ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಮ್ಮ ಫೇವರಿಟ್ ಆಲ್ ರೌಂಡರ್ ಯಾರು? ಪಾಂಡ್ಯನ? ಬೆನ್ ಸ್ಟೋಕ್ಸ್ ಹಾ? ಎಂದಿದ್ದಕ್ಕೆ ಶೇನ್ ವಾಟ್ಸನ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

33

ಪ್ರಸ್ತುತ ಬೆನ್ ಸ್ಟೋಕ್ಸ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರು ಪ್ರಪಂಚದ ಶ್ರೇಷ್ಠ ಆಲ್ ರೌಂಡರ್ ಗಳಾಗಿ ಗುರುತಿಸಿಕೊಂಡಿದ್ದಾರೆ. ಪಾಂಡ್ಯ ಅವರು ಜೂನ್ ತಿಂಗಳಿನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿ ಪಂದ್ಯಗಳ ಮೂಲಕ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿದರು. ಅಗಿನಿಂದಲು ಅದ್ಭುತವಾದ ಪ್ರದರ್ಶನ ನೀಡುತ್ತಿರುವ ಪಾಂಡ್ಯ ಅವರು, ಆಡುವ ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಭಾರತ ತಂಡವು ಅತ್ಯಂತ ನಂಬಿಕೆ ಇಟ್ಟಿರುವ ಫಿನಿಷರ್ ಆಗಿದ್ದಾರೆ ಪಾಂಡ್ಯ, ಒತ್ತಡ ಇರುವ ಪರಿಸ್ಥಿತಿ ಇರಲಿ, ಅಥವಾ ಆರಾಮದಾಯಕವಾಗಿ ಆಡುವ ಪರಿಸ್ಥಿತಿ ಇರಲಿ, ಪಾಂಡ್ಯ ಅವರು ಅದ್ಭುತವಾದ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸುತ್ತಾರೆ. ಹೀಗೆ ಪಾಂಡ್ಯ ಅವರು ಹಲವು ಪಂದ್ಯಗಳನ್ನು ಗೆಲ್ಲಿಸಿರುವುದನ್ನು ಈಗಾಗಲೇ ನೋಡಿದ್ದೇವೆ.

ಇನ್ನು ಬೆನ್ ಸ್ಟೋಕ್ಸ್ ಅವರ ಬಗ್ಗೆ ಹೇಳುವುದಾದರೆ, ಟೆಸ್ಟ್ ಕ್ರಿಕೆಟ್ ಫಾರ್ಮೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಲ್ ರೌಂಡರ್ ಆಗಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಇಂಗ್ಲೆಂಡ್ ತಂಡ ಸೌತ್ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಇತ್ತೀಚೆಗೆ ಸೋಲಿಸಿತು. ಇವರಿಬ್ಬರು ವಿಶ್ವದ ಟಾಪ್ ಪ್ಲೇಯರ್ಸ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾರಣ, ಇವರಿಬ್ಬರನ್ನು ಆಗಾಗ ಹೋಲಿಕೆ ಮಾಡಿ ಮಾತನಾಡಲಾಗುತ್ತದೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾಜಿ ಕ್ರಿಕೆಟಿಗ ಶೇನ್ ವಾಟ್ಸನ್ ಅವರಿಗೆ, ಇವರಿಬ್ಬರಲ್ಲಿ ನೀವು ಇಷ್ಟ ಪಡುವ ಕ್ರಿಕೆಟರ್ ಅನ್ನು ಆಯ್ಕೆ ಮಾಡಿ ಎಂದು ಪ್ರಶ್ನೆ ಕೇಳಲಾಯಿತು, ಆಸ್ಟ್ರೇಲಿಯಾದ ಮಾಜಿ ಆಲ್ ರೌಂಡರ್ ಶೇನ್ ವಾಟ್ಸನ್ ಅವರು ಟಿ20 ಫಾರ್ಮೆಟ್ ಬೆನ್ ಸ್ಟೋಕ್ಸ್ ಅವರನ್ನು ಹಿಂದಿಟ್ಟು ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಿದ್ದಾರೆ.

“ಹಾರ್ದಿಕ್ ಅವರು ಈಗ ತಮ್ಮ ಪವರ್ ನ ಪೀಕ್ ನಲ್ಲಿದ್ದಾರೆ, ಅವರು ಆಡುವುದನ್ನು ನೋಡಲು ಹಬ್ಬದ ಹಾಗೆ ಇರುತ್ತದೆ. ಆಲ್ ರೌಂಡರ್ ವೇಗಿಗಳು ಆಡುವುದನ್ನು ನೋಡಲು ನನಗೆ ಬಹಳ ಸಂತೋಷ ಆಗುತ್ತದೆ. ಇವರು ಎಂಥಹ ಇಂಪ್ಯಾಕ್ಟ್ ಮಾಡಬಲ್ಲರು ಎಂದರೆ, ಎದುರಾಳಿ ತಂಡದಿಂದ ಯಾವಾಗ ಬೇಕಾದರೂ ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸುವ ಸಾಮರ್ಥ್ಯ ಹೊಂದಿರುತ್ತಾರೆ, ಬ್ಯಾಟ್ ಅಥವಾ ಬಾಲ್ ಎರಡರಿಂದಲು ಇದನ್ನು ಮಾಡಬಲ್ಲರು. ಪ್ರಸ್ತುತ ಆಡುತ್ತಿರುವ ರೀತಿಯನ್ನು ನೋಡುವುದು ಆಹ್ಲಾದಕರವಾಗಿದೆ. ಟಿ20 ಕ್ರಿಕೆಟ್ ಪಂದ್ಯಗಳ ಬಗ್ಗೆ ಹೇಳುವುದಾದರೆ, ಬೆನ್ ಸ್ಟೋಕ್ಸ್ ಗಿಂತ ಹಾರ್ದಿಕ್ ಪಾಂಡ್ಯ ಮುಂದಿದ್ದಾರೆ, ಹಾರ್ದಿಕ್ ಅವರು ಬ್ಯಾಟಿಂಗ್ ಮಾಡುವ ರೀತಿ ಮತ್ತು ಕೊನೆಯಲ್ಲಿ ಬೌಲಿಂಗ್ ಮಾಡುವ ರೀತಿ ಇದೆಲ್ಲದರಿಂದಲೂ ಬೆನ್ ಸ್ಟೋಕ್ಸ್ ಅವರಿಗಿಂತ ಮುಂದಿದ್ದಾರೆ..” ಎಂದು ಹೇಳಿದ್ದಾರೆ ಶೇನ್ ವ್ಯಾಟ್ಸನ್.