ಆಸ್ಟ್ರೇಲಿಯಾ ಗೆ ಹೊರಡುವಾಗ ಕೊಹ್ಲಿ ಕಟ್ಟಿದ್ದ ಚಿನ್ನ ಲೇಪಿತ ವಾಚ್ ಬೆಲೆ ಎಷ್ಟು ಗೊತ್ತೇ?? ಅಂತಿಂತ ರೋಲ್ಸ್ ಅಲ್ಲ ಇದು.

ಆಸ್ಟ್ರೇಲಿಯಾ ಗೆ ಹೊರಡುವಾಗ ಕೊಹ್ಲಿ ಕಟ್ಟಿದ್ದ ಚಿನ್ನ ಲೇಪಿತ ವಾಚ್ ಬೆಲೆ ಎಷ್ಟು ಗೊತ್ತೇ?? ಅಂತಿಂತ ರೋಲ್ಸ್ ಅಲ್ಲ ಇದು.

ಅಕ್ಟೋಬರ್ 16ರಿಂದ ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಗಳನ್ನು ಗೆದ್ದ ಭಾರತ ತಂಡ ಈಗ ಆಸ್ಟ್ರೇಲಿಯಾಗೆ ಹಾರಿದೆ. ಗುರುವಾರ ಬೆಳಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್, ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಹಾಗು ಇಡೀ ಭಾರತ ತಂಡ ಆಸ್ಟ್ರೇಲಿಯಾಗೆ ತೆರಳಿದ್ದು, ಮುಂಚಿತವಾಗಿಯೇ ಹೋಗಿ ಅಭ್ಯಾಸ ಚಟುವಟಿಕೆ ಶುರು ಮಾಡಲಿದ್ದಾರೆ. ವಿಶ್ವಕಪ್ ಟೂರ್ನಿ ಶುರುವಾಗುವ ಮುಂಚೆ ಭಾರತ ತಂಡವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. 2007ರಲ್ಲಿ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ ತಂಡ ಮೊದಲ ಸಾರಿ ವಿಶ್ವಕಪ್ ಗೆದ್ದಿತ್ತು.

15 ವರ್ಷಗಳ ಬಳಿಕ ಈಗ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸಿನಲ್ಲಿ ಭಾರತ ತಂಡ ಆಸ್ಟ್ರೇಲಿಯಾಗೆ ಹಾರಿದೆ. ತಂಡವು ಆಸ್ಟ್ರೇಲಿಯಾಗೆ ಹೊರಡುತ್ತಿರುವ ಫೋಟೋವನ್ನು ಬಿಸಿಸಿಐ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿತ್ತು, ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರು ಸಹ ಸಹೋದ್ಯೋಗಿಗಳ ಜೊತೆಗೆ ವಿಮಾನದಲ್ಲಿರುವ ಫೋಟೋ ಶೇರ್ ಮಾಡಿದ್ದು, ಅವರ ಜೊತೆಗೆ ಹರ್ಷಲ್ ಪಟೇಲ್ ಮತ್ತು ಯುಜವೇಂದ್ರ ಚಾಹಲ್ ಇದ್ದಾರೆ, ಆಸ್ಟ್ರೇಲಿಯಾಗೆ ಹೊರಡುತ್ತಿದ್ದೇನೆ.. ಮುಂಬರುವ ದಿನಗಳು ಅದ್ಭುತವಾಗಿರಲಿದೆ.. ಎಂದು ಬರೆದುಕೊಂಡಿದ್ದಾರೆ ಕೋಹ್ಲಿ. ಈ ಫೋಟೋಗಳಲ್ಲಿ ಕೋಹ್ಲಿ ಅವರು ಬಹಳ ಹ್ಯಾಂಡ್ಸಮ್ ಆಗಿ ಸ್ಪೆಷಲ್ ಆಗಿ ಕಾಣಿಸುತ್ತಿದ್ದು, ವಿರಾಟ್ ಅವರ ಕೈಯಲ್ಲಿದ್ದ ಸುಂದರವಾದ ವಾಚ್ ನೆಟ್ಟಿಗರ ಗಮನ ಸೆಳೆಯಿತು.

ಅದರ ಬೆಲೆ ತಿಳಿದುಕೊಳ್ಳಬೇಕು ಎಂದು ನೆಟ್ಟಿಗರು ಗೂಗಲ್ ಸರ್ಚ್ ಮಾಡಿದ್ದು, ವಾಚ್ ನ ಬೆಲೆ ತಿಳಿದು ಶಾಕ್ ಆಗಿದ್ದಾರೆ. ಗೂಗಲ್ ಮಾಹಿತಿ ಪ್ರಕಾರ, ಇದು ರೋಲೆಕ್ಸ್ ಕಂಪನಿಗೆ ಸೇರಿದ ವಾಚ್ ಆಗಿದ್ದು, ವಿರಾಟ್ ಅವರ ವಾಚ್ ನ ಬೆಲೆ ಬರೋಬ್ಬರಿ 28 ಲಕ್ಷ ರೂಪಾಯಿ ಆಗಿದೆ. ಈ ವಾಚ್ ನ ಸ್ಪೆಷಾಲಿಟಿ ಏನೆಂದರೆ, ಇದನ್ನು ನಿಮ್ಮ ಇಷ್ಟದ ಹಾಗೆ ಕಸ್ಟಮೈಸ್ ಮಾಡಿ ಡಿಸೈನ್ ಮಾಡಿಕೊಡಲಾಗುತ್ತದೆ, ವಿರಾಟ್ ಕೋಹ್ಲಿ ಅವರು ಧರಿಸಿದ್ದ ವಾಚ್ ಚಿನ್ನ ಲೇಪಿತ ವಾಚ್ ಆಗಿರುವ ಕಾರಣ, ಅತ್ಯಂತ ದುಬಾರಿ ಬೆಲೆಯನ್ನೇ ಹೊಂದಿದೆ. ಮೊದಲಿನಿಂದಲೂ ಕೋಹ್ಲಿ ಅವರಿಗೆ ದುಬಾರಿ ವಾಚ್ ಗಳು ಎಂದರೆ ತುಂಬಾ ಇಷ್ಟ, ಕೋಹ್ಲಿ ಅವರ ಬಳಿ ಇಂತಹ ಹಲವು ವಾಚ್ ಗಳಿದ್ದು, ಅವರ ಬಳಿ ದುಬಾರಿ ಕಾರ್ ಗಳು ಸಹ ಸಾಕಷ್ಟಿವೆ.