ಇನ್ನು ಒಂದು ತಿಂಗಳು ಈ 5 ರಾಶಿಗಳು ಮುಟ್ಟಿದೆಲ್ಲಾ ಚಿನ್ನ: ಬುಧ ದೇವ ಅದೃಷ್ಟ ಹೊತ್ತು ತರುತ್ತಿರುವುದು ಯಾರಿಗೆ ಗೊತ್ತೇ??

ಇನ್ನು ಒಂದು ತಿಂಗಳು ಈ 5 ರಾಶಿಗಳು ಮುಟ್ಟಿದೆಲ್ಲಾ ಚಿನ್ನ: ಬುಧ ದೇವ ಅದೃಷ್ಟ ಹೊತ್ತು ತರುತ್ತಿರುವುದು ಯಾರಿಗೆ ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ, ಯಾವುದೇ ಮನುಷ್ಯನ ಜೀವನದಲ್ಲಿ ಬುಧ ಗ್ರಹದ ಸ್ಥಾನ ಬಲಿಷ್ಠವಾಗಿದ್ದರೆ ಅವರಿಗೆ ಮಂಗಳಕರ ಫಲಗಳು ಸಿಗುತ್ತದೆ. ವಕ್ರ ನಡೆಯಲಿದ್ದ ಬುಧನು ಅಕ್ಟೋಬರ್ 2ರಂದು ಕನ್ಯಾ ರಾಶಿಯಲ್ಲಿ ನೇರನಡೆ ಶುರು ಮಾಡಿದ್ದಾನೆ. ಇದರಿಂದ ಮನುಷ್ಯರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಈ ಪರಿಣಾಮವು, ಕೆಲವು ಗ್ರಹಗಳ ಮೇಲೆ ಮಂಗಳಕರ ಪ್ರಭಾವ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಅಮಂಗಳಕರ ಪರಿಣಾಮ ಬೀರುತ್ತದೆ. ದೀಪಾವಳಿ ಹಬ್ಬ ಬರುವುದಕ್ಕಿಂತ ಮೊದಪು, ಕೆಲವು ರಾಶಿಗಳ ಸಂಪತ್ತು ಏಳಿಗೆ ಕಾಣಲಿದೆ, ಮುಟ್ಟಿದ್ದೆಲ್ಲ ಚಿನ್ನವಾಗಲಿದೆ. ಆ ರಾಶಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಈ ರಾಶಿಯ ಲಗ್ನದ ಭಾಗದಲ್ಲಿ ಬುಧ ಗ್ರಹ ಇದೆ. ಈಗ ಕನ್ಯಾ ರಾಶಿಗೆ ಬುಧನ ಆಗಮನ ಇರುವುದರಿಂದ, ಮಿಥುನ ರಾಶಿಯವರಿಗೆ ವಾಹನ ಖರೀದಿ ಮಾಡುವ ಯೋಗ ಇರಲಿದೆ. ಈ ಸಮಯದಲ್ಲಿ ನೀವು ಸಂತೋಷದ ಜೀವನ ಕಳೆಯುತ್ತೀರಿ, ಈಗ ನೀವು ಮಾಡುವ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಸಿಗುತ್ತದೆ.

ಕರ್ಕಾಟಕ ರಾಶಿ :- ಬುಧನ ಸಂಚಾರವು ಕರ್ಕಾಟಕ ರಾಶಿಯ ಮೂರನೆಯ ಮನೆಗೆ ತಲುಪುವುದರಿಂದ ಈ ರಾಶಿಯವರಿಗೆ ಲಾಭ ಸಿಗುತ್ತದೆ. ನಿಮ್ಮ ಜೀವನದ ಒಳ್ಳೆಯ ಸಮಯ ಈಗಿನಿಂದ ಶುರುವಾಗುತ್ತದೆ, ಸಹೋದರ ಸಹೋದರಿಯರ ಜೊತೆಗಿನ ಸಂಬಂಧ ಚೆನ್ನಾಗಿರುತ್ತದೆ. ಉದ್ಯೋಗದಲ್ಲಿ ಅಭಿವೃದ್ಧಿ ಹೊಂದುತ್ತೀರಿ.

ಕನ್ಯಾ ರಾಶಿ :- ಈಗ ಬುಧ ಗ್ರಹವು ನಿಮ್ಮ ರಾಶಿಯ ಲಗ್ನದ ಮನೆಯಲ್ಲಿ ಇರುವುದರಿಂದ ನಿಮ್ಮ ರಾಶಿಯ ಅದ್ಭುತವಾದ ಪರಿಣಾಮಗಳು ಬೀರುತ್ತದೆ. ಈ ವೇಳೆ ನಿಮ್ಮ ಸ್ವಭಾವದಲ್ಲಿ ಸಹ ಪಾಸಿಟಿವ್ ಆದ ಬದಲಾವಣೆಗಳು ಆಗುತ್ತದೆ. ಕೆಲಸ ಮತ್ತು ವಿದ್ಯಾಭ್ಯಾಸ ಎರಡರಲ್ಲೂ ಯಶಸ್ಸು ಪಡೆಯುತ್ತೀರಿ. ಆರ್ಥಿಕ ವಿಚಾರದ ಬಗ್ಗೆ ಹೇಳುವುದಾದರೆ, ಬಹಳ ಬೇಗ ಲಾಭ ಸಿಗುತ್ತದೆ.

ಮೀನ ರಾಶಿ :- ಬುಧ ಸಂಚಾರ ಈ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ನಿಮ್ಮ ಉದ್ಯೋಗದ ಬಗ್ಗೆ ಹೇಳುವುದಾದರೆ, ಈ ಸಮಯದಲ್ಲಿ ಬಹಳಷ್ಟು ಅವಕಾಶಗಳನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಬೆಳವಣಿಗೆ ಆಗುತ್ತದೆ.