ಮ್ಯಾಕ್ಸ್ವೆಲ್ ಅವರು ಪಾಂಡ್ಯ ಅವರಿಗಿಂತ ಹೆಚ್ಚು ರನ್ಸ್ ಗಳಿಸುತ್ತಾರೆ ಎನ್ನುವುದು ನನ್ನ ಭಾವನೆ.” ಎಂದು ರಿಕ್ಕಿ ಪಾಂಟಿಂಗ್ಸ್ ಹೇಳಿದ್ದಾರೆ.

Get real time updates directly on you device, subscribe now.